ಹಾಸನ: ಮಹಾರಾಷ್ಟ್ರದ ಮುಂಬೈನಿಂದ ಜಿಲ್ಲೆಗೆ ಬಂದಿದ್ದ ಐವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಮುಂಬೈನಿಂದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿಗೆ ಇವರು ಬಂದಿದ್ದರು ಎನ್ನಲಾಗಿದೆ.
4 ವರ್ಷ ಮತ್ತು 7 ವರ್ಷ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಐವರಿಗೆ ಸೋಂಕು ತಾಗಿದೆ. ಮುಂಬೈನಿಂದ ಬಂದ ಇವರು ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಯಾರ ಸಂಪರ್ಕದಲ್ಲಿ ಇರಲಿಲ್ಲ. ಜನತೆಗೆ ಆತಂಕ ಬೇಡ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
14 ದಿನ ನಂತರ ಗಂಟಲು ಪರೀಕ್ಷೆ ಮಾಡಬೇಕಿತ್ತು ಆದರೆ ಮಹಾರಾಷ್ಟ್ರದಿಂದ ಬಂದ ತಕ್ಷಣ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆ ಮಾಡಿದ ಹಿನ್ನೆಲೆ ಜಿಲ್ಲೆಯಲ್ಲಿ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಚನೆ ನೀಡಿದ್ದಾರೆ.
ಮಹಾರಾಷ್ಟ್ರ ಮೂಲದಿಂದ ಸುಮಾರು 200 ಮಂದಿ ಬಂದಿದ್ದಾರೆ ಎಲ್ಲರನ್ನ್ಊ ಪರೀಕ್ಷೆ ಮಾಡಲಾಗುತ್ತಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಇಂದು 42 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದಿರಿಂದ ರಾಜ್ಯದಲ್ಲಿ ಒಟ್ಟು 904 ಪ್ರಕರಣಗಳು ದೃಢವಾಗಿದೆ. ಇದುವರೆಗೆ ಸೋಂಕಿನ ಕಾರಣದಿಂದ 31 ಜನರು ಸಾವನ್ನಪ್ಪಿದ್ದು, 426 ಜನರು ಗುಣಮುಖರಾಗಿದ್ದಾರೆ. ಓರ್ವ ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾನೆ