ಶಿವಮೊಗ್ಗ : ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ ಯನ್ನು ಶಿವಮೊಗ್ಗ ಮುಸ್ಲಿಂ ಜಾಯಿಂಟ್ ಆಕ್ಷನ್ ಕಮಿಟಿ ಖಂಡಿಸಿದ್ದು, ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಲಾಗಿದೆ.
ವಕೀಲ ಮುಜಾಹಿದ್ ಸಿದ್ದಿಕಿ ಮಾತನಾಡಿ, ಶಿವಮೊಗ್ಗದಲ್ಲಿ ಪರಿಸ್ಥಿತಿ ಈ ಮಟ್ಟಕ್ಕೆ ಬರಲು ಯಾರು ಕಾರಣ ಎಂಬುದು ಎಲ್ಲರಿಗೂ ಗೊತ್ತು.ಫೆ.20ರಂದು ರಾತ್ರಿ ಹರ್ಷನನ್ನು ಅಮಾನವೀಯವಾಗಿ ಕೊಲೆ ಮಾಡಿದ್ದನ್ನು ನಾವು ಖಂಡಿಸುತ್ತೇವೆ.ಇಂಥ ಘಟನೆಗಳು ನಡೆಯಬಾರದು ಎಂದರು.
ಹರ್ಷ ಕೊಲೆ ಪ್ರಕರಣದ ಬಳಿಕ ಪೊಲೀಸರು ತನಿಖೆ ಆರಂಭಿಸಿರುವುದಿಲ್ಲ. ಜೊತೆಗೆ ಆತನ ಕುಟುಂಬದವರು ಎಫ್ ಐ ಆರ್ ದಾಖಲಿಸಿರುವುದಿಲ್ಲ. ಆದರೆ ಅಷ್ಟರ ಒಳಗಾಗಿ ಈಶ್ವರಪ್ಪ ಅವರು ಮುಸ್ಲಿಂ ಗೂಂಡಾಗಳು ಈ ಕೃತ್ಯ ಮಾಡಿದ್ದಾರೆ. ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತಾರೆ.ಈ ಹೇಳಿಕೆಯಿಂದ ಶಿವಮೊಗ್ಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ : ಹರ್ಷ ಚಿತಾಭಸ್ಮ ರಥಯಾತ್ರೆಗೆ ತಡೆ: ಸರಕಾರದ ವಿರುದ್ಧ ಕಾಳಿ ಸ್ವಾಮಿ ಆಕ್ರೋಶ
ಸೆಕ್ಷನ್ 144 ನಿಷೇದಾಜ್ಞೆ ನಡುವೆ ಮೆರವಣಿಗೆಯಲ್ಲಿ ಶವ ತರುವಾಗ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ.ಈ ಎಲ್ಲ ಘಟನೆಗಳು ಪೊಲೀಸರ ಎದುರೇ ನಡೆದರೂ ಪೊಲೀಸರು ಕುರುಡರಂತೆ ವರ್ತಿಸಿದ್ದಾರೆ.ಕಲ್ಲುತೂರಾಟ ನಡೆಸಿದ ಆರೋಪಿಗಳನ್ನು ಬಂಧಿಸಿದ್ದರೆ ಈ ರೀತಿಯ ಸ್ಥಿತಿ ನಿರ್ಮಾಣವಾಗುತ್ತಲೇ ಇರಲಿಲ್ಲ.ಇನ್ನು ಅಜಾದ್ ನಗರದಲ್ಲಿ ಗೂಂಡಾಗಳು ಮನೆಮನೆಗೆ ನುಗ್ಗಿ ಹಲ್ಲೆ ನಡೆಸುತ್ತಾರೆ. ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚುತ್ತಾರೆ. ಇಲ್ಲಿ ಪೊಲೀಸ್ ಇಲಾಖೆ ವೈಪಲ್ಯ ಎದ್ದು ಕಾಣುತ್ತದೆ.ಇದಾದ ಬಳಿಕ ಬಿಜೆಪಿ ಮುಖಂಡರ ಹೇಳಿಕೆಗಳು ಜನರಿಗೆ ಇನ್ನಷ್ಟು ಪ್ರಚೋದನೆ ನೀಡಿದರಿಂದ ಪರಿಸ್ಥಿತಿ ಬಿಗಡಾಯಿಸಿತು ಎಂದು ಆಕ್ರೋಶ ಹೊರ ಹಾಕಿದರು.
ಮನೆಯಿಂದ ಸ್ಮಶಾನಕ್ಕೆ ತೆರಳುವಾಗಲೂ ಸಿಕ್ಕ ಸಿಕ್ಕ ಕಟ್ಟಡಕ್ಕೆ ಕಲ್ಲು ತೂರಿಹಾನಿ ಹಾನಿಗೊಳಿಸಿದ್ದಾರೆ.ಈ ಪ್ರಕರಣನ್ನು ನ್ಯಾಯಾಂಗ ತನಿಖೆ ಅಥವಾ ಸಿಐಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.