Advertisement

Manipal ಸೌರಶಕ್ತಿಯ ಸದುಪಯೋಗ: ಸೆಲ್ಕೋ ಕಚೇರಿಗೆ ಆಫ್ರಿಕಾ ಪ್ರತಿನಿಧಿಗಳ ಭೇಟಿ

12:24 AM Sep 25, 2023 | Team Udayavani |

ಮಣಿಪಾಲ: ಸೆಲ್ಕೋ ಫೌಂಡೇಶನ್‌ ಮತ್ತು ಗ್ಲೋಬಲ್‌ ಎಸ್‌ಡಿಜಿ 7 ಹಬ್ಸ್ ಜತೆಯಾಗಿ ಆಫ್ರಿಕಾದ ಇಥಿಯೋಪಿಯಾ, ಸಿಯೇರಾ ಲಿಯೋನ್‌ ಹಾಗೂ ತಾಂಝನಿಯಾ ದೇಶದ ಪ್ರತಿನಿಧಿಗಳಿಗೆ 10 ದಿನಗಳ ಉದ್ಯಮ ಆಧಾರಿತ ತರಬೇತಿ, ನೆಟ್‌ವರ್ಕಿಂಗ್‌, ಎಕ್ಸ್ ಪೋಶರ್‌ ಕಾರ್ಯಕ್ರಮ ಹಮ್ಮಿಕೊಂಡಿದೆ.

Advertisement

ಶುಕ್ರವಾರ ಇಲ್ಲಿನ ಭಾರತೀಯ ವಿಕಾಸ್‌ ಟ್ರಸ್ಟ್‌ ನ ಸೆಲ್ಕೋ ಕಚೇರಿಯಲ್ಲಿ ಆಫ್ರಿಕಾದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಯಿತು.

ಮೂರು ದೇಶಗಳ ಸುಮಾರು 11 ಸೌರಶಕ್ತಿ ಆಧಾರಿತ ಉದ್ಯಮಿಗಳಿಂದ 23 ಪ್ರತಿನಿಧಿಗಳು ಭಾಗವಹಿಸಿದ್ದರು. ತಮ್ಮ ದೇಶದಲ್ಲಿ ಸೌರಶಕ್ತಿ ಸದ್ಬಳಕೆಯ ಮೂಲಕ ಜನರ ಜೀವನ ಮಟ್ಟ ಸುಧಾರಣೆ, ಕೃಷಿಗೆ ಸೌರಶಕ್ತಿಯ ಸಮರ್ಪಕ ಬಳಕೆ ಮತ್ತು ವಿದ್ಯುತ್‌ ಸೌಲಭ್ಯ ಇಲ್ಲದ ಗ್ರಾಮೀಣ ಭಾಗಗಳಿಗೆ ಸೌರ ಶಕ್ತಿ ಮೂಲಕ ಬೆಳಕಿನ ವ್ಯವಸ್ಥೆ ಮಾಡುವುದು ಮೊದಲಾದ ವಿಷಯಗಳ ಕುರಿತು ಭಾರತದಲ್ಲಿ ಸೆಲ್ಕೋ ಕೈಗೊಂಡಿರುವ ಹಲವು ಯೋಜನೆಗಳ ಮಾಹಿತಿ ಪಡೆದರು ಮತ್ತು ಸ್ಥಳ ಪರಿಶೀಲನೆ ನಡೆಸಿದರು.

