Advertisement

Haryana; ಶೇ.96ರಷ್ಟು ಶಾಸಕರು ಕೋಟ್ಯಧಿಪತಿಗಳು: ಎಡಿಆರ್‌ ವರದಿ ಮಾಹಿತಿ

01:36 AM Oct 11, 2024 | Team Udayavani |

ಹೊಸದಿಲ್ಲಿ: ಹರಿಯಾಣ ವಿಧಾನಸಭೆಗೆ ಹೊಸದಾಗಿ ನೇಮಕವಾದ 90 ಶಾಸಕರಲ್ಲಿ 86 ಮಂದಿ ಕೋಟ್ಯಧಿಪತಿಗಳು ಎಂದು ಎಡಿಆರ್‌(ಅಸೋಸಿಯೇಶನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾರ್ಮ್ಸ್ ) ವರದಿ ತಿಳಿಸಿದೆ. ಅಲ್ಲದೇ ಇವರಲ್ಲಿ 12 ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ ಎಂದೂ ಹೇಳಿದೆ.

Advertisement

ವಿಧಾನಸಭೆಯಲ್ಲಿ ಜಯಗಳಿಸಿದ 90 ಮಂದಿ ಶಾಸಕರು ಸಲ್ಲಿಸಿದ್ದ ಅಫಿದವಿತ್‌ ಆಧರಿಸಿ ಈ ವರದಿ ತಯಾರಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2019ರಲ್ಲಿ ಶೇ.93ರಷ್ಟು ಕೋಟ್ಯಧಿಪತಿಗಳಿದ್ದರು. ಹಾಲಿ ಶಾಸಕರಲ್ಲಿ ಶೇ.44ರಷ್ಟು ಜನರ ಆಸ್ತಿ 10 ಕೋಟಿ ರೂ.ಗೂ ಅಧಿಕವಿದ್ದು, ಶೇ.2.2ರಷ್ಟು ಮಂದಿಯ ಆಸ್ತಿ ಮಾತ್ರ 20 ಕೋಟಿ ರೂ. ದಾಟಿದೆ. ಪಕ್ಷವಾರು ಗಮನಿಸಿದರೆ ಬಿಜೆಪಿಯ ಶೇ.96ರಷ್ಟು, ಕಾಂಗ್ರೆಸ್‌ನ ಶೇ.95ರಷ್ಟು, ಐಎನ್‌ಎಲ್‌ಡಿ, ಪಕ್ಷೇತರ ಶಾಸಕ­ರಲ್ಲಿ ಶೇ.100ರಷ್ಟು ಮಂದಿ ಕೋಟ್ಯಧಿಪತಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next