ಹಾಸನ: ರೈತರ ನಾಯಕ, ಪ್ರಧಾನಿ ಹುದ್ದೆಗೇರಿದಪ್ರಪ್ರಥಮ ಕನ್ನಡಿಗ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿ 25 ವರ್ಷದ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು,ಅವರಿಗೆ ಭಾರತ ರತ್ನ ಗೌರವ ನೀಡಬೇಕು ಎಂದು ಜಿಲ್ಲಾಜೆಡಿಎಸ್ ವಕ್ತಾರ ಹೊಂಗೆರೆ ರಘು ಅವರುಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾಹೇಳಿಕೆ ನೀಡಿರುವಅವರು, ಸಾಮಾನ್ಯ ರೈತ ಕುಟುಂಬದಲ್ಲಿಹುಟ್ಟಿ ತಮ್ಮ 6 ದಶಕಗಳ ಸುದೀರ್ಘರಾಜಕೀಯ ಜೀವನದಲ್ಲಿ ಮಣ್ಣಿನ ಮಕ್ಕಳಪರವಾಗಿ ನಿರಂತರ ಹೋರಾಟ ಮಾಡುತ್ತಾಬಂದಿರುವ ದೇವೇಗೌಡರು 16 ತಿಂಗಳುಕರ್ನಾಟಕದ ಮುಖ್ಯಮಂತ್ರಿಯಾಗಿ, ಕೇವಲ 11 ತಿಂಗಳಪ್ರಧಾನ ಮಂತ್ರಿಯಾಗಿ ಸ್ವತ್ಛ ಹಾಗೂ ಮಾದರಿ ಆಡಳಿತನೀಡಿದಕಳಂಕರಹಿತ ರಾಜಕಾರಣಿಎನಿಸಿಕೊಂಡಿದ್ದಾರೆ.
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇರಸಗೊಬ್ಬರದ ಮೇಲಿನ ಸಬ್ಸಿಡಿ ಬಿಡುಗಡೆ ಮಾಡಿ ರೈತರನೆರವಿಗೆ ನಿಂತರು. ಅಷ್ಟೇ ಅಲ್ಲ 11 ತಿಂಗಳ ಅವಧಿಯಲ್ಲಿನಾಲ್ಕು ಬಾರಿಎನ್‌ಡಿಸಿ ( ರಾಷ್ಟ್ರೀಯಅಭಿವೃದ್ಧಿ ಮಂಡಳಿ)ಸಭೆ ನಡೆಸಿ ಆಯಾಯ ರಾಜ್ಯಗಳ ಸಮಸ್ಯೆಗಳನ್ನುಬಗೆಹರಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನು ಕೈಗೊಂಡಿದ್ದರುಎಂದು ಪ್ರಕಟಣೆಯಲ್ಲಿ ಸ್ಮರಿಸಿದ್ದಾರೆ.
ಆಯಾಯರಾಜ್ಯಗಳ ವಿದ್ಯುತ್ ಸಮಸ್ಯೆಗಳನ್ನು ಕೇಂದ್ರದ ಅನುಮತಿಇಲ್ಲದೇ ಅಲ್ಲಿಯೇ ಉತ್ತಾದಿಸಿ ಬಳಸಿಕೊಳ್ಳಲುಅನುಮತಿ ನೀಡುವ ಮೂಲಕ ಹಲವು ದಿನಗಳಸಮಸ್ಯೆ ನಿವಾರಿಸಿದರು.
ಇದು ಯಾವುದೇಪ್ರಧಾನಿ ಮಾಡದೇ ಇರುವ ಸಾಧನೆಯಾಗಿದೆ.ಜ್ವಲಂತ ಸಮಸ್ಯೆ ನಿವಾರಣೆ: ಈಶಾನ್ಯ ರಾಜ್ಯಗಳಜ್ವಲಂತ ಸಮಸ್ಯೆ, ಕಾಶ್ಮೀರ ಸಮಸ್ಯೆ, ದೆಹಲಿಯಲ್ಲಿಮೆಟ್ರೋ ರೈಲ್ವೆ ಯೋಜನೆ, ಪಡಿತರ ವಿತರಣೆ, ಸ್ಥಳೀಯಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಸೇರಿದಂತೆ ಹಲವಾರುಯೋಜನೆ ಜಾರಿಗೆ ತಂದವರು ದೇವೇಗೌಡರು. 16ತಿಂಗಳು ಮುಖ್ಯಮಂತ್ರಿಯಾಗಿ ಬೆಂಗಳೂರಿಗೆ ಕುಡಿಯಲು ಕಾವೇರಿ ನೀರು, ರಾಜ್ಯದಲ್ಲಿ ಐಟಿ ಪಾರ್ಕ್‌ಗಳು,ಹುಬ್ಬಳ್ಳಿಯ ಈದ್ಗಾ ಸಮಸ್ಯೆಗೆ ಪರಿಹಾರ ಕಂಡುಹಿಡಿದುಶಾಂತಿ ಸಾಮರಸ್ಯ ನಿರ್ಮಾಣಕ್ಕೆ ನಾಂದಿ ಹಾಡಿದಧೀಮಂತ ನಾಯಕ ಎಂದು ಹೇಳಿದ್ದಾರೆ.