Advertisement
ಆನಂತರ ಪ್ರತಿದಿನ ಸೋಂಕಿತರು ಪತ್ತೆ ಯಾಗುತ್ತಿದ್ದು, ಒಂದೇ ವಾರದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಅರ್ಧ ಶತಕ ದಾಟಿದೆ. ಬುಧವಾರ ವರದಿಯಾದ 21 ಪ್ರಕರಣಗಳ ಪೈಕಿ 16 ಮಂದಿ ಚನ್ನರಾಯಪಟ್ಟಣ ತಾಲೂ ಕಿನ ಮೂಲದವರಾಗಿದ್ದರೆ, ಇಬ್ಬರು ಹೊಳೆ ನರಸೀಪುರ ತಾಲೂಕಿನ ಮೂಲದವರು. ಇನ್ನು ಮೂವರು ಹಾಸನ ತಾಲೂಕಿನವರು. ಚನ್ನರಾಯಪಟ್ಟಣ ತಾಲೂಕು ಮೂಲದ 16 ಜನರು ಹಾಗೂ ಹೊಳೆನರಸೀಪುರ ತಾಲೂಕು ಮೂಲದ ಇಬ್ಬರು ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ಕೇಂದ್ರದಲ್ಲಿದ್ದರು.
Related Articles
Advertisement
400 ಜನರ ವರದಿ ಬರಬೇಕು: ವಿವಿಧ ರಾಜ್ಯಗಳಿಂದ ಬಂದು ಕ್ವಾರಂಟೈನ್‌ನಲ್ಲಿರುವ 400 ಜನರ ವರದಿ ಇನ್ನೂ ಬರಬೇಕಾಗಿದೆ. ಈಗ ಹೊರ ರಾಜ್ಯಗಳಿಂದ ಬರುವವರಿಗೆ ಪಾಸ್ ಕೊಡುವುದನ್ನು ನಿಲ್ಲಿಸಲಾಗಿದೆ. ಈಗಾಗಲೇ ಪಾಸ್ ಪಡೆದಿದ್ದವರೂ ಬರಬಾರದು ಎಂದು ಸೂಚನೆ ನೀಡಲಾಗಿದೆ. ಪಾಸ್ ಪಡೆದವರು ಬಂದರೂ ಅವರನ್ನು ಕ್ವಾರಂಟೈನ್‌ನಲ್ಲಿಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಕೋವಿಡ್ 19 ಸೋಂಕಿತರ ಚಿಕಿತ್ಸೆಗೆ ಹಿಮ್ಸ್ ಆಸ್ಪತ್ರೆಯಲ್ಲಿ 500 ಹಾಸಿಗೆಗಳ ವ್ಯವಸ್ಥೆ ಮಾಡ ಲಾಗಿದೆ. 350 ಹಾಸಿಗೆಗಳಿಗೆ ಹೈ ಆಕ್ಸಿಜನ್ ವ್ಯವಸ್ಥೆಯ ಸೌಲಭ್ಯಗಳಿದ್ದು, 150 ಹಾಸಿಗೆ ಗಳಿಗೆ ಸಾಮಾನ್ಯ ಆಕ್ಸಿಜನ್ ವ್ಯವಸ್ಥೆಯ ಸೌಲಭ್ಯವಿದೆ. ಸೋಂಕಿತರ ಸಂಖ್ಯೆ ಹೆಚ್ಚಾದರೂ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದರು. ಈವರೆಗೆ ಹಾಸನ ಜಿಲ್ಲೆಗೆ ಹೊರ ರಾಜ್ಯಗಳಿಂದ 1,541 ಜನರು ಬಂದಿದ್ದು, ಅವರೆಲ್ಲರೂ ಕ್ವಾರಂಟೈನ್‌ನಲ್ಲಿದ್ದಾರೆ ಎಂದರು.
ಮೂಡಿಗೆರೆಯ ವೈದ್ಯರೊಬ್ಬರಲ್ಲಿ ಕೋವಿಡ್ 19 ಪಾಸಿಟಿವ್ ಕಂಡು ಬಂದಿದ್ದು, ಹಾಸನ ಜಿಲ್ಲೆಯ ಜನರೂ ಆ ವೈದ್ಯರನ್ನು ಸಂಪರ್ಕಿ ಸಿದ್ದಾರೆ. ಅಂತಹ 15 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಈಗಾಗಲೇ ಗುರುತಿಸಲಾ ಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಸ್ ಕುಮಾರ್, ಹಾಸನ ವಿಭಾಗಾಧಿಕಾರಿ ಡಾ. ನವೀನ್ ಭಟ್ ಸುದ್ದಿಗೋಷ್ಠಿಯಲ್ಲಿದ್ದರು