ಹಾಸನ: ಜಿಲ್ಲೆಗೆ ಮುಂಬೈನಿಂದ ಬಂದವರಿಂದ ಕೋವಿಡ್ 19 ಕಂಟಕ ಕಾಡುತ್ತಲೇ ಇದೆ. ಸೋಮವಾರ ಮತ್ತೆ 15 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 172ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ವರದಿಯಾದ 15 ಪ್ರಕರಣಗಳ ಪೈಕಿ ಎಲ್ಲರೂ ಚನ್ನರಾಯಪಟ್ಟಣ ತಾಲೂಕು ಮೂಲದವರು.
ಆ ಪೈಕಿ ಒಬ್ಬ ಪೊಲೀಸ್ ಪೇದೆಗೂ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಪೊಲೀಸ್ ಪೇದೆಗೆ ಕೋವಿಡ್ 19 ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕವಿಲ್ಲ ಹಾಗೂ ಹೊರ ರಾಜ್ಯಗಳ ಪ್ರಯಾಣದ ಹಿನ್ನೆಲೆಯೂ ಇಲ್ಲ. ಆದರೂ ಕೋವಿಡ್ 19 ಪಾಸಿಟಿವ್ ಕಾಣಿಸಿ ಕೊಂಡಿದೆ. ಜಿಲ್ಲೆಯ ಎಲ್ಲ ಪೊಲೀಸರಿಗೂ ಕೋವಿಡ್ 19 ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಪೊಲೀಸ್ ಪೇದೆಗೆ ಕೋವಿಡ್ 19 ಸೋಂಕಿರು ವುದು ದೃಢಪಟ್ಟಿದೆ ಎಂದರು.
ಒಂದೇ ಕುಟುಂಬದ ಮೂವರಿಗೆ ಸೋಂಕು: 15 ಹೊಸ ಪಾಸಿಟಿವ್ ಪ್ರಕರಣಗಳಲ್ಲಿ 6 ಮಂದಿ ಹೊಸಬರು, 9 ಮಂದಿಗೆ 2ನೇ ಪರೀಕ್ಷೆ ಯಲ್ಲಿ ಸೋಂಕು ಪತ್ತೆಯಾಗಿದೆ. ಮುಂಬೈ ನಿಂದ ಬಂದು ನೇರವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ 6 ಮಂದಿಗೆ ಮೊದಲ ಪರೀಕ್ಷೆ ಯಲ್ಲಿಯೇ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಒಂದೇ ಕುಟುಂಬದ 49 ವರ್ಷದ ಪುರುಷ, 43 ವರ್ಷದ ಮಹಿಳೆ ಹಾಗೂ 32 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ ಎಂದು ಡೀಸಿ ವಿವರಿಸಿದರು.
ಕಾರಿನಲ್ಲಿ ಬಂದವರಿಗೆ ಸೋಂಕು: ಒಂದೇ ಕಾರಿನಲ್ಲಿ ಮುಂಬೈನಿಂದ ಮೇ 21 ರಂದು ಬಂದಿದ್ದ ಮೂವರ ಪೈಕಿ 31 ವರ್ಷದ ಮಹಿಳೆ ಹಾಗೂ 5 ವರ್ಷದ ಮಗುವಿನಲ್ಲೂ ಸೋಂಕು ಪತ್ತೆಯಾಗಿದೆ. ಒಬ್ಬ ಪೊಲೀಸ್ ಪೇದೆ ಸೇರಿ 6 ಮಂದಿ ಹೊಸಬರಲ್ಲಿ ಸೋಮವಾರ ಸೋಂಕು ಕಂಡು ಬಂದಿದೆ. 9 ಮಂದಿಗೆ ಕ್ವಾರಂಟೈನ್‌ನಿಂದ ಬಿಡುಗಡೆಯಾಗುವ ಮೊದಲು ನಡೆದ 2ನೇ ಪರೀಕ್ಷೆಯಲ್ಲಿ ಕೋವಿಡ್ 19 ಸೋಂಕು ಪತ್ತೆ ಯಾಗಿದೆ. ಎಲ್ಲರನ್ನೂ ಹಾಸನದ ಕೋವಿಡ್ 19 ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಒಟ್ಟು 45 ಮಂದಿ ಗುಣಮುಖ: ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 45 ಜನರನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ. ಮೊದಲ ಹಂತ ದಲ್ಲಿ 29 ಮಂದಿ ಬಿಡುಗಡೆಯಾಗಿದ್ದರೆ, ಭಾನುವಾರ ನಾಲ್ವರು ಹಾಗೂ ಸೋಮವಾರ 7 ಜನರು ಸೋಂಕು ಮುಕ್ತರಾಗಿ ಬಿಡುಗಡೆ ಯಾಗಿದ್ದಾರೆ ಎಂದು ತಿಳಿಸಿದರು.
11 ಪ್ರದೇಶ ಸೀಲ್‌ಡೌನ್: ಜಿಲ್ಲೆಗೆ ಈವರೆಗೆ ಹೊರ ರಾಜ್ಯಗಳಿಂದ 2,424 ಮಂದಿ ಬಂದಿದ್ದು, ಆ ಪೈಕಿ 1,524 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 900 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ಇನ್ನು 200 ಜನರ ಪರಿಕ್ಷಾ ವರದಿ ಬರಬೇಕಾಗಿದೆ. ಜಿಲ್ಲೆಯಲ್ಲಿ ರಡು ಪೊಲೀಸ್ ಠಾಣೆಗಳೂ ಸೇರಿ ಒಟ್ಟು 11 ಪ್ರದೇಶಗಳನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಿಸಿ ಸೀಲ್‌ಡೌನ್ ಮಾಡಲಾ ಗಿದೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು. ಅಂತಾರಾಜ್ಯಗಳ ನಡುವೆ ಸಂಚಾರಕ್ಕೆ ಈಗ ಪಾಸ್ ಪಡೆಯುವ ಅಗತ್ಯವಿಲ್ಲ. ಸೇವಾ ಸಿಂಧುವಿನಲ್ಲಿ ನೋಂದಣಿ ಮಾಡಿದರೆ ಸಾಕು.
ನೋಂದಣಿ ಮಾಡಿಕೊಂಡು ಜಿಲ್ಲೆಗೆ ಬರುವ ವರನ್ನು ಗಡಿ ಭಾಗದ ಚೆಕ್‌ಪೋಸ್ಟ್‌ನಲ್ಲಿ ಪರೀಕ್ಷೆಗೊಳಪಡಿಸಿ ಮಹಾರಾಷ್ಟ್ರದವರನ್ನು ಹೊರತುಪಡಿಸಿ 14 ದಿನಗಳ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುವುದು. ಮಹಾರಾಷ್ಟ್ರದಿಂದ ಬರುವವರನ್ನು 7 ದಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಟ್ಟು ಆನಂತರ 7 ದಿನಗಳ ಹೋಂ ಕ್ವಾರಂಟೈನ್ ಮಾಡಲಾಗುವುದು ಎಂದರು. ಎಸ್ಪಿ ಶ್ರೀನಿವಾಸಗೌಡ, ಡಿಎಚ್‌ಒ ಡಾ.ಸತೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.