Advertisement
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮತ್ತು ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಆಡಳಿತ ಮಂಡಳಿ ಸದಸ್ಯ ಕೃಷ್ಣಮೂರ್ತಿ ಭಟ್, ಮಾಸ್ಟರ್‌ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ದೇಗುಲದ ಹೆಬ್ಟಾರ್ ಷಣ್ಮುಖ ಉಪಾರ್ಣ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಹಿರಿಯರಾದ ಸುಬ್ರಹ್ಮಣ್ಯ ಶಬರಾಯ, ಕೆ.ಎಸ್.ಎಸ್. ಕಾಲೇಜಿನ ಪ್ರಾಂಶುಪಾಲ ಪ್ರೊ| ಕೆ.ಆರ್. ಶೆಟ್ಟಿಗಾರ್, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಮೋನಪ್ಪ ಮಾನಾಡು, ಶ್ರೀ ದೇಗುಲದ ನಾಗೇಶ್ ಎ.ವಿ., ಜಾನು, ಪದ್ಮನಾಭ ಶೆಟ್ಟಿಗಾರ್, ರಾಜಲಕ್ಷ್ಮೀ ಶೆಟ್ಟಿಗಾರ್, ಹರೀಶ್ ಕೋನಡ್ಕ, ಗ್ರಾ.ಪಂ. ಸದಸ್ಯ ಮೋಹನದಾಸ ರೈ, ಗ್ರಾ.ಪಂ. ಸದಸ್ಯೆ ಸೌಮ್ಯಾ, ರತ್ನಕುಮಾರಿ, ಲೋಕೇಶ್ ಬಿ.ಎನ್., ಉಪನ್ಯಾಸಕ ರತ್ನಾಕರ ಎಸ್., ಭರತ್ ಕಲ್ಲಗದ್ದೆ, ಶೋಭಿತ್ ನಾಯರ್, ತಾರನಾಥ್ ಸಹಿತ ಸ್ಥಳೀಯ ಭಕ್ತರು ಭತ್ತದ ತೆನೆಗಳನ್ನು ಕಟಾವು ಮಾಡಿದರು. ಕಟಾವು ಮಾಡಿದ ತೆನೆಗಳನ್ನು ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಆವಶ್ಯಕತೆಗೆ ತಕ್ಕಷ್ಟು ತೆನೆಗಳನ್ನು ಮಾತ್ರ ಕಟಾವು ಮಾಡಲಾಯಿತು.
ಶ್ರೀ ದೇಗುಲದಲ್ಲಿ ನಡೆಯುವ ಹೊಸ್ತಾರೋಹಣದ ದಿನ ಬೇರೆ ಸ್ಥಳದಿಂದ ಕೊರಳು (ತೆನೆ) ತಂದು ಪೂಜೆ ಸಲ್ಲಿಸಿ ಭಕ್ತರಿಗೆ ವಿತರಿಸಲಾಗುತ್ತಿತ್ತು. ಇದರಿಂದಾಗಿ ಭಕ್ತರಿಗೆ ಬೆರಳೆಣಿಕೆಯ ತೆನೆಗಳು ದೊರಕುತ್ತಿತ್ತು. ಭಕ್ತರಿಗೆ ಸಾಕಷ್ಟು ತೆನೆಗಳು ದೊರಕಲಿ ಎನ್ನುವ ಉದ್ದೇಶದಿಂದ ಈ ವರ್ಷ ದೇವಸ್ಥಾನದ ಆಡಳಿತ ಮಂಡಳಿ ವಿನೂತನ ಯೋಜನೆಯನ್ನು ರೂಪಿಸಿ ದೇವಸ್ಥಾನದ ವತಿಯಿಂದ ಗದ್ದೆ ಮಾಡಿ ಅದರಲ್ಲಿ ಬಂದ ತೆನೆಗಳನ್ನು ಭಕ್ತರಿಗೆ ವಿತರಿಸಲು ವ್ಯವಸ್ಥೆ ಮಾಡಿತ್ತು. ಈ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲೂ ದೇವಸ್ಥಾನದ ವತಿಯಿಂದ ನಾಟಿ ಮಾಡಿದ ಭತ್ತದ ತೆನೆಯನ್ನು ವಿತರಿಸುವುದು ಶ್ರೇಷ್ಠ ಎನ್ನುವುದು ಕಂಡುಬಂದಿತ್ತು. ತೆನೆ ಬಲಿತು ದೊಡ್ಡದಾಗುವ ತನಕ ಈ ಬಾರಿ ಕಾದಿದ್ದರಿಂದ ಹೊಸ್ತಾರೋಹಣ ಕೂಡ ಈ ಬಾರಿ ವಿಳಂಬವಾಗಿತ್ತು. ಈ ಕುರಿತು ಒಂದಷ್ಟು ಅಪಸ್ವರಗಳು ಸಾರ್ವಜನಿಕರಿಂದ ವ್ಯಕ್ತಗೊಂಡಿತ್ತು.