ಚಂಡೀಗಢ: ಹರ್ಯಾಣದ ಪಾಲಿಕೆಗಳಿಗೆ ಇತ್ತೀಚೆಗೆ ಚುನಾವಣೆ ನಡೆದಿದ್ದು, ಅದರ ಫಲಿತಾಂಶ ಬುಧವಾರ ಹೊರಬಿದ್ದಿದೆ. 46 ಪುರಸಭೆಗಳ ಪೈಕಿ ಬಿಜೆಪಿ ಮತ್ತು ಮೈತ್ರಿ ಪಕ್ಷವಾಗಿರುವ ಜೆಜೆಪಿ 25 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ.
18 ಮುನ್ಸಿಪಾಲ್ ಕೌನ್ಸಿಲ್‌ಗಳ ಅಧ್ಯಕ್ಷ ಸ್ಥಾನಕ್ಕೆ ಹಾಗೂ 28 ಮುನ್ಸಿಪಾಲ್ ಕಮಿಟಿಗಳಿಗೆ ಚುನಾವಣೆ ನಡೆದಿತ್ತು.
ಮುನ್ಸಿಪಾಲ್ ಕೌನ್ಸಿಲ್‌ನ 10 ಸ್ಥಾನ ಬಿಜೆಪಿ ಗೆದ್ದರೆ, ಜೆಜೆಪಿ 1, ಐಎನ್‌ಎಲ್‌ಡಿ 1 ಮತ್ತು ಪ್ರತ್ಯೇಕರ ಅಭ್ಯರ್ಥಿಗಳು 6 ಸ್ಥಾನ ಗೆದ್ದಿದ್ದಾರೆ.
ಮುನ್ಸಿಪಾಲ್ ಕಮಿಟಿಗಳಲ್ಲಿ 12 ಸ್ಥಾನ ಬಿಜೆಪಿ, 2 ಸ್ಥಾನ ಜೆಜೆಪಿ, ಮತ್ತು ಪಕ್ಷೇತರ ಅಭ್ಯರ್ಥಿಗಳು 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ 1 ಸ್ಥಾನ ದೊರೆತಿದ್ದು, ಮೊದಲ ಬಾರಿಗೆ ಹರ್ಯಾಣದಲ್ಲಿ ಖಾತೆ ತೆರೆದಿದೆ.