Advertisement

ಹಾಸನ ಜಿಲ್ಲಾ ಪಂಚಾಯ್ತಿ ಕ್ಷೇತ್ರ 40 ರಿಂದ 44ಕ್ಕೆ ಏರಿಕೆ

04:27 PM Feb 13, 2021 | Team Udayavani |

ಹಾಸನ: ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಅಧಿಕಾರಾವಧಿ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಆಯೋಗವು ಸಕಲ ಸಿದ್ಧತೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಪುನರ್‌ ವಿಂಗಡಣೆಗೆ ಮಾರ್ಗ ಸೂಚಿಗಳನ್ನು ಸಿದ್ಧಪಡಿಸಲು ಆಯಾ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು.

Advertisement

ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಆಧರಿಸಿ ಹಾಸನ ಜಿಲ್ಲಾಡಳಿತವು ಜಿಲ್ಲಾ ಮತ್ತುತಾಲೂಕು ಪಂಚಾಯ್ತಿ ಸಂಖ್ಯೆಯನ್ನು ನಿಗದಿಪಡಿಸಿದ್ದು, ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಸಂಖ್ಯೆ 40 ರಿಂದ 44ಕ್ಕೆ ಏರಿಕೆಯಾಗುತ್ತಿದೆ. ಜಿಲ್ಲೆಯ ಎಂಟು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಸಂಖ್ಯೆ 153 ರಿಂದ 120ಕ್ಕೆ ಇಳಿಯುತ್ತಿದೆ. ಪುನರ್‌ರಚಿತ ಕ್ಷೇತ್ರಗಳ ಗಡಿಗಳನ್ನು ಗುರುತಿಸಲಾಗುತ್ತಿದೆ. ಹಾಸನ ಜಿಲ್ಲಾ ಪಂಚಾಯ್ತಿಯ 44 ಕ್ಷೇತ್ರಮತ್ತು ತಾಲೂಕು ಪಂಚಾಯ್ತಿಯ 120 ಕ್ಷೇತ್ರಗಳ ಗಡಿ ಮತ್ತು ನಕಾಶೆಯನ್ನು ಸಿದ್ಧಪಡಿಸಿ ಫೆ.22 ರಂದು ಅಂಗೀಕರಿಸಲು ಚುನಾವಣಾ ಆಯೋಗವು ಸಭೆಯನ್ನು ನಿಗದಿಪಡಿಸಿದೆ.

ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು ಬೇಲೂರು ಮತ್ತು ಚನ್ನರಾಯಪಟ್ಟಣದಲ್ಲಿ ಹಿಂದಿದ್ದಷ್ಟೇ ಇವೆ. ಆದರೆ,ಹಾಸನ ತಾಲೂಕಿನಲ್ಲಿ ಒಂದು ಜಿಪಂ ಕ್ಷೇತ್ರ ಕಡಿಮೆಯಾಗಿದೆ. ಇನ್ನುಳಿದಂತೆ 5 ತಾಲೂಕುಗಳಲ್ಲಿಒಂದೊಂದು ಜಿಪಂ ಕ್ಷೇತ್ರ ಹೆಚ್ಚಳವಾಗಿದೆ. ತಾಪಂಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಸನ ನಗರಕ್ಕೆ ಹೊಂದಿಕೊಂಡ ಗ್ರಾಮಗಳು, ನಗರಸಭೆ ವ್ಯಾಪ್ತಿಗೆ ಸೇರಿದ್ದರಿಂದ ಹಾಸನ ತಾಲೂಕಿನಲ್ಲಿ ಒಂದು ಜಿಪಂ ಕ್ಷೇತ್ರ ಹಾಗೂ 10 ತಾಪಂ ಕ್ಷೇತ್ರಗಳು ಕಡಿಮೆಯಾಗಿವೆ. ಅರಸೀಕೆರೆ ತಾಪಂ ನಲ್ಲಿ 6 ಕ್ಷೇತ್ರ ಕಡಿಮೆಯಾಗಿದ್ದರೆ, ಹೊಳೆನಸೀಪುರ ತಾಪಂನಲ್ಲಿ 3 ಕ್ಷೇತ್ರ, ಚನ್ನರಾಯಪಟ್ಟಣ ತಾಪಂನಲ್ಲಿ 5 ಕ್ಷೇತ್ರ,ಸಕಲೇಶಪುರ ತಾಪಂನಲ್ಲಿ 2 ಕ್ಷೇತ್ರ, ಬೇಲೂರುತಾಪಂನಲ್ಲಿ 4 ಕ್ಷೇತ್ರ, ಅರಕಲಗೂಡು ತಾಪಂ ನಲ್ಲಿ 3 ಕ್ಷೇತ್ರಗಳು ಕಡಿಮೆಯಾಗಿವೆ.

