ನವದೆಹಲಿ:ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರಪ್ರದೇಶದ ಹತ್ರಾಸ್ ಯುವತಿಯ ಮೇಲಿನ ಗ್ಯಾಂಗ್ ರೇಪ್, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆ ಪೋಸ್ಟ್ ಮಾರ್ಟ್ಂ ವರದಿಯನ್ನು ಗುರುವಾರ(ಅಕ್ಟೋಬರ್ 02,2020)ದಂದು ಬಿಡುಗಡೆ ಮಾಡಿದ್ದು, ವರದಿಯಲ್ಲಿ ರೇಪ್ ನಡೆದಿಲ್ಲ ಎಂದು ಉಲ್ಲೇಖಿಸಿದೆ.
ಸಂತ್ರಸ್ತ ಯುವತಿಯ ಕುತ್ತಿಗೆ ಮತ್ತು ಆಕೆಯ ಬೆನ್ನುಮೂಳೆ ಮುರಿದಿರುವುದಾಗಿ ವರದಿಯಲ್ಲಿ ನಮೂದಿಸಲಾಗಿದೆ. ಅಲ್ಲದೇ ಆಕೆಯ ರಕ್ತ ಇನ್ ಫೆಕ್ಷನ್ ಆಗಿದ್ದು, ಆಕೆ ಹೃದಯಾಘಾತಕ್ಕೆ ಒಳಗಾಗಿದ್ದಳು. ವರದಿಯ ಪ್ರಕಾರ ಸೆಪ್ಟೆಂಬರ್ 29ರ ಬೆಳಗ್ಗೆ 6.55ಕ್ಕೆ ಸಾವು ಸಂಭವಿಸಿರುವುದಾಗಿ ತಿಳಿಸಿದೆ.
ಸಂತ್ರಸ್ತೆಯ ಕುತ್ತಿಗೆ ಭಾಗದಲ್ಲಿ ಗಾಯದ ಕಲೆಗಳಿವೆ. ಕತ್ತು ಹಿಸುಕುವ ಪ್ರಯತ್ನದಿಂದಾಗಿ ಈ ಗಾಯವಾಗಿರುವುದಾಗಿ ವರದಿಯಲ್ಲಿ ಹೇಳಿದೆ. ಹೃದಯ/ಶ್ವಾಸಕೋಶದ ರಾಸಾಯನಿಕ ವಿಶ್ಲೇಷಣೆಯಿಂದ ಸಾವಿಗೆ ಏನು ಕಾರಣ ಎಂಬುದನ್ನು ಖಚಿತಪಡಿಸಬಹುದು ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಹತ್ರಾಸ್ ಆಯ್ತು ಈಗ ರಾಜಸ್ಥಾನ ಆಸ್ಪತ್ರೆಯಲ್ಲಿ ಬಾಲಕಿಯ ಬೆತ್ತಲೆ ಶವ ಪತ್ತೆ, ರೇಪ್ ಶಂಕೆ!
ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತೆ ಯುವತಿಯ ಹೃದಯ/ಶ್ವಾಸಕೋಶ ರಕ್ಷಿಸಿ ಇಡಲಾಗಿದೆ. ಅಲ್ಲದೇ ಅಸ್ಪತ್ರೆಯ ವೈದ್ಯಾಧಿಕಾರಿಗಳು ತನಿಖಾಧಿಕಾರಿಗೆ ಹೆಚ್ಚಿನ ಪರೀಕ್ಷೆಗಾಗಿ ಸೂಕ್ಷ್ಮ ಸ್ಯಾಂಪಲ್ಸ್ ಗಳನ್ನು ಹಸ್ತಾಂತರಿಸಿರುವುದಾಗಿ ವರದಿ ವಿವರಿಸಿದೆ.