Advertisement

ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಸುಗ್ಗಿಕಾಲ: ಫ್ರಿಡ್ಜ್, ಕಂಪ್ಯೂಟರ್‌, ಪ್ರಿಂಟರ್‌ಗಳ ಬೇಡಿಕೆ

10:30 AM Apr 23, 2020 | mahesh |

ಗೃಹಬಂಧನಕ್ಕೊಳಗಾದಂತಿರುವ ಜನ, ಒಮ್ಮೆ ಅದು ತೆರವಾದರೆ ಸಾಕು ಎಂದು ಕಾಯುತ್ತಿದ್ದಾರೆ. ಏಕೆಂದರೆ, ಎಷ್ಟೋ ಮನೆಗಳಲ್ಲಿ ಎಲೆಕ್ಟ್ರಾನಿಕ್‌ ಉಪಕರಣಗಳು ಕೆಟ್ಟು ಕೂತಿವೆ. ಹೊಸದರ ಖರೀದಿ ಹೋಗಲಿ, ರಿಪೇರಿಗೂ ಜನ ಸಿಗುತ್ತಿಲ್ಲ. ಈಗ ಸರ್ಕಾರ ಎಲೆಕ್ಟ್ರಾನಿಕ್‌ ಉಪಕರಣಗಳ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುವ ಸುಳಿವು ನೀಡಿದೆ. ಹೀಗಾಗಿ, ಜನ ಒಮ್ಮೆಲೆ ಉಪಕರಣಗಳ ಖರೀದಿಗೆ, ದುರಸ್ತಿಗೆ ಮುಗಿಬೀಳುವ ನಿರೀಕ್ಷೆಯಿದೆ.

Advertisement

ಖರೀದಿಸುವ ವಸ್ತುಗಳೇನು?
ಹವಾನಿಯಂತ್ರಕ, ಶೀತಕ (ರೆಫ್ರಿಜರೇಟರ್‌), ವ್ಯಾಕ್ಯೂಮ್‌ ಕ್ಲೀನರ್‌, ವಾಷಿಂಗ್‌ ಮಷಿನ್‌, ವಿದ್ಯುತ್‌ ಒಲೆ, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಪ್ರಿಂಟರ್‌. ಈಗ ಬೇಸಿಗೆಯಾಗಿರುವುದರಿಂದ ಹವಾನಿಯಂತ್ರಕ, ಶೀತಕಗಳಿಗೆ ಬೇಡಿಕೆ ಹೆಚ್ಚು. ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ಕಂಪ್ಯೂಟರ್‌, ಪ್ರಿಂಟರ್‌ನಂತಹ ಸಾಧನಗಳು ಅನಿವಾರ್ಯ.

ಬೇಡಿಕೆ ಇದೆ, ಪೂರೈಕೆ ಕಷ್ಟ
ಜನರು ಒಮ್ಮೆಗೆ ಅಂಗಡಿಗಳಿಗೆ ನುಗ್ಗಿದ ಕೂಡಲೇ ಅವರಿಗೆ ಬೇಕಾದ ವಸ್ತುಗಳು ಸಿಗುತ್ತವೆ ಎಂಬ ಖಾತ್ರಿಯಿಲ್ಲ. ಈಗ ಇಡೀ ಜಗತ್ತೇ ಸ್ತಬ್ಧವಾಗಿದೆ. ಹಾಗಾಗಿ ವಸ್ತುಗಳು ಬೇಕಿದ್ದರೂ ಅದರ ಪೂರೈಕೆಯಲ್ಲಿ ಕೊರತೆಯಾಗಲಿದೆ. ಫೆಬ್ರವರಿ, ಮಾರ್ಚ್‌ನಿಂದ ಚೀನಾದಿಂದಲೂ ಭಾರತಕ್ಕೆ ವಸ್ತುಗಳು ಕಾಲಿಟ್ಟಿಲ್ಲ.

ದುರಸ್ತಿಗೆ ಆನ್‌ಲೈನ್‌ ನೆರವು
ಎಲ್ಲ ಯಂತ್ರೋಪಕರಣಗಳನ್ನು ಆನ್‌ಲೈನ್‌ನಲ್ಲಿ ದುರಸ್ತಿ ಮಾಡಲು ಸಾಧ್ಯವಿಲ್ಲ. ಹೋಗಿಯೇ ಮಾಡಬೇಕು. ಆದರೆ ಸಾಧ್ಯವಾಗುತ್ತಿಲ್ಲ. ಆದರೂ ಲೈವ್‌ ಮೂಲಕ ಜನರಿಗೆ ಕೆಲ ಕಂಪನಿಗಳು ತಿಳಿವಳಿಕೆ ನೀಡುತ್ತಿವೆ. ಕೆಲ ಕಂಪನಿಗಳು ವಾರಂಟಿ ಅವಧಿ ಹೆಚ್ಚಿಸಿವೆ.

ದುರಸ್ತಿಗಂತೂ ವಿಪರೀತ ಬೇಡಿಕೆ
ಇದ್ದಕ್ಕಿದ್ದಂತೆ ಹೊರಗೆ ಕಾಲಿಡದ ಪರಿಸ್ಥಿತಿ ಬಂದಿರುವುದರಿಂದ ಹಾಳಾಗಿರುವ ಯಂತ್ರೋಪಕಣಗಳನ್ನು ದುರಸ್ತಿ ಮಾಡಿಸಲು ಸಾಧ್ಯವಾಗದ ಸ್ಥಿತಿಯಿದೆ. ಇಡೀ ಭಾರತದಲ್ಲಿ ಲಕ್ಷಗಟ್ಟಲೆ ವಸ್ತುಗಳು ಹಾಳಾಗಿ ಕೂತಿವೆ. ಜನ ಕಂಗೆಟ್ಟಿದ್ದಾರೆ.

Advertisement

50 ಲಕ್ಷ
ದುರಸ್ತಿಗಾಗಿ ಕಾದು ಕುಳಿತಿರುವ ಮೊಬೈಲ್‌ಗ‌ಳ ಸಂಖ್ಯೆ 50 ಲಕ್ಷಕ್ಕೂ ಹೆಚ್ಚು.

70,000
ದುರಸ್ತಿಯಾಗಬೇಕಾದ ಶೀತಕಗಳ ಸಂಖ್ಯೆ 70 ಸಾವಿರಕ್ಕೂ ಅಧಿಕ.

50 ,000
ದುರಸ್ತಿಗೆ ಒಳಗಾಗಬೇಕಿರುವ ಮೊಬೈಲ್‌ಗ‌ಳ ಸಂಖ್ಯೆ 50 ಸಾವಿರಕ್ಕೂ ಅಧಿಕ.

70%
ಶೇ.70ರಷ್ಟು ತಂತ್ರಜ್ಞರು ಕಂಪನಿಗಳ ಸೇವಾಕೇಂದ್ರ ಗಳ ಸಮೀಪವೇ ಲಭ್ಯರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next