Advertisement

ಹರ್ಯಾಣದಲ್ಲಿ ಕ್ರಿಮಿನಲ್ ಹಿನ್ನಲೆಯುಳ್ಳ 117 ಅಭ್ಯರ್ಥಿಗಳು ಕಣದಲ್ಲಿ

10:12 AM Oct 17, 2019 | Hari Prasad |

ನವದೆಹಲಿ: ವಿಧಾನಸಭಾ ಚುನಾವಣೆಯನ್ನು ಎದುರಿಸಲು ಸಜ್ಜಾಗಿರುವ ಹರ್ಯಾಣದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ಇಲ್ಲಿ ಕಣದಲ್ಲಿ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವವರು ಈ ಬಾರಿ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Advertisement

ಇವೆಲ್ಲದರ ನಡುವೆ ಒಟ್ಟು 90 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಈ ಪುಟ್ಟ ರಾಜ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ 117 ಜನ ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದಾರೆ ಮತ್ತು ಇವರಲ್ಲಿ 70 ಜನರ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಚಟುವಟಿಕೆಗಳ ಆರೋಪವಿರುವುದೂ ಇದೀಗ ಬಹಿರಂಗಗೊಂಡಿದೆ. ಈ ವಿಚಾರವನ್ನು ಹರ್ಯಾಣ ಚುನಾವಣಾ ನಿರೀಕ್ಷಣಾ ಮತ್ತು ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆ ಬಹಿರಂಗಪಡಿಸಿದೆ.

ಕಣದಲ್ಲಿರುವ ಒಟ್ಟು 1169 ಅಭ್ಯರ್ಥಿಗಳ ಪೈಕಿ 1138 ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆಯ ವೇಳೆ ನೀಡಿರುವ ಅಫಿದವಿತ್ ಪರಿಶೀಲನೆಯ ಬಳಿಕ ಎ.ಡಿ.ಆರ್. ಈ ಮಾಹಿತಿಯನ್ನು ಹೊರಹಾಕಿದೆ. ಇನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಸ್ಪರ್ಧಿಸುತ್ತಿರುವ ಒಟ್ಟು 87 ಅಭ್ಯರ್ಥಿಗಳ ಪೈಕಿ 13 ಅಭ್ಯರ್ಥಿಗಳ ಮೆಲೆ ವಿವಿಧ ರೀತಿಯ ಕ್ರಿಮಿನಲ್ ಪ್ರಕರಣಗಳಿದ್ದರೆ, ಬಿ.ಎಸ್.ಪಿ.ಯ ಒಟ್ಟು 86 ಅಭ್ಯರ್ಥಿಗಳಲ್ಲಿ 12 ಜನ ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದಾರೆ.

ಇನ್ನು ಜನ್ ನಾಯಕ್ ಜನತಾ ಪಕ್ಷದ ಒಟ್ಟು 87 ಅಭ್ಯರ್ಥಿಗಳಲ್ಲಿ 10 ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಐ.ಎನ್.ಎಲ್.ಡಿ. ಪಕ್ಷದಿಂದ ಸ್ಪರ್ಧಿಸುತ್ತಿರುವ 80 ಸ್ಪರ್ಧಿಗಳಲ್ಲಿ ಏಳು ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇನ್ನು ಅಧಿಕಾರರೂಢ ಭಾರತೀಯ ಜನತಾ ಪಕ್ಷದ ಒಟ್ಟು 89 ಅಭ್ಯರ್ಥಿಗಳಲ್ಲಿ ಮೂವರು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.

ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ ಒಟ್ಟು ಐವರು ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಇದರಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳಿರುವುದು ವಿಶೇಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next