ಹರಿಯಾಣ : ರಾಜ್ಯ ಸರ್ಕಾರವು ನಾಳೆ(ಸೋಮವಾರ, ಮೇ 23) ಆ್ಯಂಟಿ ಕೋವಿಡ್ “ಸಂಜೀವನಿ ಪರಿಯೋಜನ” ವನ್ನು ಪ್ರಾರಂಭಿಸಲಿದ್ದು, ಗ್ರಾಮೀಣ ಪ್ರದೇಶದಲ್ಲಿ ಇರುವವರಿಗೆ ಇದು ಸಹಕಾರಿಯಾಗಲಿದೆ.
ಕೋವಿಡ್ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ಅನಾನುಕೂಲತೆ ಇರುವ ಪ್ರದೇಶಗಳಲ್ಲಿ ಈ ‘ಸಂಜೀವನಿ ಪ್ರಯೋಜನ’ ವೈದ್ಯಕೀಯ ಸೌಲಭ್ಯವನ್ನು ಒದಗಿಸಲಿದೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ : ಅಣುಶಕ್ತಿ ಆಯೋಗದ ಮಾಜಿ ಮುಖ್ಯಸ್ಥ ಶ್ರೀಕುಮಾರ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
ಈ ಯೋಜನೆಯನ್ನು ಮುಖ್ಯಮಂತ್ರಿ ಎಂ.ಎಲ್ ಖಟ್ಟರ್ ನಾಳೆ(ಸೋಮವಾರ, ಮೇ 24) ವಿಡಿಯೋ ಕಾನ್ಫರೆನ್ಸ್ ಮೂಲಕ ಜಾರಿಗೆ ತರಲಿದ್ದಾರೆ ಎಂದು ಸರ್ಕಾರದ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಜನರಿಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯವನ್ನು ನೀಡುವ ಹೆಜ್ಜೆಯಿದು ಎಂದು ‘ಸಂಜೀವನಿ ಪ್ರಯೋಜನ’ ವನ್ನು ಬಣ್ಣಿಸಿದ್ದಲ್ಲದೇ, “ಈ ಉಪಕ್ರಮವು ಆಸ್ಪತ್ರೆ ಹಾಸಿಗೆಗಳ ಲಭ್ಯತೆ, ಆಮ್ಲಜನಕ ಪೂರೈಕೆ, ಆಂಬ್ಯುಲೆನ್ಸ್ ಟ್ರ್ಯಾಕಿಂಗ್ ಮತ್ತು ಮನೆ-ಮನೆ ಜಾಗೃತಿ ಅಭಿಯಾನದಂತಹ ಸೌಲಭ್ಯವನ್ನು ನಿರ್ವಹಿಸಲಿದೆ ಅವರು ಹೇಳಿದ್ದಾರೆ.
ಇನ್ನುಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ವಾರ್ಡ್‌ಗಳು ಮತ್ತು ಕೆಲವು ಸಂದರ್ಭಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಣ್ಣ ಮಟ್ಟದ ರೋಗ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ವೈದ್ಯಕೀಯ ಮೂಲಸೌಕರ್ಯಗಳನ್ನು ನೀಡಲು ಇದು ಸಹಾಯ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ತಿಮಿಂಗಿಲ ವಾಂತಿ ಸಾಗಾಟ ಮಾಡುತ್ತಿದ್ದ ಮೂವರ ಬಂಧನ, 5.35 ಕೆಜಿ ತೂಕದ ವಾಂತಿ ವಶ