Advertisement

ವೈರಲ್‌ ಆಯ್ತು ಆಯುಷ್ಮಾನ್‌ ಬೇಬಿ!

12:50 PM Sep 03, 2018 | Team Udayavani |

ನವದೆಹಲಿ: ಮೋದಿಕೇರ್‌ ಎಂದೇ ಹೇಳ ಲಾದ ಆಯುಷ್ಮಾನ್‌ ಭಾರತ್‌ ಆರೋಗ್ಯ ವಿಮೆ ಯೋಜನೆಯನ್ನು ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಘೋಷಣೆ ಮಾಡಿದ ಎರಡೇ ದಿನದಲ್ಲಿ ಜನಿಸಿದ ಮಗು ಕರಿಷ್ಮಾ ಈಗ ದೇಶಾದ್ಯಂತ ಸುದ್ದಿಯಾಗಿ ದ್ದಾಳೆ. 

Advertisement

ಈ ಯೋಜನೆ ಅಡಿ ಮೊದಲ ಫ‌ಲಾನುಭವಿ ಹರ್ಯಾಣದ ಅಮಿತ್‌ ಕುಮಾರ್‌ -ಮೌಸಮಿ ದಂಪತಿಯಾಗಿದ್ದಾರೆ. ಹೆರಿಗೆ ವೆಚ್ಚವಾಗಿ 9 ಸಾವಿರ ರೂ. ಅನ್ನು ಆಯುಷ್ಮಾನ್‌ಯೋಜನೆ ಮೂಲಕ ಇವರಿಗೆ ಒದಗಿಸಲಾಗಿದೆ. ಮೊದಲ ಫ‌ಲಾನುಭವಿ ಕರಿಷ್ಮಾ ಎಂಬುದಾಗಿ ಆಯುಷ್ಮಾನ್‌ ಭಾರತ್‌ ಡೆಪ್ಯುಟಿ ಸಿಇಒ ದಿನೇಶ್‌ ಅರೋರಾ ಟ್ವೀಟ್‌ ಮಾಡಿದ್ದು, ಇದು ವೈರಲ್‌ ಆಗಿದೆ. ಸಿಇಒ ಇಂದು ಭೂಷಣ್‌ ಕೂಡ ಇದನ್ನು ರಿಟ್ವೀಟ್‌ ಮಾಡಿ ಕರಿಷ್ಮಾಗೆ ಶುಭ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next