Advertisement

ಪ್ರೊ ಕಬಡ್ಡಿಯಲ್ಲಿ ಹರ್ಯಾಣಿಗರದ್ದೇ ಆಟ!

06:00 AM Sep 12, 2017 | |

ಸೋನೆಪತ್‌ (ಹರ್ಯಾಣ): ಒಂದೊಂದು ರಾಜ್ಯಗಳಿಗೆ ಒಂದೊಂದು ವಿಶೇಷ ಗುಣವಿರುತ್ತದೆ. ಭಾರತದ ಮಟ್ಟಿಗೆ ಹರ್ಯಾಣವೆಂದರೆ ಕ್ರೀಡಾಪಟುಗಳ ಕಣಜವೆಂದು ಹೇಳಬಹುದು. ಕಪಿಲ್‌ದೇವ್‌, ವಿಜೇಂದರ್‌ ಸಿಂಗ್‌, ವಿಕಾಸ್‌ ಕೃಷ್ಣನ್‌, ಸಾಕ್ಷಿ ಮಲಿಕ್‌ರಂತಹ ದಿಗ್ಗಜರನ್ನು ಹುಟ್ಟು ಹಾಕಿರುವ ಹರ್ಯಾಣ, ಪ್ರೊ ಕಬಡ್ಡಿ ಆಟಗಾರರ ಪೂರೈಕೆಯಲ್ಲಿ ಆಧಿಪತ್ಯ ಸ್ಥಾಪಿಸಿದೆ. ಪ್ರೊ ಕಬಡ್ಡಿಯಲ್ಲಿ ಆಡುತ್ತಿರುವ ಶೇ.70ರಷ್ಟು ಆಟಗಾರರು ಹರ್ಯಾಣದವರು, ಅದರಲ್ಲೂ ಸೋನೆಪತ್‌, ರೋಹrಕ್‌ ಆಸುಪಾಸುನವರು ಎಂದರೆ ನೀವು ನಂಬಲೇಬೇಕು.

Advertisement

ಪ್ರೊ ಕಬಡ್ಡಿಯಲ್ಲಿ ಹರ್ಯಾಣ ಮತ್ತು ಸೋನೆಪತ್‌ನ ಪ್ರಭಾವ ಅರ್ಥವಾಗಬೇಕೆಂದರೆ ಬೆಂಗಳೂರು ಬುಲ್ಸ್‌ ತಂಡದಲ್ಲಿನ ಆಟಗಾರರನ್ನು ಗಮನಿಸಬೇಕು. ಇಲ್ಲಿನ 12 ಆಟಗಾರರು ಹರ್ಯಾಣದವರು! ಇನ್ನುಳಿದಂತೆ ಇರುವ 11 ತಂಡಗಳಲ್ಲೂ ಹರ್ಯಾಣ ಆಟಗಾರರಿಗೆ ಗರಿಷ್ಠ ಸ್ಥಾನ ಮೀಸಲಾಗಿದೆ. ಭಾರತ ತಂಡದ ಹಾಲಿ ನಾಯಕ ಅನೂಪ್‌ ಕುಮಾರ್‌, ಮಾಜಿ ನಾಯಕ ರಾಕೇಶ್‌ ಕುಮಾರ್‌, ಉಪನಾಯಕ ಮಂಜೀತ್‌ ಚಿಲ್ಲರ್‌, ಬೆಂಗಳೂರು ಬುಲ್ಸ್‌ ನಾಯಕ ರೋಹಿತ್‌ ಕುಮಾರ್‌ ಇಂತಹ ಕಬಡ್ಡಿ ದಿಗ್ಗಜರೆಲ್ಲ ಹರ್ಯಾಣದವರೇ! ಇಷ್ಟು ಮಾತ್ರವಲ್ಲ ದೇಶದ ಕಬಡ್ಡಿ ರಾಜಧಾನಿ ಎಂದು ಕರೆಸಿಕೊಳ್ಳುವ ನಿಜಾಮ್‌ಪುರ ಇರುವುದೂ ಹರ್ಯಾಣದಲ್ಲೇ.

