Advertisement

ಅಧಿವೇಶನದಲ್ಲಿ ಪ್ರತಿಪಕ್ಷಗಳಿಂದ ಹ್ಯಾರಿಸ್‌ ಪುತ್ರನ ಅಸ್ತ್ರ..?

06:25 AM Feb 19, 2018 | Team Udayavani |

ಬೆಂಗಳೂರು: ಬಜೆಟ್‌ ಮಂಡನೆ ಬಳಿಕ ಎರಡು ದಿನಗಳ ನಂತರ ಆರಂಭವಾಗುತ್ತಿರುವ ಅಧಿವೇಶನದಲ್ಲಿ ಸೋಮವಾರ ಪ್ರತಿಪಕ್ಷಗಳಿಗೆ ಶಾಂತಿನಗರ ಶಾಸಕ ಹ್ಯಾರಿಸ್‌ ಪುತ್ರನ ಗೂಂಡಾಗಿರಿ ಪ್ರಕರಣ ಪ್ರಮುಖ ಅಸ್ತ್ರವಾಗುವ ಸಾಧ್ಯತೆ ಇದೆ. ಸದನದ ಆರಂಭಕ್ಕೆ ಪ್ರಶ್ನೋತ್ತರ ಕಲಾಪಕ್ಕೂ ಮೊದಲೇ ಬಿಜೆಪಿ ಸದಸ್ಯರು ಹ್ಯಾರಿಸ್‌ ಪುತ್ರನ ಗಲಾಟೆಯ ಬಗ್ಗೆ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವಿರುದ್ಧ ಮುಗಿ ಬೀಳುವ ಸಾಧ್ಯತೆ ಇದೆ.

Advertisement

ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿರುವುದರಿಂದ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಹಾಗೂ ಉಪ ನಾಯಕ ಆರ್‌. ಆಶೋಕ್‌ ಮೈಸೂರಿಗೆ ತೆರಳುತ್ತಿರುವುದರಿಂದ ಉಳಿದ ನಾಯಕರು ಈ ಪ್ರಕರಣವನ್ನು ಕೈಗೆತ್ತಿಕೊಂಡು ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಲು ಬಿಜೆಪಿ ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

ಜೆಡಿಎಸ್‌ ನಾಯಕರು ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಮುಖವಾಗಿ ಹಾಸನ ಜಿಲ್ಲೆಯಲ್ಲಿ ಸರಿಯಾದ ಸಮಯಕ್ಕೆ ಹೇಮಾವತಿ ನಾಲೆಯಿಂದ ನೀರು ಹಾಯಿಸದಿರುವುದರಿಂದ ಹಾನಿಯಾಗಿರುವ ರೈತರ ಬೆಳೆಗೆ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಜೆಡಿಎಸ್‌ ನಾಯಕರು ತೀರ್ಮಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರದ ಕಲಾಪದಲ್ಲಿ ಪ್ರಮುಖವಾಗಿ ಎ.ಬಿ. ಮಾಲಕರೆಡ್ಡಿ ಅವರ ಅಧ್ಯಕ್ಷತೆಯ ಸಾರ್ವಜನಿಕ ಉದ್ಯಮಗಳ ಸಮಿತಿಯ ವರದಿ ಮಂಡನೆಯಾಗಲಿದ್ದು, ನಂತರ ಬಜೆಟ್‌ ಮೇಲಿನ ಚರ್ಚೆಗೆ  ಸ್ಪೀಕರ್‌ ಅವಕಾಶ ನೀಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next