Advertisement

ಮೃತ್ಯು ಕೂಪವಾಗುತ್ತಿರುವ ವರ್ತುಲ ರಸ್ತೆ

08:06 PM Feb 14, 2021 | Team Udayavani |

ಚನ್ನರಾಯಪಟ್ಟಣ: ಪಟ್ಟಣದ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ -75ರ ವರ್ತುಲ ರಸ್ತೆ ಮೃತ್ಯುಕೂಪವಾಗಿ ಪರಿಣಮಿಸಿದೆ. ವಾರದಲ್ಲಿ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಲೇ ಇದೆ.

Advertisement

ಬೆಂಗಳೂರು-ಹಾಸನ ಚತುಷ್ಪಥ ರಸ್ತೆ ನಿರ್ಮಾಣದ ವೇಳೆ ಪಟ್ಟಣ ಹೊರವಲಯದಲ್ಲಿ ವರ್ತುಲ ರಸ್ತೆ ನಿರ್ಮಿಸಿದ್ದರು. ಆ ವೇಳೆ ಚತುಷ್ಪಥ ಮಾಡುವುದನ್ನು ಬಿಟ್ಟು ದ್ವಿಮುಖ ರಸ್ತೆ ನಿರ್ಮಿಸಿದ್ದರಿಂದ ರಸ್ತೆ  ದಾಟು ವಾಗ ಗ್ರಾಮೀಣ ಭಾಗದ ಜನ ಜಾನುವಾರುಗಳು ವಾಹನಗಳಿಗೆ ಬಲಿಯಾಗುತ್ತಿವೆ.

ಅವೈಜ್ಞಾನಿಕ ಹಂಪ್‌: ಟೋಲ್‌ ಪಡೆಯುವ ಹೆದ್ದಾರಿ ಗಳಲ್ಲಿ ಹಂಪ್‌ ನಿರ್ಮಿಸುವಂತಿಲ್ಲ, ಅಗತ್ಯ ಇರುವ ಕಡೆಯಲ್ಲಿ ಅಂಡರ್‌ ಪಾಸ್‌ ಇಲ್ಲವೆ, ಫ್ಲೈಓವರ್‌ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡ ಬೇಕು. ಆದರೆ, ಬೆಳ್ಳೂರು ಕ್ರಾಸ್‌ನಿಂದ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಹಂಪ್‌ ಗಳನ್ನು ನಿರ್ಮಾಣ ಮಾಡಿದ್ದು, ಹಲವು ಅಪಘಾತಗಳಿಗೆ ಕಾರಣವಾಗಿದೆ.

ರಸ್ತೆ ನಿರ್ಮಿಸದೆ ಟೋಲ್‌ ಸಂಗ್ರಹ: ಬೆಂಗಳೂರಿ ನಿಂದ ಚತುಷ್ಪಥ ರಸ್ತೆ ನಿರ್ಮಿಸುವ ವೇಳೆ ನೆಲ ಮಂಗಲದಿಂದ ಬೆಳ್ಳೂರು ಕ್ರಾಸ್‌ವರೆಗೆ ಸರ್ವಿಸ್‌ ರಸ್ತೆ ನಿರ್ಮಿಸಿ, ಗ್ರಾಮಗಳ ಬಳಿ ಅಂಡರ್‌ಪಾಸ್‌ ಮಾಡಿ ದ್ದಾರೆ. ಅಲ್ಲದೆ, ಕುಣಿಗಲ್‌ ವರ್ತುಲ ರಸ್ತೆಯನ್ನು ಚತುಷ್ಪಥ ಮಾಡಲಾಗಿದೆ. ಆದರೆ, ಚನ್ನರಾಯಪಟ್ಟಣ ವರ್ತುಲ ರಸ್ತೆಯನ್ನು ಮಾತ್ರ ದ್ವಿಮುಖ ಮಾಡಲಾಗಿದ್ದು, ಟೋಲ್‌ ಕೂಡ ಸಂಗ್ರಹ ಮಾಡುತ್ತಿದ್ದಾರೆ.

ಭೂ ಸ್ವಾಧೀನವಾದ್ರೂ ರಸ್ತೆ ನಿರ್ಮಿಸಿಲ್ಲ: ಶೆಟ್ಟಿಹಳ್ಳಿ ಗ್ರಾಮದಿಂದ ಬರಗೂರು ಹ್ಯಾಂಡ್‌ಪೋಸ್ಟ್‌ವರೆಗೆ ಚತುಷ್ಪಥ ರಸ್ತೆಗಾಗಿ ದಶಕದ ಹಿಂದೆ ಭೂಸ್ವಾಧೀನ ಮಾಡಿಕೊಂಡಿದ್ದರು. ಆದರೆ, ದ್ವಿಮುಖ ರಸ್ತೆ ಮಾಡಿ ಕೈತೊಳೆದು ಕೊಂಡಿದ್ದಾರೆ. ಚತುಷ್ಪಥ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳು ದ್ವಿಮುಖ ರಸ್ತೆಯಲ್ಲೂ ಅದೇ ವೇಗವಾಗಿ ಬರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.

Advertisement

ವಾರಾಂತ್ಯದಲ್ಲಿ ಹೆಚ್ಚು ಅಪಘಾತ: ಈ ದ್ವಿಮುಖ ರಸ್ತೆಯಲ್ಲಿ ದಶಕದಿಂದ ಸಂಭವಿಸಿರುವ ಅಪಘಾತ ಗಳನ್ನು ಗಮನಿಸಿದರೆ ಶನಿವಾರ-ಭಾನುವಾರವೇ ಹೆಚ್ಚು ಸಂಭವಿಸಿರುವುದು ತಿಳಿದು ಬರುತ್ತದೆ. ಬೆಂಗಳೂರಿನ ಉದ್ಯೋಗಿಗಳು ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಾದ ಸಕಲೇಶಪುರ, ಚಿಕ್ಕಮಗಳೂರು, ಧರ್ಮಸ್ಥಳ, ಹೊರನಾಡು, ಸುಬ್ರಹ್ಮಣ್ಯ, ಉಡುಪಿ, ಮಂಗಳೂರಿಗೆ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಆ ಸಮಯದಲ್ಲಿ ವಾಹನ ದಟ್ಟಣೆ ಹೆಚ್ಚಿ ಅಪಘಾತಗಳು ಸಂಭವಿಸುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next