ಪ್ರಸ್ತುತ 5ನೇ ಆವೃತ್ತಿ ಪ್ರೊ ಕಬಡ್ಡಿಯ ಒಂದೆರಡು ತಂಡ ಹೊರತುಪಡಿಸಿ ಉಳೆದೆಲ್ಲ ತಂಡಗಳಲ್ಲಿ ಕನಿಷ್ಠವೆಂದರೂ 3 ಆಟಗಾರರು ಹರ್ಯಾಣ ಮೂಲದವರೇ ಆಗಿದ್ದಾರೆ. ಅಂದರೆ ಸದ್ಯ ಪ್ರೊ ಕಬಡ್ಡಿ ಆವೃತ್ತಿಯಲ್ಲಿ ಶೇ.70ರಷ್ಟು ಮಂದಿ ಹರ್ಯಾಣದವರೇ ಆಗಿದ್ದಾರೆ. ಇನ್ನುಳಿದಂತೆ ಉಳಿದೆಲ್ಲ ರಾಜ್ಯಗಳ ಪಾಲು ಶೇ.30 ಮಾತ್ರ. ಕರ್ನಾಟಕದ ಬೆರಳೆಣಿಕೆಯಷ್ಟು ಆಟಗಾರರು ಮಾತ್ರ ಪ್ರೊದಲ್ಲಿ ಆಡುತ್ತಿದ್ದಾರೆನ್ನುವುದು ಗಮನಿಸಿದರೆ ಹರ್ಯಾಣದ ಮಹತ್ವ ಅರ್ಥವಾಗುತ್ತದೆ.

ಕುಸ್ತಿಯಿಂದಾಗಿ ಕಬಡ್ಡಿಗೆ ಬಲ
ಕಬಡ್ಡಿ ಒಂದು ರೀತಿ ಕುಸ್ತಿಯನ್ನು ಹೋಲುತ್ತದೆ. ಆದ್ದರಿಂದ ಕುಸ್ತಿ ಗೊತ್ತಿರುವವರಿಗೆ ಕಬಡ್ಡಿ ಸುಲಭ. ಗಮನಿಸಬೇಕಾದ ಸಂಗತಿಯೆಂದರೆ ಹರ್ಯಾಣ ಕುಸ್ತಿಗೂ ಖ್ಯಾತನಾಮ ರಾಜ್ಯ. ಹರ್ಯಾಣದ ಬಹುತೇಕ ಕಬಡ್ಡಿ ಆಟಗಾರರಿಗೆ ಕುಸ್ತಿ ಹಿನ್ನೆಲೆಯಿದೆಯಂತೆ. ಈ ಕುಸ್ತಿಪಟುಗಳಿಂದಾಗಿ ಕಬಡ್ಡಿಗೂ ಹೆಚ್ಚಿನ ಬಲ ಬಂದಿದೆ ಎಂದು ಮುಂಬೈ ಕೋಚ್‌ ರವಿ ಶೆಟ್ಟಿ ವಿಶ್ಲೇಷಿಸುತ್ತಾರೆ.

ಹರ್ಯಾಣದ ಜನ ಕ್ರೀಡೆಗಾಗಿ ತಮ್ಮ ಜೀವನವನ್ನೇ ಮೀಸಲಿಡುತ್ತಾರೆ. ನಿರುದ್ಯೋಗದ ಸಮಸ್ಯೆಯೂ ಇದರಲ್ಲಿದೆ. ಉದ್ಯೋಗವಿಲ್ಲದಿರುವುದರಿಂದ ಅಂತಹವರು ಕ್ರೀಡೆಯ ಕಡೆ ಗಮನ ಹರಿಸುತ್ತಾರೆ. ಬೆಳಗ್ಗೆ ಎದ್ದು ಒಂದು ಲೀಟರ್‌ ಹಾಲು ಕುಡಿದು, 10 ಮೊಟ್ಟೆ ತಿಂದು ಅಭ್ಯಾಸ ಆರಂಭಿಸುತ್ತಾರೆ. ಅಲ್ಲದೆ ಸೋನೆಪತ್‌ ಮುಂತಾದ ಕಬಡ್ಡಿ ಪ್ರಿಯ ಪ್ರದೇಶದ ಜನರಿಗೆ ಕುಡಿತ, ಜೂಜು, ಧೂಮಪಾನದಂತಹ ಚಟಗಳೇ ಇಲ್ಲ. ಕ್ರೀಡೆಯ ಮೇಲಿನ ಪ್ರೀತಿಯೇ ಇದಕ್ಕೆ ಕಾರಣವೆನ್ನುತ್ತಾರೆ ರವಿಶೆಟ್ಟಿ.

