ನವದೆಹಲಿ : ಬುಡಕಟ್ಟು ಮಹಿಳೆಯೊಬ್ಬರು ಭಾರತದ ರಾಷ್ಟ್ರಪತಿಯಾಗಿರುವುದನ್ನು ಟಿಎಂಸಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಕಿಡಿ ಕಾರಿದ್ದಾರೆ.
ನಮ್ಮ ರಾಷ್ಟ್ರಪತಿ ಹೇಗೆ ಕಾಣುತ್ತಾರೆ? ಎಂದು ಟಿಎಂಸಿ ನಾಯಕ ಅಖಿಲ್ ಗಿರಿ ಅವರ ವಿವಾದಾತ್ಮಕ ಹೇಳಿಕೆ ವಿರುದ್ದ ಕಿಡಿ ಕಾರಿ, ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಟಿಎಂಸಿ ನಾಯಕ ಅಖಿಲ್ ಗಿರಿ ಅವರನ್ನು ಸೋಲಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ : ನಮ್ಮ ರಾಷ್ಟ್ರಪತಿ ಹೇಗೆ ಕಾಣುತ್ತಾರೆ?: ಪಶ್ಚಿಮ ಬಂಗಾಳ ಸಚಿವನ ವಿವಾದ; ವ್ಯಾಪಕ ಆಕ್ರೋಶ
ಪಶ್ಚಿಮ ಬಂಗಾಳದ ಸಿಎಂ ಮಹಿಳೆಯಾಗಿದ್ದಾರೆ. ಅವರ ಸಂಪುಟದ ಸಚಿವರೊಬ್ಬರು ನಮ್ಮ ಬುಡಕಟ್ಟು ಜನಾಂಗದ ಅಧ್ಯಕ್ಷರ ಮೇಲೆ ಇಂತಹ ದ್ವೇಷದ ಕಾಮೆಂಟ್ ಮಾಡಿದ್ದಾರೆ. ಇದು ನಮ್ಮ ಅಂತಾರಾಷ್ಟ್ರೀಯ ಗುರುತಿನ ಮೇಲೂ ಪರಿಣಾಮ ಬೀರುತ್ತದೆ. ಪಶ್ಚಿಮ ಬಂಗಾಳ ಸರ್ಕಾರವು ಆದಿವಾಸಿ ಸಮುದಾಯಗಳಿಗೆ ಕಿರುಕುಳ ನೀಡುವುದನ್ನು ಮುಂದುವರಿಸುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೇಲಿನ ದ್ವೇಷದ ಕಾಮೆಂಟ್ ಬಲವಾಗಿ ಖಂಡನೀಯ. ಡಬ್ಲ್ಯುಬಿ ಸಿಎಂ ಮಮತಾ ಬ್ಯಾನರ್ಜಿ ಅವರು ತಕ್ಷಣವೇ ಅಂತಹ ನಾಯಕರನ್ನು ತಮ್ಮ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಅಂತಹ ಕಾಮೆಂಟ್‌ಗಳಿಗಾಗಿ ರಾಷ್ಟ್ರದ ಮುಂದೆ ಕ್ಷಮೆಯಾಚಿಸಬೇಕು. ಅವರು ಸ್ಪಷ್ಟೀಕರಣವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.