ಹಾಸನ: ಪಕ್ಷಪಾತ ಮಾಡದೆ ಶಿವಮೊಗ್ಗ ಮತ್ತುವಿಜಾಪುರದ ವಿಮಾನ ನಿಲ್ದಾಣಗಳ ಮಾದರಿಯಲ್ಲೇಹಾಸನದ ವಿಮಾನ ನಿಲ್ದಾಣವನ್ನೂ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಿ. ಇಲ್ಲದಿದ್ದರೆಹಾಸನ ವಿಮಾನ ನಿಲ್ದಾಣವನ್ನು ಸರ್ಕಾರ ನಿರ್ಮಿಸುವುದೇ ಬೇಡ ಎಂದು ಜೆಡಿಎಸ್ ಮುಖಂಡ,ಮಾಜಿ ಸಚಿವ ಎಚ್.ಡಿ.ರೇವಣ್ಣ ಪಟ್ಟು ಹಿಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದವಿಮಾನ ನಿಲ್ದಾಣವನ್ನು 700 ಎಕರೆ ಪ್ರದೇಶದಲ್ಲಿ 383ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿದೆ. ಆದರೆ ಹಾಸನ ವಿಮಾನನಿಲ್ದಾಣವನ್ನು 560 ಎಕರೆಯಲ್ಲಿ 193 ಕೋಟಿ ರೂ.ವೆಚ್ಚದಲ್ಲಿ ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿಇಲಾಖೆಯಿಂದ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ
.193 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣನಿರ್ಮಿಸಲು ಸಾಧ್ಯವಿಲ್ಲ.ಜಿಲ್ಲೆಯಜನರಕಣ್ಣೊರೆಸಲುನಾಮ್‌ಕೆವಾಸ್ತೆಗೆ ಹಾಸನ ವಿಮಾನ ನಿಲ್ದಾಣ ನಿರ್ಮಿಸುವುದಾದರೆ ಬೇಡವೇ ಬೇಡ. ಜೆಡಿಎಸ್‌ಗೆ ಅಧಿಕಾರಬಂದಾಗ ವಿಮಾನ ನಿಲ್ದಾಣ ನಿರ್ಮಿಸಿಕೊಳ್ಳುವುದುನಮಗೆ ಗೊತ್ತಿದೆ ಎಂದರು.ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಕ್ಕೆಬಂದಾಗಲೆಲ್ಲಾ ರಾಜಕೀಯದ್ವೇಷ ಸಾಧನೆಗಾಗಿಜಿಲ್ಲೆಯ ಅಭಿವೃದ್ಧಿಗೆ ಅಡ್ಡಿಪಡಿಸುತ್ತಲೇ ಬಂದಿದ್ದಾರೆ.
ಈಗ ಹಾಸನ ವಿಮಾನ ನಿಲ್ದಾಣನಿರ್ಮಾಣದ ವಿಷಯದಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆಂದರು.ಯೋಜನೆ ನಿಲ್ಲಿಸಲಿ: ಶಿವಮೊಗ್ಗದ ಮಾದರಿಯಲ್ಲಿಯೇ ಹಾಸನ ವಿಮಾನ ನಿಲ್ದಾಣವನ್ನು ಏಕೆನಿರ್ಮಿಸಬಾರದು? ಹಾಸನದಲ್ಲಿ ವಿಮಾನ ನಿಲ್ದಾಣನಿರ್ಮಾಣ ಮಾಡುವುದಾದರೆ ಶಿವಮೊಗ್ಗದಷ್ಟೇಪ್ರದೇಶದಲ್ಲಿ, ಅಷ್ಟೇ ಅಂದಾಜು ವೆಚ್ಚದಲ್ಲಿಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಮಾಡಲಿ. ಅದಾಗದಿದ್ದರೆ ಹಾಸನ ವಿಮಾನ ನಿಲ್ದಾಣನಿರ್ಮಾಣ ಯೋಜನೆಯನ್ನು ಸರ್ಕಾರ ಸದ್ಯಕ್ಕೆ ನಿಲ್ಲಿಸಿಬಿಡಲಿ ಎಂದರು.