Advertisement

ಯಾವ ತಂಡದಲ್ಲಿ ಯಾರ್ಯಾರು?
ಬೆಂಗಾಲ್‌ ವಾರಿಯರ್:
ಸುರ್ಜಿತ್‌ ಸಿಂಗ್‌, ವೀರೇಂದ್ರ ಸಿಂಗ್‌, ದೀಪಕ್‌ ನರ್ವಾಲ್‌, ವಿನೋದ್‌, ವಿಕಾಸ್‌, ಕುಲದೀಪ್‌.
ಬೆಂಗಳೂರು ಬುಲ್ಸ್‌: ರೋಹಿತ್‌ ಕುಮಾರ್‌, ಸುಮಿತ್‌ ಸಿಂಗ್‌, ರವೀಂದರ್‌ ಪಾಹಲ್‌, ಅಜಯ್‌, ಸಚಿನ್‌ ಕುಮಾರ್‌, ಗುರ್ವಿಂದರ್‌, ಮಹೇಂದರ್‌ ಸಿಂಗ್‌, ಪ್ರದೀಪ್‌ ನರ್ವಾಲ್‌, ಕುಲದೀಪ್‌ ಸಿಂಗ್‌, ಅಂಕಿತ್‌ ಸಾಂಗ್ವಾನ್‌, ಅಮಿತ್‌, ಪ್ರೀತಮ್‌, ಸುನೀಲ್‌ ಜೈಪಾಲ್‌
ದಬಾಂಗ್‌ ಡೆಲ್ಲಿ: ರವಿ ದಲಾಲ್‌, ವಿಶಾಲ್‌, ಸುನೀಲ್‌, ವಿಪಿನ್‌ ಮಲಿಕ್‌, ಸತ್ಪಾಲ್‌ ಸಿಂಗ್‌
ಗುಜರಾತ್‌ ಜೈಂಟ್ಸ್‌: ರೋಹಿತ್‌ ಗುಲಿಯಾ, ಮಹಿಪಾಲ್‌ ನರ್ವಾಲ್‌, ಮನೋಜ್‌ ಕುಮಾರ್‌, ಪವನ್‌ ಕುಮಾರ್‌, ರಾಕೇಶ್‌ ನರ್ವಾಲ್‌
ಹರ್ಯಾಣ ಸ್ಟೀಲರ್ಸ್‌: ಸುರೇಂದ್ರ ನಾಡಾ, ಮೋಹಿತ್‌ ಚಿಲ್ಲರ್‌, ಸೋನು ನರ್ವಾಲ್‌, ಸುರ್ಜಿತ್‌ ಸಿಂಗ್‌, ದೀಪಕ್‌ ಕುಮಾರ್‌ ದಹಿಯಾ, ವಜೀರ್‌ ಸಿಂಗ್‌, ಪ್ರಮೋದ್‌ ನರ್ವಾಲ್‌, ವಿಕಾಸ್‌ ಕಾಂಡೋಲೆ, ಆಶೀಷ್‌ ಚೋಕರ್‌, ಕುಲದೀಪ್‌ ಸಿಂಗ್‌.
ಜೈಪುರ ಪಿಂಕ್‌ ಪ್ಯಾಂಥರ್ಸ್‌: ಜಸ್ವೀರ್‌ ಸಿಂಗ್‌, ಸೋಮ್‌ವೀರ್‌ ಶೇಖರ್‌, ರವೀಂದರ್‌ ಕುಮಾರ್‌.
ಪಾಟ್ನಾ ಪೈರೇಟ್ಸ್‌: ಪ್ರದೀಪ್‌ ನರ್ವಾಲ್‌, ವಿಜಯ್‌, ಪ್ರವೀಣ್‌ ಬಿರ್ವಾಲ್‌, ಮನೀಶ್‌, ಜವಾಹರ್‌, ವೀರೇಂದ್ರ ಸಿಂಗ್‌, ವಿನೋದ್‌ ಕುಮಾರ್‌.
ಪುನೇರಿ ಪಲ್ಟಾನ್ಸ್‌: ದೀಪಕ್‌ ಹೂಡಾ, ಸಂದೀಪ್‌ ನರ್ವಾಲ್‌, ನರೇಂದರ್‌ ಹೂಡಾ.ತಮಿಳ್‌ ತಲೈವಾಸ್‌: ಅಮಿತ್‌ ಹೂಡಾ, ರಾಜೇಶ್‌, ಸೋಮ್‌ಬೀರ್‌.
ತೆಲುಗು ಟೈಟಾನ್ಸ್‌: ಸೋಮ್‌ಬೀರ್‌, ರಾಕೇಶ್‌ ಕುಮಾರ್‌, ಅಮಿತ್‌ ಸಿಂಗ್‌, ವಿನೋದ್‌, ಮುನೀಶ್‌.
ಯುಪಿ ಯೋಧಾ: ರಾಜೇಶ್‌ ನರ್ವಾಲ್‌, ಗುರ್ವಿಂದರ್‌ ಸಿಂಗ್‌, ಸುರೇಂದರ್‌ ಸಿಂಗ್‌, ರೋಹಿತ್‌, ಗುಲ್ವಿàರ್‌ ಸಿಂಗ್‌.
ಯು ಮುಂಬಾ: ಅನೂಪ್‌ ಕುಮಾರ್‌, ಕುಲದೀಪ್‌ ಸಿಂಗ್‌, ದೀಪಕ್‌, ಜೋಗಿಂದರ್‌ ಸಿಂಗ್‌..

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next