Advertisement

ಹರ್ಯಾಣ:ಗುಂಡಿಕ್ಕಿ ಗಾಯಕಿಯ ಬರ್ಬರ ಹತ್ಯೆ 

10:45 AM Oct 18, 2017 | Team Udayavani |

ಪಾಣಿಪತ್‌: ಇಲ್ಲಿನ ಇಸ್ರಾನಾ ಎಂಬಲ್ಲಿ 22 ರ ಹರೆಯದ ಗಾಯಕಿಯೊಬ್ಬರನ್ನು  ಅಪರಿಚಿತ ದುಷ್ಕರ್ಮಿಗಳು ಬರ್ಬರವಾಗಿ ಗುಂಡಿಕ್ಕಿ ಹತ್ಯೆಗೈದ ಭೀಕರ ಘಟನೆ ಮಂಗಳವಾರ ನಡೆದಿದೆ. 

Advertisement

ವರದಿಯಾದಂತೆ ಹರ್ಷಿತಾ ದಹಿಯಾ ಎಂಬ ಗಾಯಕಿ ಕಾರ್ಯಕ್ರಮ ಮುಗಿಸಿ ದೆಹಲಿಯ ನರೇಲಾದ ನಿವಾಸಕ್ಕೆ ವಾಪಾಸಾಗುತ್ತಿದ್ದ ವೇಳೆ ದಾಳಿ ನಡೆದಿದೆ.

ಕಾರಿನಲ್ಲಿದ್ದ ನಾಲ್ವರು ದುಷ್ಕರ್ಮಿಗಳು ಹರ್ಷಿತಾ ಪ್ರಯಾಣಿಸುತ್ತಿದ್ದ ಕಾರನ್ನು  ಹಿಂಬಾಲಿಸಿ ಚಾಮ್ರಾರಾ ಎಂಬಲ್ಲಿ  ಅಡ್ಡಗಟ್ಟಿ  ಮನಬಂದಂತೆ ಗುಂಡು ಹಾರಿಸಿ  ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. 

ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಹರ್ಷಿತಾರ ಶವವನ್ನು ಪಾಣಿಪತ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿಡಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು , ಹತ್ಯೆಗೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next