ನಟಿ ಹರ್ಷಿಕಾ ಪೂಣಚ್ಛ ಈಗ ಮತ್ತೂಂದು ಭೋಜ್ಪುರಿ ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಕೂಡಾ ಆರಂಭವಾಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಲಂಡನ್ನಲ್ಲಿ ನಡೆಯಲಿದ್ದು, ಈಗಾಗಲೇ ಹರ್ಷಿಕಾ ಹಾಗೂ ಚಿತ್ರತಂಡ ಲಂಡನ್ ತಲುಪಿದೆ.
ಅಂದಹಾಗೆ, ಇದು ಹರ್ಷಿಕಾ ನಟನೆಯ ಮೂರನೇ ಭೋಜ್ಪುರಿ ಸಿನಿಮಾ. ಅಂದಹಾಗೆ, ಈ ಚಿತ್ರಕ್ಕೆ “ಸನಮ್ ಮೇರೇ ಹಮ್ರಾಜ್’ ಎಂಬ ಟೈಟಲ್ ಇಡಲಾಗಿದ್ದು, ರಿತೇಶ್ ನಾಯಕರಾಗಿ ನಟಿಸುತ್ತಿದ್ದಾರೆ.
ತಮ್ಮ ಹೊಸ ಸಿನಿಮಾ ಬಗ್ಗೆ ಮಾತನಾಡುವ ನಟಿ ಹರ್ಷಿಕಾ, “ಕನ್ನಡದ ಹುಡುಗಿಯಾಗಿ ಪರಭಾಷೆಗಳಿಂದ ಅವಕಾಶ ಸಿಗುವಾಗ ತುಂಬಾ ಖುಷಿಯಾಗುತ್ತದೆ. ಇದಕ್ಕೆಲ್ಲಾ ಕಾರಣ ಕನ್ನಡಿಗರ ಪ್ರೀತಿ. ಪರಭಾಷೆಯಲ್ಲಿ ಹೋದಾಗ, “ಕನ್ನಡದ ಹುಡುಗಿ’ ಎಂದು ಅವರು ಹೇಳುವುದನ್ನು ಕೇಳುವುದೇ ಒಂದು ಖುಷಿ. ಇದು ಭೋಜ್ಪುರಿಯಲ್ಲಿ ನಾನು ನಟಿಸುತ್ತಿರುವ ಮೂರನೇ ಸಿನಿಮಾ. ಪಾತ್ರವೂ ಚೆನ್ನಾಗಿದೆ. ಅಲ್ಲಿನ ಸ್ಟಾರ್ನಟರು ಈ ಚಿತ್ರದ ನಾಯಕ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಹರ್ಷಿಕಾ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಪಾಕ್ ಆಲ್ ರೌಂಡರ್ ಮೊಹಮ್ಮದ್ ಹಫೀಜ್
ಅಂದಹಾಗೆ, ಹರ್ಷಿಕಾ ಈಗಾಗಲೇ ಎರಡು ಭೋಜ್ಪುರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಅಲ್ಲಿ ಮತ್ತಷ್ಟು ಅವಕಾಶಗಳು ಸಿಗುತ್ತಿವೆ