ಬೆಂಗಳೂರು: ಹಾಸನ ಟಿಕೆಟ್ ವಿಚಾರ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಎಚ್.ಡಿ. ರೇವಣ್ಣ ಅವರು ಸೋಮವಾರ ರಾತ್ರಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದರು.
ಹಾಸನದಲ್ಲಿ ಮಾಜಿ ಶಾಸಕ ಪ್ರಕಾಶ್ ಪುತ್ರ ಸ್ವರೂಪ್ ಅವರಿಗೇ ಟಿಕೆಟ್ ಕೊಡಲು ಎಚ್.ಡಿ. ಕುಮಾರಸ್ವಾಮಿ ಪಟ್ಟು ಹಿಡಿದಿದ್ದು, ಭವಾನಿ ರೇವಣ್ಣ ಅವರಿಗೆ ಟಿಕೆಟ್ ಬೇಕು ಎಂದು ಎಚ್.ಡಿ. ರೇವಣ್ಣ ಹಠ ಹಿಡಿದಿದ್ದಾರೆ.
ಹೀಗಾಗಿ ಹಾಸನ ಟಿಕೆಟ್ ವಿಚಾರದಲ್ಲಿ ಈಗ ಅಂತಿಮ ತೀರ್ಮಾನವನ್ನು ಎಚ್.ಡಿ. ದೇವೇಗೌಡರೇ ತೆಗೆದುಕೊಳ್ಳಬೇಕಾಗಿದೆ. ಈ ಮಧ್ಯೆ ನಾಳೆ ಅಥವಾ ನಾಡಿದ್ದು 40 ಕ್ಷೇತ್ರಗಳ ಜೆಡಿಎಸ್ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಹಾಸನ ಕ್ಷೇತ್ರ ಅಭ್ಯರ್ಥಿ ಘೋಷಣೆ ಅನುಮಾನ ಎಂದು ಹೇಳಲಾಗಿದೆ.