Advertisement

ಎರಡು ವಾರದ ಹಿಂದೆ ನಾಪತ್ತೆಯಾಗಿದ್ದ ಗಾಯಕಿಯ ಶವ ಸಮಾಧಿ ಸ್ಥಿತಿಯಲ್ಲಿ ಪತ್ತೆ: ಅತ್ಯಾಚಾರ ಆರೋಪ

10:15 AM May 24, 2022 | Team Udayavani |

ಹೊಸದಿಲ್ಲಿ: ಸುಮಾರು ಎರಡು ವಾರಗಳಿಂದ ನಾಪತ್ತೆಯಾಗಿದ್ದ ಹರ್ಯಾನ್ವಿ ಗಾಯಕಿಯ ಶವವನ್ನು ಸೋಮವಾರ ಹರ್ಯಾಣ ರಾಜ್ಯದ ರೋಹ್ಟಕ್ ಜಿಲ್ಲೆಯ ಹೆದ್ದಾರಿಯೊಂದರ ಬಳಿ ಸಮಾಧಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ದೆಹಲಿಯಲ್ಲಿ ವಾಸಿಸುತ್ತಿದ್ದ ಗಾಯಕಿ ಮೇ 11 ರಂದು ನಾಪತ್ತೆಯಾಗಿದ್ದರು. ಮೂರು ದಿನಗಳ ನಂತರ ಅವರು ಅಪಹರಣದ ಪ್ರಕರಣವನ್ನು ದಾಖಲಿಸಿದ್ದಾರೆ.

ಆಕೆಯ ಜೊತೆ ಕೆಲಸ ಮಾಡುತ್ತಿದ್ದ ರವಿ ಮತ್ತು ರೋಹಿತ್ ಎಂಬ ಇಬ್ಬರು ವ್ಯಕ್ತಿಗಳು ಆಕೆಯನ್ನು ಅಪಹರಿಸಿ ಕೊಂದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಅವಳು ರೋಹಿತ್‌ ನೊಂದಿಗೆ ಮ್ಯೂಸಿಕ್ ವಿಡಿಯೋ ಚಿತ್ರೀಕರಣಕ್ಕಾಗಿ ಭಿವಾನಿಗೆ ಹೋಗಿದ್ದಳು ಎಂದು ಕುಟುಂಬಸ್ಥರು ಹೇಳಿದ್ದಾರೆ. ರೋಹ್ಟಕ್ ಮೆಹಮ್ ಬಳಿಯ ಹೋಟೆಲ್‌ನ ಸಿಸಿ ಕ್ಯಾಮೆರಾದಲ್ಲಿ ಅವರು ಊಟ ಮಾಡುವ ದೃಶ್ಯಾಗಳು ದಾಖಲಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿ ರೇವಡಿಹಾಳ ಅಪಘಾತ: ಬಸ್ ಚಾಲಕ ಟ್ರಾಕ್ಟರ್ ಹಿಂದಿಕ್ಕಲು ಹೋಗಿ ನಡೆಯಿತು ದುರ್ಘಟನೆ

Advertisement

“ಶವದಲ್ಲಿ ಅವಳ ಒಳಉಡುಪುಗಳನ್ನು ಹೊರತುಪಡಿಸಿ ಅವಳಿಗೆ ಯಾವುದೇ ಬಟ್ಟೆ ಇರಲಿಲ್ಲ. ಪೊಲೀಸರು ಸುಮ್ಮನೆ ಪ್ರಕರಣದಲ್ಲಿ ವಿಳಂಬ ಮಾಡುತ್ತಿದ್ದಾರೆ” ಎಂದು ಕುಟುಂಬಿಕರು ಆರೋಪ ಮಾಡಿದ್ದಾರೆ.

ಭೈರೋನ್ ಭೈನಿ ಗ್ರಾಮದ ಫ್ಲೈಓವರ್ ಬಳಿ ಶವವನ್ನು ಹೂತಿಟ್ಟಿರುವ ಬಗ್ಗೆ ಒಂದು ದಿನದ ಹಿಂದೆ ಮಾಹಿತಿ ಸಿಕ್ಕಿತ್ತು ಎಂದು ಹರಿಯಾಣದ ಮೆಹಮ್ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next