Advertisement

ಅಮಿತ್‌ ಶಾ ಹಾದಿಯಲ್ಲಿ ಫೈರ್‌ ಬ್ರಾಂಡ್‌ ಸಂಘ್ವಿ

11:10 PM Dec 19, 2022 | Team Udayavani |

ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರ ನೂತನ ಸಂಪುಟದಲ್ಲಿ ಯುವ ನಾಯಕ ಪ್ರಖರವಾಗ್ಮಿ ಹರ್ಷ್‌ ಸಂಘ್ವಿಅವರಿಗೆ ಗೃಹ ಖಾತೆಯ ಜವಾಬ್ದಾರಿ ವಹಿಸಲಾಗಿದೆ. ರಾಜ್ಯದಲ್ಲಿ ಅಮಿತ್‌ ಶಾ ಅವರ ಉತ್ತರಾಧಿಕಾರಿ ಯಂತೆ ಹರ್ಷ್‌ ಅವರನ್ನು ಬಿಂಬಿಸಲಾಗಿದ್ದು, ಸಂಪುಟ ದಲ್ಲಿ ನಂ 2 ಸ್ಥಾನ ನೀಡಲಾಗಿದೆ.

Advertisement

ಹಗಲು-ರಾತ್ರಿ ಎನ್ನದೇ ಪಕ್ಷದ ಕೆಲಸದಲ್ಲಿ ಸದಾ ತಲ್ಲೀನರಾಗುವ ಅವರ ನಾಯಕತ್ವ ಗುಣವನ್ನು ಮೆಚ್ಚಿ, ಹಿಂದಿನ ಸಂಪುಟದಲ್ಲೂ ಗೃಹ ಖಾತೆ ಸೇರಿದಂತೆ ಬರೋಬ್ಬರಿ 9 ಖಾತೆಗಳ ಉಸ್ತುವಾರಿ ನೀಡಲಾಗಿತ್ತು.

ವಿಜಯ್‌ ರೂಪಾಣಿ ಅವರ ಸ್ಥಾನದಲ್ಲಿ ಭೂಪೇಂದ್ರ ಪಟೇಲ್‌ ವಿರಾಜಮಾನ ರಾದ ಅನಂತರ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸದಾ ಉತ್ಸಾಹಿಯಾದ ಹರ್ಷ್‌ ಅವರಿಗೆ ಗೃಹ ಖಾತೆಯ ಜತೆಗೆ ಅಬಕಾರಿ, ಸಾರಿಗೆ, ಕ್ರೀಡೆ ಮತ್ತು ಯುವಜನ ಖಾತೆ, ಗಡಿ ಭದ್ರತೆ ಮತ್ತು ಬಂದೀಖಾನೆ, ಹೋಂಗಾರ್ಡ್‌, ವಿಲೇಜ್‌ ಗಾರ್ಡ್‌, ನಾಗರಿಕ ರಕ್ಷಣೆ, ಪೊಲೀಸ್‌ ವಸತಿ, ಗುಜರಾತಿ ಎನ್‌ಆರ್‌ಐ ಮತ್ತು ಪ್ರಕೃತಿ ವಿಕೋಪ ನಿರ್ವಹಣೆ ಖಾತೆಯ ಜವಾಬ್ದಾರಿ ವಹಿಸಲಾಗಿತ್ತು.

