Advertisement
ಈ ಮೊದಲು ಹಾಸನ ತಾಲೂಕಿನಲ್ಲಿ 7 ಜಿಲ್ಲಾಪಂಚಾಯತಿ ಕ್ಷೇತ್ರಗಳುಹಾಗೂ 27ತಾಲೂಕು ಪಂಚಾ ಯತಿ ಕ್ಷೇತ್ರಗಳಿದ್ದವು. ಆದರೆ ಈಗಬೂವನಹಳ್ಳಿ ಜಿಲ್ಲಾಪಂಚಾಯತಿ ಕ್ಷೇತ್ರಕಣ್ಮರೆಯಾಗಿದ್ದರೆ, ತಾಲೂಕು ಪಂಚಾಯತಿಗಳ ಪೈಕಿ ಶೆಟ್ಟಿಹಳ್ಳಿ, ಕಿತ್ತಾನೆ,ಬೂವನಹಳ್ಳಿ, ಹೆರಗು, ನಿಟ್ಟೂರು ಸೇರಿದಂತೆ 10 ತಾಲೂಕು ಪಂಚಾಯತಿ ಕ್ಷೇತ್ರಗಳುಕಣ್ಮರೆಯಾಗಿದ್ದು, ಈಗ ಹಾಸನ ತಾಲೂಕಿನಲ್ಲಿ 6ಜಿಲ್ಲಾ ಪಂಚಾಯತಿ ಮತ್ತು 17 ತಾಲೂಕುಪಂಚಾಯತಿ ಕ್ಷೇತ್ರಗಳು ರಚನೆಯಾಗಿವೆ.ಬೂವನಹಳ್ಳಿ ಈಗ ಹಾಸನ ನಗರಸಭೆ ವ್ಯಾಪ್ತಿಗೆಸೇರಿರುವುದರಿಂದ ಇನ್ನು ಮುಂದೆ ಬೂವನಹಳ್ಳಿಗ್ರಾಪಂ, ತಾಪಂ, ಜಿಪಂ ಕ್ಷೇತ್ರ ನೆನಪಾಗಿಯಷ್ಟೇ ಉಳಿಯಲಿವೆ.
Related Articles
Advertisement
ಕಂದಲಿ ಜಿಪಂ ಕ್ಷೇತ್ರ: ಈ ಕ್ಷೇತ್ರದ ವ್ಯಾಪ್ತಿಯ ಒಟ್ಟು ಜನಸಂಖ್ಯೆ 36,341. ಈ ಜಿಪಂ ಕ್ಷೇತ್ರವ್ಯಾಪ್ತಿಗೆ ಒಳಪಡುವ ತಾಪಂ ಕ್ಷೇತ್ರಗಳು ಕಂದಲಿ, ತಟ್ಟೇಕೆರೆ, ತೇಜೂರು. ಕಂದಲಿ ತಾಪಂಕ್ಷೇತ್ರದ ಒಟ್ಟು ಜನಸಂಖ್ಯೆ 12,428, ಈ ಕ್ಷೇತ್ರವ್ಯಾಪ್ತಿಗೆ ಒಳಪಡುವ ಗ್ರಾಪಂಗಳು ಕಂದಲಿ, ಹೂವಿನಹಳ್ಳಿ ಕಾವಲು. ತಟ್ಟೆಕೆರೆ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 15,022. ಈ ಕ್ಷೇತ್ರ ವ್ಯಾಪ್ತಿಯ ಒಳಪಡುವ ಗ್ರಾಮಪಂಚಾಯತಿಗಳೆಂದರೆ ತಟ್ಟೇಕೆರೆ ಮತ್ತು ಹನುಮಂತಪುರ. ತೇಜೂರು ತಾಪಂ ಕ್ಷೇತ್ರದಒಟ್ಟು ಜನಸಂಖ್ಯೆ 8,891. ಈ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯತಿಗಳು ದೊಡ್ಡಪುರ ಮತ್ತು ತೇಜೂರು.
