Advertisement

ಶಫಾಲಿ ಬಿರುಸಿನ ಆಟವನ್ನೇ ಆಡಬೇಕು: ನಾಯಕಿ ಕೌರ್‌

12:19 AM Mar 01, 2020 | Sriram |

ಮೆಲ್ಬರ್ನ್: “ಲೇಡಿ ಸೆಹವಾಗ್‌’ ಎಂದೇ ಸುದ್ದಿಯಲ್ಲಿರುವ ಶಫಾಲಿ ವರ್ಮ ಅವರು ಇದೇ ರೀತಿ ಬಿರುಸಿನ ಆಟವನ್ನು ಮುಂದುವರಿಸಬೇಕು ಹಾಗೂ ತಂಡದ ಆಡಳಿತ ಮಂಡಳಿ ಇದಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಭಾರತ ವನಿತಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹೇಳಿದ್ದಾರೆ.

Advertisement

“ಶಫಾಲಿ ಯುವ ಆಟಗಾರ್ತಿ. ಎಲ್ಲ ಹೊಡೆತಗಳನ್ನೂ ಬೌಂಡರಿ ಗೆರೆ ದಾಟಿಸುವತ್ತ ಚಿಂತಿಸುವ ಅವರ ಆಟ ಹೀಗೆಯೇ ಮುಂದುವರಿಯಬೇಕು. ಈ ವಿಚಾರದಲ್ಲಿ ಅವರನ್ನು ನಾವು ತಡೆಯಬಾರದು. ಅವರ ಆಟವನ್ನು ಅವರ ಶೈಲಿಯಲ್ಲೇ ಆಡಬಿಡಬೇಕು’ ಎಂದು ಹರ್ಮನ್‌ಪ್ರೀತ್‌ ಹೇಳಿದ್ದಾರೆ.

ಶಫಾಲಿ ವರ್ಮ ಟಿ20 ವಿಶ್ವಕಪ್‌ ಕೂಟದ ನಾಲ್ಕೂ ಲೀಗ್‌ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದು, ಒಟ್ಟು 161 ರನ್‌ ಬಾರಿಸಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ 18 ಬೌಂಡರಿ, 9 ಸಿಕ್ಸರ್‌ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next