ಬೇಲೂರು: ಪಟ್ಟಣದ ಹೊರವಲಯದಲ್ಲಿರುವಯಗಚಿ ಜಲಾಶಯವನ್ನು ವಿಕ್ಷೀಸಲು ಬರುವಪ್ರವಾಸಿಗರಿಗೆ ಮೂಲ ಸೌಲಭ್ಯ ಇಲ್ಲದೆ ನಿತ್ಯಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರಕೂಡಲೆ ಇತ್ತ ಗಮನಹರಿಸಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕು.
ಕಳೆದ ವಾರದಲ್ಲಿ ಸಾಲು ಸಾಲು ರಜೆ ಹಿನ್ನೆಲೆಯಲ್ಲಿಜಿಲ್ಲೆಯ ಐತಿಹಾಸಿ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿನೀಡಿದ್ದ ಸಾವಿರಾರೂ ಪ್ರವಾಸಿಗರು ಬೇಲೂರುದೇವಾಲಯ ವೀಕ್ಷಿಸಿದ ನಂತರಹಾಸನ-ಚಿಕ್ಕಮಗಳೂರು ಹೆದ್ದಾರಿ ಬದಿಯಲ್ಲಿನಯಗಚಿ ಜಲಾಶಯ ವೀಕ್ಷಣೆ ಮಾಡಲು ಬರುತ್ತಿದ್ದುಅವರಿಗೆ ಶೌಚಾಲಯ, ಕುಡಿಯುವ ನೀರು, ಕೂರಲುಅಸನ ವ್ಯವಸ್ಥೆ, ಮಳೆ ಬಂದರೆ ನಿಲ್ಲಲು ತಂಗುದಾಣ,ಉಪಾಹಾರ ಮಂದಿರ ನಿರ್ಮಿಸದೆ ಇರುವುದುಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಯಗಚಿ ಮಲೆನಾಡು ಜಿಲ್ಲೆಗಳಲ್ಲಿ ಹರಿಯುವಹೇಮಾವತಿ ನದಿಯ ಅತಿ ಮುಖ್ಯ ಉಪನದಿಯಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಬೆಟ್ಟಗಳಲ್ಲಿ ಹುಟ್ಟಿ ದಕ್ಷಿಣ ಭಾಗಕ್ಕೆ ಹರಿಯುತ್ತದೆ. ಈನದಿ ವಿಶ್ವ-ವಿಖ್ಯಾತ ಬೇಲೂರು ಪಟ್ಟಣದ ಬಳಿ ಹಾದುಹಾಸನ ತಾಲೂಕಿನ ಗೊರೂರು ಬಳಿಯ ಹೇಮಾವತಿನದಿ ಸೇರುತ್ತದೆ. ಇಂಥ ಯಗಚಿ ನದಿಗೆ ಅಡ್ಡವಾಗಿಅಣ್ಣೆಕಟ್ಟೆಯನ್ನು ನಿರ್ಮಿಸಿದ್ದು ಜಲಾಶಯದಿಂದಬೇಲೂರು, ಚಿಕ್ಕಮಗಳೂರು, ಅರಸೀಕೆರೆ ತಾಲೂಕಿನ52 ಗ್ರಾಮಗಳಿಗೆ ಕುಡಿಯುವ ನೀರುಪೂರೈಸಲಾಗುತ್ತಿದೆ.
ಶಿಲ್ಪಕಲೆಗಳ ದೇಗುಲಗಳನ್ನುವೀಕ್ಷಿಸಿ ಕಾಫಿ ನಾಡು ಚಿಕ್ಕಮಗಳೂರಿಗೆ ತೆರಳುವ ಪ್ರತಿಪ್ರವಾಸಿಗರು ಯಗಚಿ ಜಲಾಶಯ ವೀಕ್ಷಣೆಗೆ ಬಂದುಹೋಗುವ ವಾಡಿಕೆ ಇದೆ.ಜಲಾಶಯ ನಿರ್ಮಿಸಿ ಸುಮಾರು 17 ವರ್ಷಕಳೆದರೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ಅಗತ್ಯಮೂಲಭೂತ ಸೌಲಭ್ಯಗಳನ್ನು ಸರ್ಕಾರ ಇದುವರೆಗೂಕಲ್ಪಿಸಿಲ್ಲ.ಇತ್ತೀಚೆಗೆ ಯಗಚಿ ಜಲಾಶಯದ ಹಿನ್ನೀರಿನಲ್ಲಿಯಗಚಿ ವಾಟರ್ ಆಡ್ವೆಂಚರ್ ನ್ಪೋಟ್ಸ್ ಸೆಂಟರ್‌ಎಂಬ ಸಾಹಸ ಕ್ರೀಡಾ ಕೇಂದ್ರ ತಲೆ ಎತ್ತಿದ್ದು ಹೆಚ್ಚುಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಣೆ ಮಾಡುತ್ತಿದೆ.ಆದರೆ ಜಲಾಶಯಕ್ಕೆ ಬಂದ ಪ್ರವಾಸಿಗರಲ್ಲಿ ಕೆಲವೇಮಂದಿ ಮಾತ್ರ ಈ ಸಾಹಸ ಕ್ರೀಡೆಗೆ ತೆರಳುತ್ತಾರೆ.
ಯಗಚಿ ನೀರಾವರಿ ನಿಗಮ ಇಂತಹ ಸ್ಥಳದಲ್ಲಿಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿಹೋಟಲ್‌ಗಳು, ಹೈಟೆಕ್ ಶೌಚಾಲಯ, ಶುದ್ಧಕುಡಿಯುವ ನೀರು, ಶ್ರಾಂತಿ ಗೃಹಗಳು ಸೇರಿದಂತೆಹತ್ತಾರು ಸೌಲಭ್ಯಗಳನ್ನು ಕಲ್ಪಿಸಿಬೇಕಾಗಿದೆ.ಯಗಚಿ ಜಲಾಶಯದ ಮುಂಭಾದ ನೂರಾರು ಎಕ್ಕರೆ ಭೂಮಿ ಪಾಳು ಬಿದ್ದಿದೆ, ಇಲ್ಲಿನಗಿಡ-ಗಂಟಿಗಳು ಬೆಳೆದಿದ್ದು ನಿತ್ಯ ಅನೈತಿಕಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಇಲಾಖೆ ಅಧಿಕಾರಿಗಳಾಗಲಿ ಅಥವಾ ರಕ್ಷಣಾ ಇಲಾಖೆ ಸಿಬ್ಬಂದಿಇಲ್ಲದೆ ಪ್ರವಾಸಿಗರನ್ನು ಯಾರು ಹೇಳುವರುಕೇಳುವರು ಇಲ್ಲದಂತಾಗಿದೆ. ಕೂಡಲೇ ಯಗಚಿನೀರಾವರಿ ನಿಗಮ ಅಧಿಕಾರಿಗಳು ಹಾಗೂ ಸ್ಥಳೀಯಶಾಸಕರು ಯಗಚಿ ಜಲಾಶಯಕ್ಕೆ ಕಾಯಕಲ್ಪನೀಡಲು ಮುಂದಾಗಬೇಕು.
ಡಿ.ಬಿ.ಮೋಹನ್ ಕುಮಾರ್