Advertisement

ಹಾಸನ: ಸೋಂಕಿತರ ಸಂಖ್ಯೆ 157ಕ್ಕೆ ಏರಿಕೆ

07:43 AM May 31, 2020 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಶನಿವಾರ 13 ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ 157ಕ್ಕೇ ರಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ಶನಿವಾರ ವರದಿಯಾದ 13 ಪ್ರಕರಣಗಳ ಪೈಕಿ 7 ಮಂದಿ ಚನ್ನರಾಯಪಟ್ಟಣ ತಾಲೂಕು ಮೂಲದವರಾಗಿದ್ದರೆ, ಇನ್ನು 6 ಮಂದಿ ಆಲೂರು ತಾಲೂಕು ಮೂಲದವರು. ಇವರೆಲ್ಲರೂ ಮಹಾರಾಷ್ಟ್ರದಿಂದ ಹಾಸನಕ್ಕೆ ಬಂದು  ಕ್ವಾರಂಟೈನ್‌ನಲ್ಲಿದ್ದವರು.

Advertisement

ಕ್ವಾರಂ ಟೈನಲ್ಲಿದ್ದಾಗ ನೆಗೆಟಿವ್‌ ವರದಿ ಬಂದಿದ್ದರಿಂದ ಅವರನ್ನು ಬಿಡುಗಡೆ ಮಾಡಿ ಹೋಂ ಕ್ವಾರಂ ಟೈನ್‌ನಲ್ಲಿರಲು ಸೂಚಿಸಲಾಗಿತ್ತು. ಆದರೆ ಅವರಿಗೆ ಎರಡನೇ ಪರೀಕ್ಷೆಯಲ್ಲಿ ಕರೊನಾ ಪಾಸಿಟಿವ್‌ ವರದಿ  ಬಂದಿದೆ ಎಂದರು. ಹೊರ ರಾಜ್ಯಗಳಿಂದ ಬಂದವರನ್ನು 14 ದಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಡಲಾಗುತ್ತಿತ್ತು. ಆದರೆ ಈಗ ರಾಜ್ಯ ಸರ್ಕಾರದ ನಿರ್ದೇಶನದಂತೆ 7 ದಿನಗಳ ಕ್ವಾರಂಟೈನಲ್ಲಿರಿಸಿ ಬಿಡುಗಡೆ ಮಾಡಲಾಗುತ್ತಿದೆ. 7 ದಿನಗಳಲ್ಲಿ  ಪರೀಕ್ಷಾ ವರದಿ ಬರದಿದ್ದರೂ ಕ್ವಾರಂಟೈನ್‌ನಲ್ಲಿದ್ದವ ರನ್ನು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ದಿಂದ ನಿರ್ದೇಶನ ಬಂದಿದೆ ಎಂದರು.

ಆಲೂರು ಠಾಣೆ ಸೀಲ್‌ಡೌನ್‌: ಶುಕ್ರವಾರ ವರದಿಯಾದ ನಾಲ್ಕು ಪಾಸಿಟಿವ್‌ ಪ್ರಕರಣ ಗಳಲ್ಲಿ ನಿಪ್ಪಾಣಿಯ ಚೆಕ್‌ಫೋಸ್ಟ್‌ನಲ್ಲಿ ಕೆಲಸ ಮಾಡಿ ಬಂದಿದ್ದ ಪೊಲೀಸರೊಂದಿಗೆ ಸಂಪರ್ಕ ಹೊಂದಿದ್ದ ಆಲೂರು ಪೊಲೀಸ್‌ ಠಾಣೆಯ ಒಬ್ಬ  ಪೊಲೀಸ್‌ ಸಿಬ್ಬಂದಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಹಾಗಾಗಿ ಆಲೂರು ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದರು.

ಮುಂಬೈನಿಂದ ಬಂದವರಿಗೆ ಸೋಂಕು: ಮುಂಬೈನಿಂದ ಬಂದಿದ್ದ ದಂಪತಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿತ್ತು. ಆದರೆ ಅವರ ಜೊತೆ ಬಂದಿದ್ದ ಮಗುವಿಗೆ ನೆಗೆಟಿವ್‌ ವರದಿ ಬಂದಿದ್ದರಿಂದ ಸಂಬಂಧಿಕರು ಮನೆಗೆ ಕರೆದೊಯ್ದಿದ್ದರು. ಆದರೆ ಶುಕ್ರವಾರ ಮಗು ಮತ್ತು ಅದರ ಸಂಪರ್ಕದಲ್ಲಿದ್ದ ಮಗುವಿನ ಅಜ್ಜ ಮತ್ತು ಮಾವನಿಗೂ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಲೂರು ತಾಲೂಕು ಅಗಸರಹಟ್ಟಿ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದೆ.

9 ಕಂಟೈನ್ಮೆಂಟ್‌ ಝೋನ್‌: ಈಗ ಜಿಲ್ಲೆಯಲ್ಲಿ ಹಾಸನ ನಗರದಲ್ಲಿ ನಾಲ್ಕು ಪ್ರದೇಶ, ಹೊಳೆನರಸೀಪುರ ತಾಲೂಕಿನ ಮೂರು ಪ್ರದೇಶ ಹಾಗೂ ಆಲೂರು ತಾಲೂಕಿನ 2 ಪ್ರದೇಶ ಸೇರಿ 9 ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಿ ಕಂಟೈನ್‌ಮೆಂಟ್‌  ಝೋನ್‌ ಎಂದು ಘೋಷಣೆ ಮಾಡಿ ಕೋವಿಡ್‌ 19 ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದದು ಜಿಲ್ಲಾಧಿಕಾರಿ ಗಿರೀಶ್‌ ವಿವರ ನೀಡಿದರು. ಹಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್‌ 19 ಸೋಂಕಿತರ ಪೈಕಿ 30 ಮಂದಿ ಗುಣಮುಖರಾಗಿ  ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು, ಇನ್ನು 127 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು. ಡಿಎಚ್‌ಒ ಡಾ.ಸತೀಶ್‌ ಕುಮಾರ್‌ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next