Advertisement

ಸೌಹಾರ್ದಕ್ಕಾಗಿ ‘ಹಾರ್ಮನಿ’ಸೈಕಲ್‌ ರ‍್ಯಾಲಿ

12:14 PM Oct 30, 2017 | |

ಮಹಾನಗರ: ಕೊಡಿಯಾಲ್‌ ಬೈಲ್‌ನ ಸಂತ ಅಲೋಶಿಯಸ್‌ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸೌಹಾರ್ದ ಸಂದೇಶ ಹೊತ್ತ ಸೈಕಲ್‌ ರ‍್ಯಾಲಿ ‘ಹಾರ್ಮನಿ’ ರವಿವಾರ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿತು.

Advertisement

ಶಾಲಾ ಆವರಣದಲ್ಲಿ ರ‍್ಯಾಲಿಯನ್ನು ಉದ್ಘಾಟಿಸಿದ ಅಲೋಶಿಯಸ್‌ ಸಮೂಹ ಸಂಸ್ಥೆಗಳ ರೆಕ್ಟರ್‌ ರೆ| ಫಾ| ಡ್ಯಾನೀಶಿಯಸ್‌ ವಾಜ್‌ ಮಾತನಾಡಿ, ಜಾತ್ಯತೀತ ರಾಷ್ಟ್ರದಲ್ಲಿ ನಾವು ಇಂತಹ ರ‍್ಯಾಲಿಯ ಮೂಲಕ ವಿವಿಧ ಜಾತಿ ಧರ್ಮ, ಸಂಸ್ಕೃತಿ ಹಾಗೂ ದೇಶದ ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ ಸಂದೇಶವನ್ನು ಸಾರಬೇಕಿದೆ. ನಾವು ಎಲ್ಲರಿಗಾಗಿ ಎಂಬ ಉದ್ದೇಶವನ್ನೂ ಸಾಕಾರಗೊಳಿಸಲು ಈ ರ‍್ಯಾಲಿ ಸಹಕಾರಿಯಾಗಲಿದೆ ಎಂದರು. ನಟ ವಿನೀತ್‌, ಮುಖ್ಯೋಪಾಧ್ಯಾಯ ರೆ| ಫಾ| ಜೆರಾಲ್ಡ್‌ ಫುರ್ಟಾಡೊ ಮೊದಲಾದವರು ರ‍್ಯಾಲಿಗೆ ಹಸಿರು ನಿಶಾನೆ ತೋರಿದರು.

ಶಾಲಾ ಮುಂಭಾಗದಿಂದ ಆರಂಭಗೊಂಡ ರ‍್ಯಾಲಿಯು ಜ್ಯೋತಿ ಸರ್ಕಲ್‌ ವೃತ್ತ, ಬಂಟ್ಸ್‌ಹಾಸ್ಟೆಲ್‌ ವೃತ್ತ, ಪಿ.ವಿ.ಎಸ್‌. ವೃತ್ತ, ಬಲ್ಲಾಳ್‌ಭಾಗ್‌ ವೃತ್ತ, ಮಣ್ಣಗುಡ್ಡೆಯ ಮೂಲಕ ಸಾಗಿ ಲೇಡಿಹಿಲ್‌ ವೃತ್ತ, ಲಾಲ್‌ಭಾಗ್‌ ಮಾರ್ಗವಾಗಿ ಪಿವಿಎಸ್‌ ಮೂಲಕ ಬಿಷಪ್ಸ್‌ ಹೌಸ್‌ ಮುಂಭಾಗದಿಂದ ಕೊಡಿಯಾಲ್‌ಬೈಲ್‌ ಸಂತ ಅಲೋಶಿಯಸ್‌ ಪ.ಪೂ.ಕಾಲೇಜಿನ ಬಳಿಯ ಗೊನ್ಜಾಗ ಕ್ರೀಡಾಂಗಣದಲ್ಲಿ ಸಮಾಪನಗೊಂಡಿತು.

ಮಿಸ್ಟರ್‌ ವರ್ಲ್ಡ್ ಖ್ಯಾತಿಯ ರೇಮಂಡ್‌ ಡಿ’ ಸೋಜಾ ಅವರು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯರಾಗಿ ದೇಶಕ್ಕೆ ಕೀರ್ತಿ ತರಬೇಕು. ಉತ್ತಮ ಆರೋಗ್ಯಕ್ಕೆ ಇಂತಹ ರ‍್ಯಾಲಿ ಪೂರಕ ಎಂದರು.

ಜೀತನ್‌ ಡಿ’ ಸೋಜಾ, ಜೀತನ್‌ ಸಲ್ಡಾನಾ, ಮ್ಯಾಕ್ಲಿನ್‌ ಕೊನ್ಸೆಸೊ ಹಾಗೂ ವರ್ನನ್‌ ತಾವ್ರೊ ಅವರು ಸೈಕಲ್‌
ಸಾಹಸಗಳನ್ನು ಪ್ರದರ್ಶಿಸಿದರು. ಮಂಗಳೂರು ಬೈಸಿಕಲ್‌ ಕ್ಲಬ್‌ ಸದಸ್ಯರು ರ‍್ಯಾಲಿಗೆ ಸಹಕರಿಸಿದರು.

Advertisement

ರಾಜ್‌ ಕುಂದರ್‌ ಅವರಿಂದ ಛಾಯಾಗ್ರಹಣದ ಡ್ರೋನ್‌ ವ್ಯವಸ್ಥೆ, ಪ್ರಥಮ ಚಿಕಿತ್ಸೆಗಾಗಿ ಯೇನೆಪೊಯ ಗ್ರೂಪ್‌ ಆಫ್‌ ಹಾಸ್ಪಿಟಲ್ಸ್‌ನಿಂದ ಆ್ಯಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಸ್ಥೆಯ ಪ್ರಮುಖ ಧರ್ಮಗುರುಗಳು ಉಪಸ್ಥಿತರಿದ್ದರು. ಉಪ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಎಸ್‌. ವಂದಿಸಿದರು. ಲ್ಯಾನ್ಸಿ ಡಿ’ ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಜಾನ್‌ಚಂದ್ರನ್‌ ನೇತೃತ್ವ ವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next