ಚಂಡೀಗಢ್: ಮಧ್ಯಪ್ರದೇಶದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಆಮ್ ಆದ್ಮಿ ಪಕ್ಷ ಮತ್ತು ಐಎನ್ ಎಲ್ ಡಿ ಪಕ್ಷದ ಅಭ್ಯರ್ಥಿಗಳು ಹಲವು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪ್ರಧಾನಿ ನರೇಂದ್ರ ಮೋದಿಗೆ ಇ-ಮೇಲ್ ಮೂಲಕ ಬೆದರಿಕೆ; ಮಾಜಿ ಐಐಟಿ ವಿದ್ಯಾರ್ಥಿ ಬಂಧನ
ನವೆಂಬರ್ 30ಕ್ಕೂ ಮೊದಲು ಗೆಲುವು ಸಾಧಿಸಿದ ಅಭ್ಯರ್ಥಿಗಳ ಕುರಿತು ಹರ್ಯಾಣ ರಾಜ್ಯ ಸರ್ಕಾರ ಗಜೆಟ್ ನೋಟಿಫಿಕೇಶನ್ ಹೊರಡಿಸಲಿದೆ ಎಂದು ಹಿರಿಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಹರ್ಯಾಣದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಅಂಬಾಲಾ, ಯಮುನಾನಗರ್ ಮತ್ತು ಗುರುಗ್ರಾಮ್ ಸೇರಿದಂತೆ ಏಳು ಜಿಲ್ಲೆಗಳಲ್ಲಿನ 102 ಸ್ಥಾನಗಳಲ್ಲಿ ಆಡಳಿತಾರೂಢ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ ಪಂಚಕುಲಾದಲ್ಲಿ ಬಿಜೆಪಿ 10 ಸ್ಥಾನಗಳಲ್ಲಿ ಪರಾಜಯಗೊಂಡಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸಿರ್ಸಾ, ಅಂಬಾಲಾ, ಯಮುನಾನಗರ್ ಮತ್ತು ಜಿಂದ್ ಜಿಲ್ಲೆಯ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಜಯಸಾಧಿಸುವ ಮೂಲಕ ಖಾತೆಯನ್ನು ತೆರೆದಿದೆ.
ದ ಇಂಡಿಯನ್ ಲೋಕದಳ ಜಿಲ್ಲಾ ಪರಿಷತ್ ನ 72 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಪಕ್ಷದ ಯಾವುದೇ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಚುನಾವಣೆಯಲ್ಲಿ ಹಲವು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಹರ್ಯಾಣದಲ್ಲಿ 143 ಪಂಚಾಯತ್ ಸಮಿತಿ ಹಾಗೂ 22 ಜಿಲ್ಲಾ ಪರಿಷತ್ ಗೆ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. 22 ಜಿಲ್ಲಾ ಪರಿಷತ್ ನಲ್ಲಿ 411 ಸದಸ್ಯರಿದ್ದು, ಇವರು 22 ಜಿಲ್ಲಾ ಪರಿಷತ್ ಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.