ಜೈನ ಧರ್ಮಕ್ಕೆ ಸೇರಿದ ವಜ್ರದ ವ್ಯಾಪಾರಿ ರಮೇಶ್‌ ಬುರಾಲಾಲ್‌ ಸಂಘ್ವಿ ಮತ್ತು ದೇವೇಂ ದ್ರಬೆನ್‌ ಸಂಘ್ವಿ ಪುತ್ರನಾಗಿ 1985ರ ಜ.8ರಂದು ಸೂರತ್‌ನಲ್ಲಿ ಜನಿಸಿದ ಹರ್ಷ್‌ಗೆ ಚಿಕ್ಕ ವಯಸ್ಸಿ ನಿಂದಲೇ ದೇಶಭಕ್ತಿ ಮತ್ತು ಸಮಾಜಕ್ಕೆ ಸದಾ ಮಿಡಿಯುವ ಮನಸ್ಸಿತ್ತು. ಉಗ್ರ ಪೀಡಿತ ಕಾಶ್ಮೀ ರದ ಲಾಲ್‌ ಚೌಕ್‌ದಲ್ಲಿ ಧೈರ್ಯವಾಗಿ ರಾಷ್ಟ್ರ ಧ್ವಜವನ್ನು ಹಾರಿಸಿದ ಯುವಕರ ಪೈಕಿ ಹರ್ಷ್‌ ಕೂಡ ಒಬ್ಬರು. ಸಾಮಾಜಿಕವಾಗಿ ಕೆಲಸ ಮಾಡಬೇಕೆಂಬ ಹಪಾಹಪಿಯಲ್ಲಿದ್ದ ಇವರು ಸೂರತ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಿದರು. ಅನಂತರ ಇವರು ಬಿಜೆಪಿ ಯುವ ಮೋರ್ಚಾಗೆ ಸೇರ್ಪಡೆ ಯಾದರು. ಬಳಿಕ ಅವರನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾ ಯಿತು. ಹರ್ಷ್‌ ಅವರು ಈ ಹುದ್ದೆಗೆ ಏರಿದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ. ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌ ಮತ್ತು ಪೂನಂ ಮಹಾ ಜನ್‌ ಅವರೊಂದಿಗೆ ಸೇರಿ ಹರ್ಷ್‌ ಪಕ್ಷದ ಸಂಘಟನೆಯಲ್ಲಿ ತೊಡಗಿದರು.

2012ರ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ತಮ್ಮ 27ನೇ ವಯಸ್ಸಿನಲ್ಲೇ ಸೂರತ್‌ ನಗರದ ಮಜುರಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಈ ಮೂಲಕ ರಾಜ್ಯದ ಅತ್ಯಂತ ಕಿರಿಯ ಶಾಸಕ ಎಂಬ ಖ್ಯಾತಿಗೆ ಪಾತ್ರರಾದರು. ಇದಾದ ಅನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಸತತ ವಾಗಿ 4ನೇ ಬಾರಿ ಅವರು ದಾಖಲೆಯ ಮತ ಗಳೊಂದಿಗೆ ಗುಜರಾತ್‌ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2013ರಲ್ಲಿ ಅವರನ್ನು ಯುವ ಮೊರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಲಾಯಿತು. 2017ರಲ್ಲಿ ಯುವ ಮೊರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಿಸಲಾಯಿತು.ಪಕ್ಷ ವಹಿ ಸಿದ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅವರನ್ನು 2021 ಸೆ.18ರಂದು ಮಹತ್ವದ ಗೃಹ ಖಾತೆ ನೀಡಲಾಯಿತು. ಗೃಹ ಸಚಿವರಾಗಿ ಗುಜರಾತ್‌ನ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಯಾವುದೇ ಲೋಪ ಇಲ್ಲದೇ ಯಶಸ್ವಿಯಾಗಿ ನಿಭಾಯಿಸಿದ ಹರ್ಷ್‌ ಅವರಿಗೆ ನೂತನ ಸಂಪುಟದಲ್ಲೂ ಅದೇ ಖಾತೆ ನೀಡಲಾಗಿದೆ. ಸದಾ ಬತ್ತದ ಉತ್ಸಾಹದಿಂದ ಸಂಘಟನೆಯಲ್ಲಿ ತೊಡಗುವ ಹರ್ಷ್‌ ಅವರನ್ನು ಬಾವಿ ಮುಖ್ಯಮಂತ್ರಿ, ಅಮಿತ್‌ ಶಾ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next