Advertisement
ಸೆಹವಾಗ್ ವರ್ಸಸ್ ಲೇಹ್ಮನ್ಮೊದಲನೆಯದು 2003ರ ಜೊಹಾನ್ಸ್‌ಬರ್ಗ್ ಫೈನಲ್. ಭಾರತ ಅಂದು ಆಸ್ಟ್ರೇಲಿಯ ವಿರುದ್ಧ 359 ರನ್ ಚೇಸ್ ಮಾಡುತ್ತಿತ್ತು. 59 ರನ್ ಆಗುವಷ್ಟರಲ್ಲಿ 3 ವಿಕೆಟ್ ಉರುಳಿತ್ತು. 4ನೇ ವಿಕೆಟಿಗೆ ಜತೆಗೂಡಿದ ವೀರೇಂದ್ರ ಸೆಹವಾಗ್ ಮತ್ತು ಸಚಿನ್ ತೆಂಡುಲ್ಕರ್ ಸೇರಿಕೊಂಡು ಮೊತ್ತವನ್ನು 147ಕ್ಕೆ ತಂದು ನಿಲ್ಲಿಸಿದ್ದರು. ಸೆಹವಾಗ್ ಭಾರೀ ಜೋಶ್‌ನಲ್ಲಿದ್ದರು. 81 ಎಸೆತಗಳಿಂದ 82 ರನ್ ಮಾಡಿದ್ದರು. ಆಗ ಡ್ಯಾರನ್ ಲೇಹ್ಮನ್ ಡೈರೆಕ್ಟ್ ತ್ರೋ ಮೂಲಕ ಸೆಹವಾಗ್ ಅವರನ್ನು ರನೌಟ್ ಮಾಡಿ ಭಾರತದ ಅಂತಿಮ ಆಸೆಗೆ ತಣ್ಣೀರೆರಚಿದರು. ಅನಂತರ ದಿಢೀರ್ ಕುಸಿತ ಅನುಭವಿಸಿದ ಭಾರತ 234ಕ್ಕೆ ಆಲೌಟ್ ಆಯಿತು. ಇಲ್ಲಿ ಗಂಗೂಲಿ ಪಡೆ 360 ರನ್ ಬಾರಿಸುತ್ತಿತ್ತು ಎಂದೇನೂ ಅಲ್ಲ, ಸೆಹವಾಗ್ ಕ್ರೀಸ್ ಆಕ್ರಮಿಸಿಕೊಂಡಿದ್ದೇ ಆದಲ್ಲಿ ಆಸ್ಟ್ರೇಲಿಯಕ್ಕೆ ಖಂಡಿತವಾಗಿಯೂ ಅಪಾಯವಿತ್ತು ಎಂಬುದು ಮಾತ್ರ ಸತ್ಯ.
2019ರ ವಿಶ್ವಕಪ್ ಸೆಮಿಫೈನಲ್. ಸ್ಥಳ ಮ್ಯಾಂಚೆಸ್ಟರ್. ಭಾರತಕ್ಕೆ ಇಲ್ಲಿ 239 ರನ್ ಚೇಸಿಂಗ್ ಲಭಿಸಿತ್ತು. 5 ರನ್ನಿಗೆ 3 ವಿಕೆಟ್ ಕಳೆದುಕೊಂಡ ಕೊಹ್ಲಿ ಬಳಗಕ್ಕೆ ಭಾರೀ ಗಂಡಾಂತರ ಎದುರಾಗಿತ್ತು. ಧೋನಿ-ಜಡೇಜ ಸೇರಿಕೊಂಡು ಇನ್ನಿಂಗ್ಸ್ ಕಟ್ಟತೊಡಗಿದರು. ಶತಕದ ಜತೆಯಾಟ ದಾಖಲಾಯಿತು. ಜಡೇಜ ನಿರ್ಗಮನದ ಬಳಿಕವೂ ಧೋನಿ ಹೋರಾಟವನ್ನು ಜಾರಿಯಲ್ಲಿರಿಸಿದ್ದರು. 49ನೇ ಓವರ್‌ನಲ್ಲಿ ಧೋನಿ ಅರ್ಧ ಶತಕ ಪೂರೈಸಿದ ಬೆನ್ನಲ್ಲೇ ಮಾರ್ಟಿನ್ ಗಪ್ಟಿಲ್ ಕಂಟಕವಾಗಿ ಕಾಡಿದರು. ನೇರ ಎಸೆತದ ಮೂಲಕ ಧೋನಿಯನ್ನು ರನೌಟ್ ಮಾಡಿದರು. ಅಲ್ಲಿಗೆ ಭಾರತದ ಫೈನಲ್ ಕನಸು ಕಮರಿ ಹೋಯಿತು.