Advertisement
ಹಟ್ಟಿಯಂಗಡಿಯ ಸಂಪರ್ಕ ಕೊಂಡಿಯ ಆದಿಯಲ್ಲಿ ಒಂದಿಷ್ಟು ದೂರ ವ್ಯಾಪ್ತಿಗೆ ಡಾಮರು ಮಾಡಲಾಗಿದ್ದರೂ ಅದಕ್ಕೆ ಚಾಚಿಕೊಂಡಿರುವ 4 ಕಿ. ಮೀ. ದೂರದ ಮುಖ್ಯರಸ್ತೆಯು ಡಾಮರು ಕಾಣದೇ ವರುಷಗಳು ಸಂದಿವೆ. ಕನಿಷ್ಠ ತೇಪೆ ಹಾಕುವ ಕಾರ್ಯಕ್ಕೂ ಇಲಾಖೆ ಹಾಗೂ ಗ್ರಾ.ಪಂ. ಜವಾಬ್ದಾರಿ ವಹಿಸಿ ಕಾರ್ಯನಿರ್ವಹಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾ.ಪಂ. ಹಾಗೂ ತಾಲೂಕು ಪಂಚಾಯತ್‌ಗೆ ಒಂದಿಷ್ಟು ನಿರ್ದಿಷ್ಟ ಅನುದಾನ ಹಂಚಿಕೆಯಾಗಿದ್ದು ರಸ್ತೆ ಡಾಮರು ಕಾಮಗಾರಿಗೆ ಆ ಮೊತ್ತವು ಎಲ್ಲೂ ಸಲ್ಲದು. ಹಾಗಾಗಿ ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯತ್ ಇಲಾಖೆಯ ಅಧಿಕಾರಿಗಳೊಡನೆ ಅನುದಾನವನ್ನು ಜೋಡಿಸಿ ರಸ್ತೆ ಕಾರ್ಯದ ನಿರ್ವಹಣೆಯ ಜವಾಬ್ದಾರಿ ವಹಿಸಬೇಕೆಂದು ಮನವಿ ಮಾಡಲಾಗಿದೆ ಎಂದು ತಾ.ಪಂ. ಸದಸ್ಯ ಕರುಣ ಪೂಜಾರಿ ತಿಳಿಸಿದ್ದಾರೆ.