ಜನಸಂಖ್ಯೆ ಆಧರಿಸಿ ಕ್ಷೇತ್ರ ರಚನೆ: 2011ರ ಜನಗಣತಿ ಆಧರಿಸಿ ಪ್ರತಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ 35ಸಾವಿರದಿಂದ 40 ಸಾವಿರ, ತಾಲೂಕು ಪಂಚಾಯ್ತಿ ಕ್ಷೇತ್ರವನ್ನು 12,500 ರಿಂದ 15 ಸಾವಿರ ಜನಸಂಖ್ಯೆಗೆ ಒಂದೊಂದು ಕ್ಷೇತ್ರವನ್ನು ನಿಗದಿಪಡಿಸಲಾಗುತ್ತಿದೆ. ಈಹಿಂದೆಯೂ 2011ರ ಜನಗಣಗತಿ ಆಧರಿಸಿ ಕ್ಷೇತ್ರಗಳ ಪುನರ್‌ರಚನೆಯಾಗಿತ್ತು. ಆದರೆ, ತಾಪಂ ಕ್ಷೇತ್ರಗಳ ಪೈಕಿ 33 ಕ್ಷೇತ್ರಗಳು ಕಡಿಮೆಯಾಗಿರುವುದು ಕುತೂಹಲ ಮೂಡಿಸಿದೆ. ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್‌ ರಚನೆ ಮಾಡಿ ಅಯಾಯ ತಾಲೂಕು ವ್ಯಾಪ್ತಿಯೊಳಗೇ ಗಡಿಗಳನ್ನು ನಿಗದಿಪಡಿಸಲು ಸೂಚಿಸಲಾಗಿದೆ.

ಯಾವುದಾದರೂ ಒಂದು ಕ್ಷೇತ್ರಕ್ಕೆ ಜನಸಂಖ್ಯೆ ತುಂಬಾ ಕಡಿಮೆ ಇದ್ದರೆ ಆ ಕ್ಷೇತ್ರದ ಗಡಿಗೆ ಹೊಂದಿ ಕೊಂಡಂತಿರುವ ಪಕ್ಕದ ತಾಲೂಕಿನ ಒಂದು ಗ್ರಾಮ ಪಂಚಾಯ್ತಿಯನ್ನು ಸಂಪೂರ್ಣವಾಗಿ ಸೇರಿಸಿಕೊಂಡು, ಕ್ಷೇತ್ರ ಪುನರ್‌ರಚಿಸಬೇಕು. ಅಯಾಯ ಜಿಪಂ,ತಾಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಗ್ರಾಮದ ಹೆಸರನ್ನೇ ಕ್ಷೇತ್ರಕ್ಕೆ ನಮೂದಿಸಬೇಕು ಎಂದು ಚುನಾವಣಾ ಆಯೋಗವು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಪುನರ್‌ರಚಿತ ಹೊಸ ಜಿಪಂ ಕೆ Òàತ್ರಗಳು ಹಾಗೂ ತಾಪಂ ಕ್ಷೇತ್ರಗಳ ಸ್ಪಷ್ಟ ಚಿತ್ರಣ ಫೆ.22ರ ವೇಳೆಗೆ ಸಿಗಲಿದೆ. ಏಕೆಂದರೆ ಅಷ್ಟರೊಳಗೆ ಜಿಲ್ಲಾಡಳಿತ ಕ್ಷೇತ್ರಗಳನ್ನು ಪುನರ್‌ರಚಿಸಿ, ಪೂರ್ಣ ದಾಖಲಾತಿಗಳೊಂದಿಗೆ ಚುನಾವಣಾಆಯೋಗದ ಸಭೆಗೆ ಮಂಡಿಸಬೇಕಾಗಿದೆ. ಹಾಗಾಗಿಡೀಸಿ ಕಚೇರಿಯ ಚುನಾವಣಾ ಶಾಖೆಯು ಕ್ಷೇತ್ರಗಳ ಪುನರ್‌ ರಚನೆಯಲ್ಲಿ ನಿರತವಾಗಿದೆ.

Advertisement

 

ಜಿಪಂ ಕ್ಷೇತ್ರಗಳ ತಾಲೂಕುವಾರು ವಿವರ :

 

ತಾಲೂಕು        ಪ್ರಸ್ತುತ      ಮುಂದೆ

ಆಲೂರು             2               3

ಅರಕಲಗೂಡು     5               6

ಅರಸೀಕೆರೆ           7                8

ಬೇಲೂರು           5               5

ಚನ್ನರಾಯಪಟ್ಟಣ 7               7

ಹಾಸನ               7               6

ಹೊಳೆನರಸೀಪುರ  4              5

ಸಕಲೇಶಪುರ        3              4

ಒಟ್ಟು               40              44

 

ಜಿಲ್ಲೆಯ 8 ತಾಪಂನ ಕ್ಷೇತ್ರಗಳ ವಿವರ :

 

ತಾಲೂಕು              ಪ್ರಸ್ತುತ        ಮುಂದೆ

ಆಲೂರು                11                  11

ಅರಕಲಗೂಡು       19                   16

ಅರಸೀಕೆರೆ             27                   21

ಬೇಲೂರು            17                   13

ಚನ್ನರಾಯಪಟ್ಟಣ  25                   20

ಹಾಸನ                27                   17

ಹೊಳೆನರಸೀಪುರ ‌ 16                  13

ಸಕಲೇಶಪುರ        11                 09

ಒಟ್ಟು               153                 120

 

ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next