Advertisement

ವನಿತಾ ತಂಡದ ಕೋಚ್‌ ಹರ್ಶಲ್‌ ಗಿಬ್ಸ್ ಆಕಾಂಕ್ಷಿ

09:30 AM Dec 10, 2018 | Harsha Rao |

ಹೊಸದಿಲ್ಲಿ: ಭಾರತ ವನಿತಾ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಯ ಆಕಾಂಕ್ಷಿಗಳ ಯಾದಿ ಬೆಳೆಯುತ್ತಿದೆ. ಟಾಮ್‌ ಮೂಡಿ, ಡೇವ್‌ ವಾಟ್‌ಮೋರ್‌ ಹಾಗೂ ಕರ್ನಾಟಕದ ಮಾಜಿ ಬೌಲರ್‌ ವೆಂಕಟೇಶ ಪ್ರಸಾದ್‌ ಸಹಿತ ಇನ್ನೂ ಅನೇಕರು ಈ ಹುದ್ದೆಗೆ ಆಸಕ್ತಿ ತೋರಿದ್ದಾರೆ. ಈ ಆಕಾಂಕ್ಷಿಗಳ ಪಟ್ಟಿಗೆ ಸೇರ್ಪಡೆಯಾದ ನೂತನ ಹೆಸರು ದಕ್ಷಿಣ ಆಫ್ರಿಕಾದ ಮಾಜಿ ಆರಂಭಕಾರ ಹರ್ಶಲ್‌ ಗಿಬ್ಸ್ ಅವರದು.

Advertisement

“ವನಿತಾ ತಂಡದ ಕೋಚ್‌ ಹುದ್ದೆ ವಹಿಸಲು ಗಿಬ್ಸ್ ಆಸಕ್ತರಾಗಿದ್ದಾರೆ. ಇದು ಭಾರತದ ರಾಷ್ಟ್ರೀಯ ತಂಡಕ್ಕೆ ಸಂಬಂಧಿಸಿದ ಪ್ರತಿಷ್ಠಿತ ಹುದ್ದೆಯಾಗಿದೆ. ಗಿಬ್ಸ್ ಅರ್ಜಿ ಸಲ್ಲಿಸಿದ್ದು, ಸಂದರ್ಶನದ ಕರೆ ಬರಬಹುದು ಎಂಬ ನಂಬಿಕೆ ಇದೆ’ ಎಂದು ಗಿಬ್ಸ್ ಅವರ ಆಪ್ತಮೂಲಗಳಿಂದ ತಿಳಿದು ಬಂದಿದೆ.

ದಕ್ಷಿಣ ಆಫ್ರಿಕಾದ ಶ್ರೇಷ್ಠ ಆಟಗಾರನಾಗಿರುವ ಹರ್ಶಲ್‌ ಗಿಬ್ಸ್ 90 ಟೆಸ್ಟ್‌, 248 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಟಿ20 ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಕುವೈಟ್‌ ತಂಡ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಲ್ಲದೇ ಅಫ್ಘಾನಿಸ್ಥಾನ ಪ್ರೀಮಿಯರ್‌ ಲೀಗ್‌ನಲ್ಲಿ “ಬಲ್ಕ್ ಲೆಜೆಂಡ್ಸ್‌’ ತಂಡದ ಕೋಚ್‌ ಕೂಡ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next