Advertisement

ಹಾರ್ದೊಟ್ಟು: ಹಳ್ಳಕ್ಕೆ ಬಿದ್ದ ಚಿರತೆ ರಕ್ಷಣೆ

07:55 AM Aug 06, 2017 | Team Udayavani |

ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಸಮೀಪದ ಹಾರ್ದೊಟ್ಟುವಿನಲ್ಲಿ ನಾಯಿ ಬೇಟೆಗೆ ಬಂದಿದ್ದ ಚಿರತೆಯೊಂದು ಹಳ್ಳಕ್ಕೆ ಬಿದ್ದಿದ್ದು ಅರಣ್ಯ ಇಲಾಖೆಯವರು ರಕ್ಷಿಸಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

Advertisement

ಶನಿವಾರ ಸಂಜೆ ಇಲ್ಲಿನ ಬಾಬು ನಾೖಕ ಅವರ ಮನೆ ಸಮೀಪ ನಾಯಿಗಳು ಒಂದೇ ಸವನೆ ಬೊಗಳುತ್ತಿರುವುದನ್ನು ಗಮನಿಸಿದ ಮನೆಯವರು ಹೊರಬಂದು ನೋಡಿದಾಗ ಹಳ್ಳದಲ್ಲಿ ಚಿರತೆಯೊಂದು ಬಿದ್ದಿರುವುದು ಕಂಡು ಬಂತು. ಸುದ್ದಿ ತಿಳಿದ ಸ್ಥಳೀಯರು ಅಲ್ಲಿ ಜಮಾಯಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಬಂಟ್ವಾಳ ವಲಯ ಅರಣ್ಯ ಅಧಿಕಾರಿ ಮತ್ತು ಸಿಬಂದಿ ಅರಿವಳಿಕೆ ತಜ್ಞ ರಾದ ಡಾ| ವಿಕ್ರಮ್‌ ಮತ್ತು ದಿನೇಶ್‌ ಜತೆ ಆಗಮಿಸಿ ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಚಿರತೆಯನ್ನು ಬೋನಿಗೆ ಹಾಕುವಲ್ಲಿ ಯಶಸ್ವಿಯಾದರು. ಶುಶ್ರೂಷೆ ನೀಡಿ ಬಳಿಕ ಅಭಯಾರಣ್ಯಕ್ಕೆ ಬಿಡಲಾಯಿತು.

ಉಪ ಅರಣ್ಯಾಧಿಕಾರಿಗಳಾದ ಪ್ರೀತಂ,ಅನಿಲ್‌, ಅರಣ್ಯ ರಕ್ಷಕರಾದ ವಿನಯ್‌ಕುಮಾರ್‌, ಜಿತೇಶ್‌, ಲಕ್ಷ್ಮೀನಾರಾಯಣ, ಸಿಬಂದಿಗಳಾದ ಭಾಸ್ಕರ, ಪ್ರವೀಣ, ಜಯರಾಮ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next