Advertisement

ಇನ್ನೂ ಆರಂಭವಾಗಿಲ್ಲ ಹಾರ್ದಿಕ್‌, ರಾಹುಲ್‌ ವಿಚಾರಣೆ!

12:45 AM Mar 07, 2019 | |

ಮುಂಬಯಿ: ಕಾಫಿ ವಿತ್‌ ಕರಣ್‌ ಟೀವಿ ಶೋನಲ್ಲಿ ಮಹಿಳೆಯರ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದಾರೆಂಬ ಹಿನ್ನೆಲೆಯಲ್ಲಿ, ಕ್ರಿಕೆಟಿಗರಾದ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌.ರಾಹುಲ್‌ಗೆ ಕೆಲವು ಅಂತಾರಾಷ್ಟ್ರೀಯ ಪಂದ್ಯಗಳ ನಿಷೇಧ ಹೇರಲಾಗಿತ್ತು. 

Advertisement

ಈ ಇಬ್ಬರು ಕ್ಷಮೆ ಕೇಳಿದ್ದರೂ, ವಿಚಾರಣೆ ನಡೆಸಲು ಬಿಸಿಸಿಐನ ಬೇಡಿಕೆಯಂತೆ ಸರ್ವೋಚ್ಚ ನ್ಯಾಯಾಲಯ ವಿಶೇಷ ತನಿಖಾಧಿಕಾರಿಯನ್ನು ನೇಮಿಸಿತ್ತು. ಇದಾಗಿ ಎರಡು ವಾರಗಳು ಕಳೆದಿದ್ದರೂ, ಈ ಪ್ರಕರಣವನ್ನು ಬಿಸಿಸಿಐ ಇನ್ನೂ ವಿಚಾರಣೆಗೆ ಒಪ್ಪಿಸಿಲ್ಲ! ಈ ವಿಷಯವನ್ನು ತನಿಖಾಧಿಕಾರಿ ಡಿ.ಕೆ.ಜೈನ್‌ ಹೇಳಿಕೊಂಡಿದ್ದಾರೆ.

ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ವಿನೋದ್‌ ರಾಯ್‌, ಸಹ ಆಡಳಿತಾಧಿಕಾರಿ ಡಯಾನ ಎಡುಲ್ಜಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಈ ಪ್ರಕರಣಕ್ಕೆ ಶಿಕ್ಷೆ ನೀಡುವುದು ಬಿಸಿಸಿಐ ನೀತಿ ಸಂಹಿತೆಯಲ್ಲಿಲ್ಲ ಎಂದು ಗೊತ್ತಾಗಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಇಬ್ಬರೂ ಕ್ರಿಕೆಟಿಗರು ಬೇಷರತ್‌ ಈ ಪ್ರಕರಣದ ಕುರಿತು ಕ್ಷಮೆ ಕೇಳಿದ್ದರು. ಇದಾದ ಬಳಿಕ ಕೆಲವು ಪಂದ್ಯಗಳ ನಿಷೇಧ ವಿಧಿಸಿಯೋ, ಎಚ್ಚರಿಕೆ ನೀಡಿಯೋ ಕೈಬಿಡಬೇಕಾಗಿದ್ದ ಪ್ರಕರಣವನ್ನು ಅತಿಯಾಗಿ ಎಳೆದಾಡಿ, ಕಡೆಗೆ ತನಿಖೆ ನಡೆಯಬೇಕು ಎಂಬ ಮಟ್ಟಕ್ಕೆ ಎಳೆದುಕೊಂಡು ಹೋಗಿದ್ದಾರೆ. ಇಷ್ಟಾದ ಮೇಲೆ ಈ ವಿಷಯದ ಕುರಿತು ಒಂದು ತಾರ್ಕಿಕ ಅಂತ್ಯಕ್ಕೆ ಬಿಸಿಸಿಐ ಏಕೆ ಒಯ್ಯುತ್ತಿಲ್ಲ ಎಂದು ಪ್ರಶ್ನೆ ಹಲವರಲ್ಲಿ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next