ಅರಸೀಕೆರೆ: ಹಾಸನದ ಕಲಾಭವನದಲ್ಲಿ ಆ.16, 17 ರಂದು ‘ಹಾಸನ್ ಸ್ಟಾರ್ ಸಿಂಗರ್’ ಸ್ಪರ್ಧೆಗೆ ವಾಯ್ಸ ಆಫ್ ಅರಸೀಕೆರೆ ಸಂಸ್ಥೆ ವತಿಯಿಂದ ಆ.3 ರಂದು 3ಹಂತದಲ್ಲಿ ಪ್ರತಿಭೆಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಯುವ ನಟ ವಿಭವ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಯುವಪ್ರತಿಭೆಗಳನ್ನು ಗುರು ತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವೈಷ್ಣವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಹಾಸನ ಜಿಲ್ಲೆ ಸೇರಿದಂತೆ ಅರಸೀಕೆರೆ ತಾಲೂಕು ಚಲನಚಿತ್ರರಂಗಕ್ಕೆ ಅನೇಕ ಹಿರಿಯ ಹಾಗೂ ಕಿರಿಯ ಕಲಾವಿದರು, ನಿರ್ಮಾಪಕರನ್ನು ತನ್ನದೇ ಕೊಡುಗೆ ಯಾಗಿ ನೀಡಿದೆ. ಈ ನಿಟ್ಟಿನಲ್ಲಿ ಅರಸೀಕೆರೆ ತಾಲೂಕಿನಿಂದ ಭಾಗವಹಿಸುವ ಪ್ರತಿಭೆ ಗಳ ಆಯ್ಕೆಗೆ ವಾಯ್ಸ ಆಫ್ ಅರಸೀಕೆರೆ ಸಂಸ್ಥೆ ಮೂಲಕ ನಗರದ ಆದಿಚುಂಚನ ಗಿರಿ ಪೌಢಶಾಲೆ ಆವರಣದಲ್ಲಿ ಆ.3ರ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೂ ಕನ್ನಡ ಚಲನ ಚಿತ್ರಗಳ ಸ್ಪರ್ಧೆ ತೀರ್ಪು ಗಾರರಾಗಿ ಸರಿಗಮಪ ಸೀಸನ್ 14 ರ ರನ್ನರ್ ಆಪ್ ಸುಪ್ರೀತ್ ಪಾಲ್ಗುಣು ಭಾಗವಹಿಸುತ್ತಿದ್ದಾರೆಂದರು.
ಆ.17ಕ್ಕೆ ಗ್ರ್ಯಾಂಡ್ ಫಿನಾಲೆ:ಸ್ಪರ್ಧೆಯಲ್ಲಿ ವಿಜೇತರಾದವರನ್ನು ಆ.16 ರಂದು ಹಾಸನದ ಕಲಾಭವನದಲ್ಲಿ ನಡೆಯುವ ಸೆಮಿಫೈನಲ್ನಲ್ಲಿ ಪ್ರವೇಶಿಸಲಿದ್ದಾರೆ. ಸೆಮಿಫೈನಲ್ನಲ್ಲಿ ವಿಜೇತರಾದವರು ಆ.17 ರಂದು ನಡೆ ಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ವಾಯ್ಸ ಆಫ್ ಅರಸೀಕೆರೆ ಸಂಸ್ಥೆ ನಿರ್ದೇಶಕಿ ಕಾವ್ಯಾ, ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳನ್ನು 3 ವರ್ಷ ದಿಂದ 14 ಮತ್ತು 15 ವರ್ಷದಿಂದ 31 ಹಾಗೂ 31 ವರ್ಷದ ಮೇಲಿನ ವಯೋ ಮಾನಕ್ಕೆ ಅನುಗುಣವಾಗಿ ಮೂರು ತಂಡದಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡ ಲಾಗುತ್ತದೆ. ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರಾದ ಮೂರು ತಂಡಗಳಿಗೂ ಪ್ರಥಮ, ದ್ವೀತಿಯ, ತೃತೀಯ ಆಕರ್ಷಕ ನಗದು ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.
ಭಾಗವಹಿಸುವವರು ಮೊ.701996 1759, 9611722829ಕ್ಕೆ ಸಂಪರ್ಕಿಸಲು ಕೋರಿದರು. ವಾಯ್ಸ ಆಫ್ ಅರಸೀಕೆರೆ ಸಂಸ್ಥೆ ನಿರ್ದೇಶಕರಾದ ಸಚಿನ್, ಮನ್ಸೂರು, ವಿನೋದ್ ಇದ್ದರು.