Advertisement

ಟೈಟಾನ್ಸ್‌ ದಾಳಿಗೆ ಹೈರಾಣಾದ ಹರ್ಯಾಣ

01:01 AM Aug 19, 2019 | Team Udayavani |

ಚೆನ್ನೆ: ಏಳನೇ ಆವೃತ್ತಿ ಪ್ರೊ ಕಬಡ್ಡಿಯ ಚೆನ್ನೈ ಚರಣದ ರವಿವಾರದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ 40-29 ಅಂಕಗಳ ಅಂತರದಿಂದ ಹರ್ಯಾಣ ಸ್ಟೀಲರ್ಸ್‌ ತಂಡವನ್ನು ಕೆಡವಿದೆ. ಇದು 9 ಪಂದ್ಯಗಳಲ್ಲಿ ತೆಲುಗು ಸಾಧಿಸಿದ ಕೇವಲ 2ನೇ ಜಯವಾಗಿದೆ. ಉಳಿದ 5 ಪಂದ್ಯಗಳಲ್ಲಿ ಸೋತು, ಎರಡರಲ್ಲಿ ಟೈ ಫ‌ಲಿತಾಂಶ ದಾಖಲಿಸಿದೆ. ಸದ್ಯ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

Advertisement

ಆತ್ಯಂತ ರೋಚಕವಾಗಿ ಸಾಗಿದ ಆತಿಥೇಯ ತಮಿಳ್‌ ತಲೈವಾಸ್‌-ಪುನೇರಿ ಪಲ್ಟಾನ್‌ ನಡುವಿನ ದ್ವಿತೀಯ ಮುಖಾಮುಖೀ 31-31 ಅಂಕಗಳಿಂದ ಟೈ ಆಯಿತು.

ಸಿದ್ಧಾರ್ಥ್ ಮಿಂಚಿನ ದಾಳಿ
ತೆಲುಗು ತಂಡದ ಗೆಲುವಿಗೆ ಕಾರಣವಾದವರು ಸಿದ್ಧಾರ್ಥ್ ದೇಸಾಯಿ. 18 ಬಾರಿ ಎದುರಾಳಿ ಕೋಟೆಗೆ ನುಗ್ಗಿದ ಅವರು ಅಷ್ಟೂ ಬಾರಿ ಯಶಸ್ವಿಯಾಗಿ 18 ಅಂಕ ಗಳಿಸಿದರು. ಈ ದಾಳಿ ವೇಳೆ ಅವರು 16 ಟಚ್‌ ಪಾಯಿಂಟ್‌ ಜತೆಗೆ ಹೆಚ್ಚುವರಿಯಾಗಿ 2 ಅಂಕ ಗಳಿಸಿದರು. ಇದು ಎದುರಾಳಿ ಹರ್ಯಾಣವನ್ನು ಆತಂಕಕ್ಕೆ ಸಿಲುಕಿಸಿತು. ಸತತವಾಗಿ ಆಕ್ರಮಣ ನಡೆಸಿದ ಅವರನ್ನು ತಡೆಯಲು ಸಾಧ್ಯವಾಗದೆ ಪರದಾಡಿತು. ದೇಸಾಯಿಗೆ ಸೂರಜ್‌ ಉತ್ತಮ ಸಾಥ್‌ ನೀಡಿ 6 ಅಂಕ ಗಳಿಸಿದರು. ಆದರೆ ರಕ್ಷಣೆಯಲ್ಲಿ ಟೈಟಾನ್ಸ್‌ ಹೇಳಿಕೊಳ್ಳುವಂಥ ಪ್ರದರ್ಶನ ನೀಡಲಿಲ್ಲ. ಅಬೊಜರ್‌ ಮಿಘಾನಿ 3 ಅಂಕ ಗಳಿಸಿದ್ದೇ ಉತ್ತಮ ಸಾಧನೆ.

ಹರ್ಯಾಣ ಪರ ವಿಕಾಸ್‌ ಕಂಡೊಲ ಎಂದಿನಂತೆ ಉತ್ತಮವಾಗಿ ಆಡಿದರು. 17 ಬಾರಿ ದಾಳಿ ನಡೆಸಿದ ಅವರು ಯಶಸ್ವಿಯಾದದ್ದು 9 ಬಾರಿ ಮಾತ್ರ. ತಂಡ ಸಾಂ ಕವಾಗಿ ವಿಫ‌ಲವಾದದ್ದೇ ತಂಡದ ಸೋಲಿಗೆ ಕಾರಣವಾಯಿತು. ಹರ್ಯಾಣ 8 ಪಂದ್ಯಗಳಲ್ಲಿ 4ನೇ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next