ಭಾರತ ಮತ್ತು ಆಫ್ರಿಕಾ ನಡುವೆ ಸೌರ ಶಕ್ತಿ ಆಧಾರಿತ ಉದ್ಯಮ ಮತ್ತು ವ್ಯಾಪಾರ ವಿನಿಮಯದ ಸಂಪರ್ಕ ಇನ್ನಷ್ಟು ಉತ್ತಮಗೊಳಿಸುವುದು. ಉದ್ಯಮಗಳ ನಡುವೆ ನಿರಂತರವಾದ ತಂತ್ರಜ್ಞಾನ ಅಭಿವೃದ್ಧಿ, ಜ್ಞಾನದ ವಿನಿಮಯದ ಗುರಿ ಸಾಧನೆ ಇದರ ಉದ್ದೇಶವಾಗಿದೆ. ಸಮುದಾಯಗಳ ಏಳ್ಗೆ, ಸುಸ್ಥಿರ ಭವಿಷ್ಯಕ್ಕಾಗಿ ಪರಸ್ಪರ ವಿನಿಮಯದ ಮೂಲಕ ಸಂಭಾವ್ಯ ಪಾಲುದಾರಿಕೆಯನ್ನು ಸೃಷ್ಟಿಸುವ ಸಲು ವಾಗಿ ಆಫ್ರಿಕಾ ದೇಶದ ಪ್ರತಿನಿಧಿಗಳು ಭೇಟಿ ನೀಡಿದ್ದಾರೆ ಎಂದರು.

ಪ್ರಾಥಮಿಕ ಆರೋಗ್ಯ
ಕೇಂದ್ರಕ್ಕೆ ಸೋಲಾರ್‌ ಬೆಳಕು
ಸೆಲ್ಕೋ ವತಿಯಿಂದ ಜಿಲ್ಲೆಯ 61 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 14 ಕೇಂದ್ರಗಳಿಗೆ ಈಗಾಗಲೇ ಸೋಲಾರ್‌ ಬೆಳಕಿನ ಸೌಲಭ್ಯ ಅಳವಡಿಕೆ ಮಾಡಲಾಗಿದೆ. 11 ಕೇಂದ್ರಗಳಿಗೆ ಅಕ್ಟೋಬರ್‌ ಅಂತ್ಯದೊಳಗೆ ಅಳವ ಡಿಕೆ ಪೂರ್ಣಗೊಳ್ಳಲಿದೆ. ಉಳಿದ 36 ಕೇಂದ್ರಗಳಿಗೆ ಡಿಎಚ್‌ಒ ಅವರಿಂದ ಅನುಮತಿ ಸಿಕ್ಕ ಬಳಿಕ ಅಳವ ಡಿಸಲಾಗುವುದು. ಇದರಿಂದ ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 4 ಸಾವಿರದಿಂದ 5 ಸಾವಿರ ರೂ. ಉಳಿತಾಯವಾಗಲಿದೆ ಎಂದು ಡಿಜಿಎಂ ಗುರುಪ್ರಕಾಶ್‌ ಶೆಟ್ಟಿ ಹೇಳಿದರು.

Advertisement

ಸೆಲ್ಕೋ ಡಿಜಿಎಂ ಸುದೀಪ್ತ ಘೋಷ್‌ ಹಾಗೂ ತಾಂಝನಿಯಾ ಪ್ರತಿನಿಧಿಗಳಾದ ಸೆಲೆಮನ್‌ ಎ. ರಶೀದ್‌, ಸಿಲಯೋ ಮಾಥಾಯಿಸ್‌, ಮಚೈ ಆಂಥೋನಿ ಜೋಸೆಫ್, ಸಿಯೇರಾ ಲಿಯೋನ್‌ನ ಯೂಸಿಫ್ ಕಮರ, ಮೊಹಮ್ಮದ್‌ ಫೊಫ‌ನ್ಹಾ, ಅಬ್ದುಲ್‌ ರಝಾಕ್‌, ಇಥಿಯೋಪಿಯಾದ ಲೆಮಿ ಅಸ್ಸೆಫಾ ಮೊಚಾ, ಯೋನಸ್‌ ಚೆರ್ನೆಟ್‌, ಅಬೆಲ್‌ ಮೊದಲಾದವರು ಉಪಸ್ಥಿತರಿದ್ದರು.

ಸೆಲ್ಕೋ ಸಿನೀಯರ್‌ ಪ್ರೋಗ್ರಾಮ್‌ ಮ್ಯಾನೇಜರ್‌ ಪ್ರಶಾಂತ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next