Advertisement

ಕಿಂಗ್ಸ್‌ ಇಲೆವೆನ್‌ಗೆ ಹ್ಯಾರಿಸ್‌ ಕೋಚ್‌

06:05 AM Dec 07, 2018 | Team Udayavani |

ಹೊಸದಿಲ್ಲಿ: ಐಪಿಎಲ್‌ನ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಆಸ್ಟ್ರೇಲಿಯದ ಮಾಜಿ ವೇಗಿ ರಿಯಾನ್‌ ಹ್ಯಾರಿಸ್‌ ಅವರನ್ನು ಬೌಲಿಂಗ್‌ ಕೋಚ್‌ ಆಗಿ ನೇಮಕ ಮಾಡಿದೆ.

Advertisement

ನ್ಯೂಜಿಲ್ಯಾಂಡ್‌ನ‌ ಮಾಜಿ ಬ್ಯಾಟ್ಸಮನ್‌ ಕ್ರೆಗ್‌ ಮೆಕ್‌ಮಿಲನ್‌ ಅವರನ್ನು ಫಿಲ್ಡಿಂಗ್‌ ಕೋಚ್‌ ಆಗಿ ನೇಮಿಸಿದೆ. ಕೆಲವು ತಿಂಗಳ ಹಿಂದೆ ವೆಂಕಟೇಶ ಪ್ರಸಾದ್‌ ಬೌಲಿಂಗ್‌ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

“ಹ್ಯಾರಿಸ್‌ ಹಾಗೂ ಮೆಕ್‌ಮಿಲನ್‌ ಅವರಂತಹ ಉತ್ತಮ ಮಾಗದರ್ಶಕರು ತಂಡಕ್ಕೆ ಆಸ್ತಿಯಾಗಲಿದ್ದಾರೆ. ಇಬ್ಬರೂ ಆಟಗಾರರು ಪ್ರಮುಖ ಕೂಟಗಳಲ್ಲಿ ಆಡಿದ್ದಾರೆ ಹಾಗೂ ಉತ್ತಮ ಕೋಚ್‌ ಆಗಿ ಗಮನ ಸೆಳೆದಿದ್ದಾರೆ. ಇದು ತಂಡದ ಬೆಳವಣಿಗೆಗೆ ಪೂರಕವಾಗಲಿದೆ’ ಎಂದು ಪಂಜಾಬ್‌ ತಂಡದ ಮುಖ್ಯ ಕೋಚ್‌ ಮೈಕ್‌ ಹಸ್ಸನ್‌ ತಿಳಿಸಿದ್ದಾರೆ.

ಮುಂದಿನ ಐಪಿಎಲ್‌ ಆವೃತ್ತಿಯಿಂದ ಯುವರಾಜ್‌ ಸಿಂಗ್‌, ಆರನ್‌ ಫಿಂಚ್‌, ಅಕ್ಷರ್‌ ಪಟೇಲ್‌ ಅವರನ್ನು ಪಂಜಾಬ್‌ ತಂಡ ಕೈಬಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next