Advertisement
ಕಾಂಗ್ರೆಸ್‌ನ ಅತಿಯಾದ ಆತ್ಮವಿಶ್ವಾಸ, ಪ್ರಾದೇಶಿಕ ಪಕ್ಷಗಳನ್ನು ನಿರ್ಲಕ್ಷಿಸುವ ಗುಣ, ಗಟ್ಟಿ ನಿರ್ಧಾರ ಮಾಡಲಾಗದ ಹೈಕಮಾಂಡ್‌ನಿಂದಲೇ ಈ ಸೋಲನ್ನು ಅನುಭವಿಸುವ ಪರಿಸ್ಥಿತಿ ಬಂದಿದೆ ಎಂದು ಒಕ್ಕೂಟದ ಮೈತ್ರಿ ಪಕ್ಷಗಳು ಕಿಡಿಯಾಗಿವೆ. ಶಿವಸೇನೆ ಉದ್ಧವ್ ಬಣ, ಆಪ್, ಟಿಎಂಸಿ, ಆರ್‌ಜೆಡಿ ಸೇರಿದಂತೆ ಹಲವು ಮಿತ್ರಪಕ್ಷಗಳು ಕಾಂಗ್ರೆಸ್ ಮೇಲಿನ ಅಸಮಾಧಾನವನ್ನು ಹೊರಹಾಕಿವೆ. ಶಿವಸೇನೆಯ ಮುಖವಾಣಿ “ಸಾಮ್ನಾ’ ಪತ್ರಿಕೆ ಕೂಡ ಕಾಂಗ್ರೆಸ್‌ನ ಹುಳುಕುಗಳನ್ನು ಮೇಲೆತ್ತಿ ತೋರುವ ಮೂಲಕ ಚಾಟಿ ಬೀಸಿದೆ.
Related Articles
Advertisement
ಯಾರಿಗೆ ಯಾರೂ ದೊಡ್ಡಣ್ಣ ಅಲ್ಲ- ಶಿವಸೇನೆ: ಹರಿಯಾಣ ಚುನಾವಣೆಯ ಫಲಿತಾಂಶ ಮಹಾರಾಷ್ಟ್ರದ ಮೇಲಾಗಲಿ, ಮೈತ್ರಿಕೂಟದ ಮೇಲಾಗಲಿ ಯಾವುದೇ ಪರಿಣಾಮ ಬೀರದು. ಆದರೂ ಈ ಚುನಾವಣ ಫಲಿ ತಾಂಶದಿಂದ ಕಾಂಗ್ರೆಸ್ ಕಲಿಯಬೇಕಿರುವುದು ಬಹಳ ಷ್ಟಿದೆ ಎಂದು ಶಿವಸೇನೆ ಉದ್ಧವ್ ಬಣದ ನಾಯಕ, ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಯಾರೋ ಯಾರಿಗೋ ದೊಡ್ಡಣ್ಣ ಎಂದು ಭಾವಿಸುವ ಅಗತ್ಯವಿಲ್ಲ ಎಂದು ಪ್ರಾದೇಶಿಕ್ಷ ಪಕ್ಷಗಳಿಗೆ ಮನ್ನಣೆ ನೀಡಬೇಕೆಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಅಹಂಕಾರ ಒಳ್ಳೆಯದಲ್ಲ- ಟಿಎಂಸಿ: ಟಿಎಂಸಿ ಸಂಸದ ಸಾಕೇತ್ ಗೋಖಲೆ ಕಾಂಗ್ರೆಸ್‌ನ ಅಹಂಕಾರವೇ ಸೋಲಿಗೆ ಕಾರಣ ಎಂದು ಚಾಟಿ ಬೀಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ, ಚುನಾವಣೆಯನ್ನು ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮೂಲೆ ಗುಂಪಾಗಿಸುವುದು ಸರಿ ಅಲ್ಲ. ಎಷ್ಟೇ ದೊಡ್ಡ ಪಕ್ಷವಾ ದರೂ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ತನ್ನದೇ ಸ್ಥಾನ ಮಾನವಿದೆ. ಅಲ್ಲಿ ನಮ್ಮ ಗೆಲುವಿಗೆ ಅನುವು ಮಾಡಿ ಕೊಡುವುದೂ ಕೂಡ ಅದೇ ಪಕ್ಷಗಳೇ, ಅವು ಗಳನ್ನು ಕೀಳಾಗಿ ಕಂಡು ಅಹಂಕಾರ ತೋರಿದರೆ ಪರಿ ಣಾಮ ಹೀಗೇ ಇರುತ್ತದೆ. ಇನ್ನಾದರೂ ಕಲಿಯಿರಿ ಎಂದಿದ್ದಾರೆ.
ಮೈತ್ರಿ ತಣ್ತೀ ಗೌರವಿಸಿ- ಆರ್‌ಜೆಡಿ: ಕಾಂಗ್ರೆಸ್‌ಗೆ ಇದು ಆತ್ಮಾವಲೋಕನದ ಸಮಯ. ದೊಡ್ಡ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಗೌರವಿಸಬೇಕು. ಎಲ್ಲರೂ ತ್ಯಾಗ ಮಾಡಿದರೆ ಮಾತ್ರ ಗೆಲುವು ಎಂದು ಆರ್‌ಜೆಡಿ ವಕ್ತಾರ ಸುಭೋದ್ ಮೆಹ್ತಾ ಹೇಳಿದ್ದಾರೆ.
ಹರಿಯಾಣದ ಅನಿರೀಕ್ಷಿತ ಫಲಿ ತಾಂಶದ ಬಗ್ಗೆ ವಿಶ್ಲೇಷಿಸುತ್ತಿ ದ್ದೇವೆ. ಹಲವು ವಿಧಾ ನಸಭಾ ಕ್ಷೇತ್ರ ಗಳಿಂದಲೂ ಹಲ ವಾರು ದೂರುಗಳು ಬಂದಿವೆ. ಈ ವಿಚಾರಗಳನ್ನೆಲ್ಲಾ ಚುನಾ ವಣ ಆಯೋಗಕ್ಕೆ ತಿಳಿಸಿ, ಚರ್ಚಿಸುತ್ತೇವೆ.– ರಾಹುಲ್ ಗಾಂಧಿ, ವಿಪಕ್ಷ ನಾಯಕ ಚುನಾವಣೆಯಲ್ಲಿ ಸೋತ ತತ್‌ಕ್ಷಣವೇ ಇವಿಎಂಗಳನ್ನು ದೂಷಿಸುವುದು, ಚುನಾವಣೆ ಆಯೋಗ ಮತ್ತು ಪ್ರಜಾಪ್ರಭುತ್ವವನ್ನೇ ಪ್ರಶ್ನಿಸುವುದು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಹವ್ಯಾಸ ಆಗಿಬಿಟ್ಟಿದೆ. ಹರಿಯಾಣ ಚುನಾವಣೆ ಸೋಲಿನ ಬಳಿಕ ಆ ಪಕ್ಷದ ವರ್ತನೆ ಇದಕ್ಕೆ ತಾಜಾ ನಿದರ್ಶನ.
– ಅನಿಲ್ ಬಲೂನಿ, ಬಿಜೆಪಿ ರಾಜ್ಯಸಭಾ ಸಂಸದ