Advertisement

Haryana ‘ಎಲ್ಲರನ್ನೂ ರಕ್ಷಿಸಲು ಸಾಧ್ಯವಿಲ್ಲ’: ವಿವಾದಕ್ಕೆ ಗುರಿಯಾದ ಸಿಎಂ ಖಟ್ಟರ್

10:00 PM Aug 02, 2023 | Team Udayavani |

ಚಂಡೀಗಢ: ನುಹ್ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ನೀಡಿದ “ಎಲ್ಲರನ್ನೂ ರಕ್ಷಿಸಲು ಸಾಧ್ಯವಿಲ್ಲ” ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಯಿತು.

Advertisement

ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಂತೆ ಖಟ್ಟರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ ಸಿಎಂ ಖಟ್ಟರ್. ರಾಜ್ಯವು ಎಲ್ಲರನ್ನೂ ರಕ್ಷಿಸಲು ಸಾಧ್ಯವಿಲ್ಲ. ಯಾರೂ ಆ ರೀತಿ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಗಲಭೆ ನಡೆಸಿದವರಿಂದಲೇ ಪರಿಹಾರ ವಸೂಲಿ
ಹಿಂಸಾಚಾರದಲ್ಲಿ ಆಸ್ತಿ ಕಳೆದುಕೊಂಡವರ ಕುರಿತು ಮಾತನಾಡಿದ ಖಟ್ಟರ್, ಗಲಭೆಕೋರರಿಂದಲೇ ಪರಿಹಾರವನ್ನು ಪಡೆಯುವುದಾಗಿ ಹೇಳಿದ್ದಾರೆ. ಸರ್ಕಾರಿ ಆಸ್ತಿ ಹಾನಿಗೆ ಮಾತ್ರ ರಾಜ್ಯ ಸರ್ಕಾರ ಪರಿಹಾರ ನೀಡಲಿದೆ. ಆದಾಗ್ಯೂ, ಖಾಸಗಿ ಆಸ್ತಿಗೆ ಉಂಟಾದ ಹಾನಿಯನ್ನು ಸರಿದೂಗಿಸಲು ರಾಜ್ಯ ಸರಕಾರವು ಜವಾಬ್ದಾರನಲ್ಲ. ಪರಿಹಾರವನ್ನು ನೀಡುವ ಕಾಯಿದೆಯನ್ನು ನಾವು ಅಂಗೀಕರಿಸಿದ್ದೇವೆ. ಆದರೆ ಖಾಸಗಿ ಆಸ್ತಿಗೆ ಸಂಬಂಧಿಸಿದಂತೆ, ನಷ್ಟವನ್ನು ಉಂಟುಮಾಡಿದವರು ಅದನ್ನು ಸರಿದೂಗಿಸಲು ಜವಾಬ್ದಾರರಾಗಿರುತ್ತಾರೆ. ಆದ್ದರಿಂದ, ನಾವು ಸಾರ್ವಜನಿಕ ಆಸ್ತಿಯ ನಷ್ಟವನ್ನು ಒದಗಿಸುತ್ತೇವೆ ಮತ್ತು ಖಾಸಗಿ ಆಸ್ತಿಗೆ ಗಲಭೆ ನಡೆಸಿದವರಿಂದಲೇ ಪರಿಹಾರ ವಸೂಲಿ ಮಾಡಲಾಗುವುದು’’ ಎಂದರು.

ತಪ್ಪಾಗಿ ವ್ಯಾಖ್ಯಾನಿಸಲಾಗಿದೆ

ವಿವಾದಕ್ಕೆ ಗುರಿಯಾದ ಬಳಿಕ ಪ್ರತಿಕ್ರಿಯಿಸಿದ ಸಿಎಂ ಖಟ್ಟರ್ ”ತಮ್ಮ ಹೇಳಿಕೆಯನ್ನು ತಪ್ಪಾದ ಸಂದರ್ಭದಲ್ಲಿ ಅರ್ಥೈಸಲಾಗಿದೆ. ಜನರನ್ನು ರಕ್ಷಿಸಲು ಭದ್ರತಾ ಅಧಿಕಾರಿಗಳನ್ನು ಹೊಂದಿರುವುದರ ಹೊರತಾಗಿ ಸಮಾಜದಲ್ಲಿ ಜನರ ನಡುವೆ ಸೌಹಾರ್ದತೆ ಇರುವಂತೆ ನೋಡಿಕೊಳ್ಳುವುದು ಮುಖ್ಯ ಎನ್ನುವುದು ನನ್ನ ಭಾವನೆಯಾಗಿತ್ತು. ಭದ್ರತೆಯ ವಾತಾವರಣ ನಿರ್ಮಿಸಲು ಮೊದಲು ಸೌಹಾರ್ದತೆ ಹೊಂದಬೇಕು” ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

ಹಿಂಸಾಚಾರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಖಟ್ಟರ್ ಹೇಳಿದ್ದಾರೆ. ಘರ್ಷಣೆಗೆ ಸಂಬಂಧಿಸಿದಂತೆ 116 ಜನರನ್ನು ಬಂಧಿಸಲಾಗಿದೆ ಮತ್ತು 190 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರು ಪೊಲೀಸ್ ಅಧಿಕಾರಿಗಳ ಕುಟುಂಬಗಳಿಗೆ ಹರಿಯಾಣ ಸರ್ಕಾರ 57 ಲಕ್ಷ ರೂ. ಪರಿಹಾರ ಘೋಷಿಸಿದೆ.

ನುಹ್ ಜಿಲ್ಲೆಯಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ಮೆರವಣಿಗೆಯನ್ನು ತಡೆಯಲು ಗುಂಪೊಂದು ಯತ್ನಿಸಿದ ನಂತರ ಹಿಂಸಾಚಾರ ಸಂಭವಿಸಿದೆ. ಎರಡು ಕೋಮುಗಳ ನಡುವೆ ಘರ್ಷಣೆ ಭುಗಿಲೆದ್ದಿದ್ದು ,ಆರು ಜನರು ಸಾವನ್ನಪ್ಪಿದ್ದು, ಕಳೆದ ಎರಡು ದಿನಗಳಿಂದ ಗುಂಪುಗಳು ಹಲವಾರು ಕಾರುಗಳು ಮತ್ತು ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ.

ನುಹ್ ಹಿಂಸಾಚಾರದ ಸುದ್ದಿ ಹರಡುತ್ತಿದ್ದಂತೆ, ಪಕ್ಕದ ಗುರುಗ್ರಾಮ್ ಜಿಲ್ಲೆಯ ಸೊಹ್ನಾದಲ್ಲಿ ಗುಂಪುಗಳು ನಾಲ್ಕು ವಾಹನಗಳು ಮತ್ತು ಅಂಗಡಿಗೆ ಬೆಂಕಿ ಹಚ್ಚಿವೆ.

Advertisement

Udayavani is now on Telegram. Click here to join our channel and stay updated with the latest news.

Next