ಮೊಸಳೆ ಹೊಸಹಳ್ಳಿ ಜಿಪಂ ಕ್ಷೇತ್ರ: ಈ ಕ್ಷೇತ್ರದ ಒಟ್ಟು ಜನಸಂಖ್ಯೆ 33,007. ಈ ಕ್ಷೇತ್ರವ್ಯಾಪ್ತಿಗೆ ಒಳಪಡುವ ತಾಪಂ ಕ್ಷೇತ್ರಗಳುಮೊಸಳೆ ಹೊಸಹಳ್ಳಿ, ಮರ್ಕುಲಿ, ಕೌಶಿಕ.ಮೊಸಳೆ ಹೊಸಹಳ್ಳಿ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 11,608. ಈ ಕೇತ್ರಕ್ಕೆ ಒಳಪಡುವಗ್ರಾಪಂಗಳು ಮೊಸಳೆ ಹೊಸಹಳ್ಳಿ, ಚನ್ನಂಗಿಹಳ್ಳಿ. ಮರ್ಕುಲಿ ತಾಪಂ ಕ್ಷೇತ್ರದ ಒಟ್ಟುಜನಸಂಖ್ಯೆ 11,357. ಈ ಕ್ಷೇತ್ರಕ್ಕೆ ಒಳಪಡುವಗ್ರಾಪಂಗಳೆಂದರೆ ಮರ್ಕುಲಿ, ಜಾಗರವಳ್ಳಿ.ಕೌಶಿಕ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ10,042. ಈ ಕ್ಷೇತ್ರಕ್ಕೆ ಒಳಪಡುವ ಗ್ರಾಮಪಂಚಾಯತಿ ಗಳೆಂದರೆ ಕೌಶಿಕ, ಅಂಬುಗ.
ಶಾಂತಿಗ್ರಾಮ ಜಿಪಂ ಕ್ಷೇತ್ರ :
ಈ ಕ್ಷೇತ್ರದ ಒಟ್ಟು ಜನಸಂಖ್ಯೆ 35,171. ಈ ಕ್ಷೇತ್ರ ವ್ಯಾಪ್ತಿಯ ತಾಪಂ ಕ್ಷೇತ್ರಗಳುಶಾಂತಿಗ್ರಾಮ, ಕೋರವಂಗಲ, ಮಡೆನೂರು.ಶಾಂತಿಗ್ರಾಮ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ11,475. ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುವಗ್ರಾಮ ಪಂಚಾಯತಿಗಳೆಂದರೆ ಶಾಂತಿಗ್ರಾಮಮತ್ತು ದೊಡ್ಡಗೇಣಿಗೆರೆ. ಕೋರವಂಗಲ ತಾಪಂಕ್ಷೇತ್ರದ ಒಟ್ಟು ಜನಸಂಖ್ಯೆ 13,309. ಈ ಕ್ಷೇತ್ರವ್ಯಾಪ್ತಿಗೆ ಒಳಪಡುವ ಗ್ರಾಪಂಗಳೆಂದರೆಕೋರವಂಗಲ, ಗಾಡೇನಹಳ್ಳಿ, ಮೆಳಗೋಡು.ಮಡೆನೂರು ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 10,387. ಈ ಕ್ಷೇತ್ರ ವ್ಯಾಪ್ತಿಗೆ ಒಳಪಡುವಗ್ರಾಮ ಪಂಚಾಯತಿಗಳು ಹೆರಗು ಮತ್ತು ಮಡೆನೂರು.
ದುದ್ದ ಜಿಪಂ ಕ್ಷೇತ್ರ :
ಈ ಕ್ಷೇತ್ರದ ಒಟ್ಟು ಜನಸಂಖ್ಯೆ 33,268. ಈ ಕ್ಷೇತ್ರ ವ್ಯಾಪ್ತಿಯ ತಾಪಂ ಕ್ಷೇತ್ರಗಳು ದುದ್ದ, ಕಬ್ಬಳಿ ಮತ್ತು ಕುದುರುಗುಂಡಿ. ದುದ್ದ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 12,783.ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗ್ರಾಪಂಗಳೆಂದರೆ ದುದ್ದ ಮತ್ತು ಅಟ್ಟಾವರಹೊಸಹಳ್ಳಿ. ಕಬ್ಬಳಿ ತಾಪಂ ಕ್ಷೇತ್ರದ ಒಟ್ಟುಜನಸಂಖ್ಯೆ 9,836. ಈ ಕ್ಷೇತ್ರವ್ಯಾಪ್ತಿಗೊಳಪಡುವ ಗ್ರಾಪಂಗಳೆಂದರೆಕಬ್ಬಳಿ ಮತ್ತು ಹೊನ್ನಾವರ. ಕುದುರುಗುಂಡಿ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 9649. ಈ ಕ್ಷೇತ್ರ ವ್ಯಾಪ್ತಿಗೆ ಕುದುರುಗುಂಡಿ ಮತ್ತು ಬಸವಾಘಟ್ಟ ಗ್ರಾಮ ಪಂಚಾಯತಿಗಳು ಸೇರ್ಪಡೆಯಾಗಿವೆ.
-ಎನ್.ನಂಜುಂಡೇಗೌಡ