ಶಿವಮೊಗ್ಗ: ಕೋವಿಡ್ ನಿರ್ವಹಣೆಗೆ ಮಾಡಿರುವ ಗ್ರಾಮ ಪಂಚಾಯತ್ ಮಟ್ಟದ ಕಾರ್ಯಪಡೆ ಸಭೆಯಲ್ಲಿ ಮಹಿಳೆಯೊಬ್ಬರು ಸಚಿವ ಈಶ್ವರಪ್ಪ ಎದುರೇ ಪಿಡಿ ಓ ರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.
ಹಸೂಡಿಯಲ್ಲಿ ಗ್ರಾ.ಪಂ ಮಟ್ಟದ ಕಾರ್ಯಪಡೆ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ಕರೊನಾ ಸೋಂಕು ನಿಯಂತ್ರಣದ ಬಗ್ಗೆ ಪಿಡಿಓ ಮಾಹಿತಿ ನೀಡುತ್ತಿದ್ದರು. ಸೋಂಕು ನಿಯಂತ್ರಣಕ್ಕೆ ಮನೆ ಮನೆಗೆ ತೆರಳಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ ಎಂದು ಪಿಡಿಓ ಹೇಳಿದಾಗ ಗ್ರಾಮದ ಮಹಿಳೆ ಮೀನಮ್ಮ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ:ನಟ ಸಂಚಾರಿ ವಿಜಯ್ ಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಮುಂದಾದ ಡಿಸಿಎಂ ಅಶ್ವತ್ಥನಾರಾಯಣ
ಸಚಿವರ ಎದುರು ಸುಳ್ಳು ಮಾಹಿತಿ ನೀಡುತ್ತಿದ್ದೀರಾ? ಸ್ಯಾನಿಟೈಸೇಷನ್ ಮಾಡದೇ ಮಾಡಿದ್ದೀವಿ ಎಂದು ಹೇಳುತ್ತಿದ್ದೀರಿ, ಎಲ್ಲಿ ಸ್ಯಾನಿಟೈಸೇಷನ್ ಮಾಡಿದ್ದೀರಾ ಹೇಳಿ, ಸುಮ್ಮನೆ ಸುಳ್ಳು ಹೇಳುತ್ತಿದ್ದೀರಿ, ಬರೀ ಫೋಟೊ ಹೊಡೆದು ಹಾಕಿದರೆ ಸಾಕೆ ಎಂದು ಮೀನಮ್ಮಅವರು ಸಚಿವರ ಎದುರೇ ಪಿಡಿಓರನ್ನು ತರಾಟೆಗೆ ತೆಗೆದುಕೊಂಡರು.
ಮಹಿಳೆಯ ತರಾಟೆ ಕಂಡು “ಆಯ್ತು ಸುಮ್ಮನಿರಮ್ಮ ನಾನು ಕೇಳುತ್ತೇನೆ, ನೀನೇ ಮಾತನಾಡಿದರೆ ಹೇಗೆ” ಎಂದು ಸಚಿವ ಈಶ್ವರಪ್ಪ ಮಹಿಳೆಯನ್ನು ಸಮಾಧಾನಪಡಿಸಿದರು.