Advertisement
ಬೆಂಗಳೂರು ಉಪನಗರ ರೈಲು ಯೋಜನೆ ಕುರಿತಂತೆ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಹಲವು ರೈಲ್ವೇ ಯೋಜನೆಗಳ ಕುರಿತು ಮನವಿ ಮಾಡಿದ ಸಚಿವ ಎಂ.ಬಿ. ಪಾಟೀಲ್, ಬಂದರು ನಗರಿಗೆ ರೈಲ್ವೇ ಸಂಪರ್ಕ ಕಲ್ಪಿಸುವುದರಿಂದ ಉತ್ತರ ಕರ್ನಾಟಕ ಭಾಗಕ್ಕೂ ಅನುಕೂಲ ಆಗಲಿದ್ದು, ಅದೇ ರೀತಿ ಉತ್ತರ ಕರ್ನಾಟಕ ಭಾಗದ ಹಲವೆಡೆ ರೈಲ್ವೇ ವಿಸ್ತರಣೆ ಆಗಬೇಕಿದೆ ಎಂದು ಕೋರಿದರು.
ಮೋದಿ ಮಾಡಿದ್ದಾರೆ: ವಿ. ಸೋಮಣ್ಣ
ಪತ್ರಿಕಾಗೋಷ್ಠಿಯಲ್ಲಿ ಸಚಿವ ಎಂ.ಬಿ. ಪಾಟೀಲ್‌ರನ್ನು ಪಕ್ಕದಲ್ಲೇ ಕೂರಿಸಿಕೊಂಡೇ ರಾಜ್ಯ ಸರಕಾರವನ್ನು ಮಾತಿನಿಂದ ತಿವಿದ ವಿ. ಸೋಮಣ್ಣ, ದೇಶಾದ್ಯಂತ 40 ಸಾವಿರ ಜೋಡಿ ರೈಲ್ವೇ ಮಾರ್ಗ ನಿರ್ಮಿಸಿದ್ದು, ಶೇ. 90ರಷ್ಟು ವಿದ್ಯುದೀಕರಣ ಆಗಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ಹಾಗೂ ಹುಬ್ಬಳ್ಳಿ-ಧಾರವಾಡ ಮಾರ್ಗದ ಯೋಜನೆಗಳಿಗೆ ಭೂಸ್ವಾಧೀನ ಸಮಸ್ಯೆಯಿದ್ದು, ರಾಜ್ಯ ಸರಕಾರ ಅದನ್ನು ಬಗೆಹರಿಸಿಕೊಟ್ಟರೆ ತ್ವರಿತವಾಗಿ ಯೋಜನೆಗಳು ಪೂರ್ಣಗೊಳ್ಳಲಿವೆ.
Related Articles
Advertisement
ಹೆಜ್ಜಾಲ-ಕನಕಪುರ-ಸಾತನೂರು-ಚಾಮರಾಜನಗರ ರೈಲ್ವೇ ಯೋಜನೆಗಾಗಿ ಮಂಡಳಿ ಮುಂದೆ 400 ಕೋಟಿ ರೂ.ಗಳ ಪ್ರಸ್ತಾವನೆ ಮಂಡಿಸಿದ್ದೇನೆ. 10 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳ ಪೈಕಿ ಸಚಿವ ಎಂ.ಬಿ. ಪಾಟೀಲ್‌ರ ಕ್ಷೇತ್ರವಾದ ವಿಜಯಪುರಕ್ಕೂ ಒಂದು ಸಿಗಬಹುದು. ಒಟ್ಟಾರೆ ರೈಲ್ವೇ ಇಲಾಖೆಯಲ್ಲಿ ಕಳೆದ 50 ವರ್ಷದಲ್ಲಿ ಆಗದೇ ಇರುವ ಹಲವು ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಹಲವು ರಾಜ್ಯಗಳಲ್ಲಿ ಅಭಿವೃದ್ಧಿ ವಿಚಾರ ಬಂದಾಗ ರಾಜಕೀಯ ಪಕ್ಕಕ್ಕಿಡುತ್ತಾರೆ. ಕರ್ನಾಟಕದಿಂದಲೂ ಸಹಕಾರ ಸಿಗುತ್ತಿದೆ, ಮುಂದೆಯೂ ಸಿಗಬೇಕು ಎಂದು ಟಾಂಗ್ ನೀಡಿದರು.
ಸಕಲೇಶಪುರ-ಸುಬ್ರಹ್ಮಣ್ಯ ಸುರಂಗ ಮಾರ್ಗಸಭೆ ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪಾಟೀಲ್, ಮಂಗಳೂರಿಗೆ ರೈಲ್ವೇ ಸಂಪರ್ಕ ಇದ್ದರೂ ಜೋಡಿ ಮಾರ್ಗ ಆಗದೇ ಇರುವುದರಿಂದ ಸರಕು ಸಾಗಣೆ ಸೇರಿದಂತೆ ಕೈಗಾರಿಕಾ ಬೆಳವಣಿಗೆಯೂ ಕುಂಠಿತವಾಗಿದೆ. ಹೀಗಾಗಿ ಬೆಂಗಳೂರು-ಹಾಸನ-ಮಂಗಳೂರು ನಡುವಿನ ರೈಲ್ವೇಯನ್ನು ಜೋಡಿ ಮಾರ್ಗವಾಗಿ ಮಾರ್ಪಡಿಸಬೇಕು. ಇತ್ತೀಚೆಗೆ ಮಳೆಯಿಂದಾಗಿ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ಗುಡ್ಡ ಕುಸಿತ ಪ್ರಕರಣ ಹೆಚ್ಚುತ್ತಿದ್ದು, ಈ ಮಾರ್ಗದಲ್ಲಿ ಸುರಂಗ ನಿರ್ಮಾಣದ ಅಗತ್ಯವಿದೆ. ಅದೇ ರೀತಿ ಹುಬ್ಬಳ್ಳಿ-ಅಂಕೋಲಾ ನಡುವೆ ರೈಲ್ವೇ ಮಾರ್ಗ ನಿರ್ಮಿಸಿದರೆ ಉತ್ತರ ಕರ್ನಾಟಕಕ್ಕೂ ಅನುಕೂಲ ಎಂದರು.