Advertisement

ಜಿಲ್ಲೆಯಲ್ಲಿ ಹೆಚ್ಚಿದ ಮನೆ ಕಳವು ಪ್ರಕರಣ

04:43 PM Mar 10, 2021 | Team Udayavani |

ಹಾಸನ: ನಗರ ಸೇರಿದಂತೆ ಜಿಲ್ಲೆಯಲ್ಲಿ ಮನೆ ಕಳವು ಪ್ರಕರಣಗಳ ಸಂಖ್ಯೆಹೆಚ್ಚಿದ್ದು, ಪೊಲೀಸ್‌ ಇಲಾಖೆ ಕಡಿವಾಣಹಾಕಬೇಕಿದೆ. ಭಾನುವಾರ ಮತ್ತುಸೋಮವಾರ ವಿವಿಧೆಡೆಗಳಲ್ಲಿ ಕಳವು ಪ್ರಕರಣ ದಾಖಲಾಗಿದ್ದು, ಲಕ್ಷಾಂತರ ರೂ. ನಗದು, ಚಿನ್ನಾಭರಣ ದೋಚಲಾಗಿದೆ.

Advertisement

5.98 ಲಕ್ಷ ರೂ. ಆಭರಣ ಕಳವು: ಮನೆಯ ಬೀಗ ಮುರಿದು 5,98,000ರೂ. ಬೆಲೆಯ ಚಿನ್ನಾಭರಣ ಕಳವು ಮಾಡಿರುವ ಪ್ರಕರಣ ಹಾಸನದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದಿದೆ.

ಹಾಸನದ ವಿಶ್ವೇಶ್ವರಯ್ಯ ಬಡಾವಣೆ ವಾಸಿ ಸಂಕಾಶ್‌ ಎಸ್‌. ಭಾರದ್ವಾಜ್‌ ಎಂಬವರು ಮಾ.5 ರಂದು ಮನಗೆ ಬೀಗ ಹಾಕಿಕೊಂಡು ಬೆಂಗಳೂರಿಗೆಹೋಗಿದ್ದರು. ಅವರು ವಾಪಸ್‌ ಮನೆಗೆ  ಬಂದು ನೋಡಿದಾಗ ಮನೆಯ ಬಾಗಿಲ ಬೀಗವನ್ನು ಮುರಿದು ಒಳನುಗ್ಗಿದ್ದ ಕಳ್ಳರು ಬೀರುವಿನಲ್ಲಿಟ್ಟಿದ್ದ 5,98,000ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಆಭರಣಗಳನ್ನು ಕಳವು ಮಾಡಿದ್ದರು.ಈ ಸಂಬಂಧ ಹಾಸನದ ಪೆನ್‌ಷನ್‌ ಮೊಹಲ್ಲಾ ಪೊಲೀಸ್‌ ಠಾಣೆಯಲ್ಲಿಸೋಮವಾರ ಪ್ರಕರಣ ದಾಖಲಾಗಿದೆ.

 ದರೋಡೆ ಅಲ್ಲ, ಮನೆ ಬೀಗ ಮುರಿದು ಚಿನ್ನಾಭರಣ ಕಳವು; ಸ್ಪಷ್ಟನೆ :

ಹಾಸನ: ಮನೆಯ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿರುವ ಪ್ರಕರಣ ಅರಸೀಕೆರೆ ತಾಲೂಕು ಜಾವಗಲ್‌ ಹೋಬಳಿ ಅರಕೆರೆ ಗ್ರಾಮದಲ್ಲಿ ನಡೆದಿದೆ.

Advertisement

ಅರಕೆರೆ ಗ್ರಾಮದ ಸಿದ್ದಲಿಂಗಮ್ಮ ಎಂಬವರು ಸೋಮವಾರ ಬೆಳಗ್ಗೆ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಅರಸೀಕೆರೆಗೆ

ಹೋಗಿದ್ದರು. ಅವರು ವಾಪಸ್‌ ಮನೆಗೆ ಬಂದು ನೋಡಿದಾಗ ಕಳ್ಳರು ಮನೆಯೊಳಗೆ ನುಗ್ಗಿ ಬೀರುವಿನ ಬೀಗ ಮುರಿದು 46 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು. ನಾಲ್ಕೈದು ಮಂದಿ ದರೋಡೆಕೋರರು ಮನೆಗೆ ನುಗ್ಗಿ ಚಾಕು ತೋರಿಸಿ 50 ಸಾವಿರ ರೂ. ನಗದು ಹಾಗೂ 70 ಗ್ರಾಂ ಚಿನ್ನಾಭರಣ ದೋಚಿದ್ದರು ಎಂದು ವರದಿಯಾಗಿತ್ತು. ಆದರೆ, ದರೋಡೆ ನಡೆದಿಲ್ಲ. ಮನೆಯ ಬೀಗ ಮುರಿದು 46 ಗ್ರಾಂ ಚಿನ್ನಾಭರಣ ಕಳವಾಗಿವೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಈ ಸಂಬಂಧ ಜಾವಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಕಲೇಶಪುರ: 98 ಗ್ರಾಂ ಚಿನ್ನಾಭರಣ ಕಳವು :

ಮನೆಯ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿರುವ ಪ್ರಕರಣ ಸಕಲೇಶಪುರದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ನಡೆದಿದೆ. ಮಲ್ಲಿಕಾರ್ಜುನ ಬಡಾವಣೆವಾಸಿ ಸಾವಿತ್ರಮ್ಮ ಎಂಬವರು ಭಾನುವಾರ ಮಧ್ಯಾಹ್ನಮನೆಗೆ ಬೀಗ ಹಾಕಿಕೊಂಡು ಸಕಲೇಶಪುರದಚಂಪಕನಗರ ಬಡಾವಣೆಯಲ್ಲಿರುವ ಸಂಬಂಧಿಕರ ಆರಾಧನೆ ಕಾರ್ಯಕ್ಕೆ ಹೋಗಿದ್ದರು. ಅವರು ವಾಪಸ್‌ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲ ಬೀಗವನ್ನು ಮುರಿದು ಒಳ ನುಗ್ಗಿರುವ ಕಳ್ಳರು ಬೀರುವಿನಲ್ಲಿಟ್ಟಿದ್ದ 98 ಗ್ರಾಂ ಚಿನ್ನಾಭರಣಗಳನ್ನು ಕಳವುಮಾಡಿದ್ದರು. ಈ ಸಂಬಂಧ ಸಕಲೇಶಪುರ ನಗರಪೊಲೀಸ್‌ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next