Advertisement

ಆರೋಗ್ಯ ಇಲಾಖೆ ವಿರುದ್ಧ ಹತ್ತೂರು ಗ್ರಾಮಸ್ಥರು ಕಿಡಿ

10:14 AM Jul 05, 2020 | Suhan S |

ಹೊನ್ನಾಳಿ: ತಾಲೂಕಿನ ಹತ್ತೂರು ಗ್ರಾಮದ ವೃದ್ಧರೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಕರೆದುಕೊಂಡು ಹೋಗಿ ಈಗ ಆರೋಗ್ಯವಾಗಿದ್ದಾರೆ ಎಂದು ಮೂರೇ ದಿವಸಕ್ಕೆ ವಾಪಸ್‌ ಕಳುಹಿಸಲಾಗುತ್ತಿದೆ ಎಂಬ ವಿಷಯ ತಿಳಿದ ಗ್ರಾಮಸ್ಥರು, ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.

Advertisement

ಜೂ. 30 ರಂದು ಗ್ರಾಮದ ವೃದ್ಧರೊಬ್ಬರಿಗೆ ಪಾಸಿಟಿವ್‌ ಇದೆ ಎಂದು ಇಡೀ ಗ್ರಾಮಸ್ಥರ ಮುಂದೆ ಆ್ಯಂಬುಲೆನ್ಸ್‌ ತಂದು ಕರೆದುಕೊಂಡು ಹೋಗಿ ಈಗ ಆರೋಗ್ಯವಾಗಿದ್ದಾರೆ ಎಂದು ವಾಪಸ್‌ ಕಳುಹಿಸಿದ್ದಾರೆ. ಈ ಘಟನೆಯಿಂದ ತಾಲೂಕು ಕೇಂದ್ರದ ಬ್ಯಾಂಕ್‌, ತರಕಾರಿ ಮಾರ್ಕೆಟ್‌, ಕಿರಾಣಿ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಹತ್ತೂರು ಗ್ರಾಮಸ್ಥರು ಎಂದರೆ ದೂರ ಸರಿಯುತ್ತಾರೆ. ಅಲ್ಲದೆ ನಮ್ಮನ್ನು ಅನುಮಾನದ ದೃಷ್ಟಿಯಿಂದ ಕಾಣುತ್ತಿದ್ದಾರೆ. ಪರಿಸ್ಥಿತಿ ಈ ರೀತಿ ಇರಬೇಕಾದರೆ ಕೋವಿಡ್ ಸೋಂಕು ಇದೆ ಎಂದು ವ್ಯಕ್ತಿಯನ್ನು ಎಲ್ಲರ ಮುಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಈಗ ಆರೋಗ್ಯವಾಗಿದ್ದಾರೆ ಎಂದು ವಾಪಸ್‌ ಕಳುಹಿಸಿದರೆ ನಮ್ಮ ಗ್ರಾಮದ ಗೌರವ ಏನಾಗಬೇಕು, ಬೇರೆ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಬರುತ್ತಿಲ್ಲ. ಬಿತ್ತನೆ ಕಾಲ ಆಗಿರುವುದರಿಂದ ಬೇರೆ ರೈತರು ನಮ್ಮ ಗ್ರಾಮದ ಕಡೆ ಬರುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ತಾಲೂಕು ಪಂಚಾಯತ್‌ ಸದಸ್ಯ ಶಿವಾನಂದ ಮಾತನಾಡಿ, ಸರ್ಕಾರದ ಮಾರ್ಗಸೂಚಿ ಏನೇ ಇದ್ದರೂ ಒಂದು ಬಾರಿ ಕೊರೊನಾ ಸೋಂಕಿತ ಎಂದು ಕರೆದುಕೊಂಡು ಹೋದ ಮೇಲೆ ಆತನಿಗೆ ಸಂಪೂರ್ಣ ಚಿಕಿತ್ಸೆ ನೀಡಿ ಕಳುಹಿಸಬೇಕು. ಮೂರೇ ದಿನಕ್ಕೆ ಕೋವಿಡ್ ಸೋಂಕು ಇರುವ ವ್ಯಕ್ತಿ ಗುಣಮುಖ ಆಗಲು ಸಾಧ್ಯವೇ ಅಥವಾ ಸೋಂಕು ಇಲ್ಲದೆ ಇರುವ ವ್ಯಕ್ತಿಯನ್ನು ಸುಮ್ಮನೆ ಏತಕ್ಕೆ ಕರೆದುಕೊಂಡು ಹೋದಿರಿ ಎಂದು ಪ್ರಶ್ನಿಸಿದರು.

ಸರ್ಕಾರದ ಹೊಸ ಮಾರ್ಗಸೂಚಿಯಂತೆ ಪಾಸಿಟಿವ್‌ ಬಂದ ವ್ಯಕ್ತಿಯ ಆರೋಗ್ಯ 3 ದಿನದಲ್ಲಿ ಸುಧಾರಣೆಯಾದರೆ ಅಂತಹ ವ್ಯಕ್ತಿಯನ್ನು ಮನೆಗೆ ಕಳುಹಿಸಿ ಅಲ್ಲಿ ಕ್ವಾರಂಟೈನ್‌ ಮಾಡಬೇಕೆಂಬ ಆದೇಶ ಇದೆ. ಹಾಗಾಗಿ ಹತ್ತೂರು ಗ್ರಾಮದ ವೃದ್ಧರನ್ನು ಡಿಸಾcರ್ಜ್‌ ಮಾಡಿ ಕಳುಹಿಸಲಾಗಿದೆ. -ಡಾ| ಕೆಂಚಪ್ಪ, ತಾಲೂಕು ವೈದ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next