ಶಬರಿಮಲೆ: ಶಬರಿಮಲೆಯ ಅಯ್ಯಪ್ಪ ಸ್ವಾಮಿಗೆ ಜೋಗುಳದ ಹಾಡು “ಹರಿವ ರಾಸನಂ’ನಲ್ಲಿ ಬದಲಾವಣೆ ಮಾಡಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮುಂದಾಗಿದೆ. ಹಾಡಿನ ಮೂಲ ರೂಪದಲ್ಲಿರುವ ಕೆಲವೊಂದು ಶಬ್ದಗಳು ಈಗಿನ ಹಾಡಿನಲ್ಲಿ ಇಲ್ಲ. ಜತೆಗೆ ಕೆಲ ಶಬ್ದಗಳು ತಪ್ಪಾಗಿ ಉಚ್ಚಾ ರಣೆ ಯಾಗಿ ರು ವುದನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ.
ಸದ್ಯ ಇರುವ ಹಾಡನ್ನು ಹಾಡಿದ್ದು ಡಾ| ಕೆ.ಜೆ.ಯೇಸುದಾಸ್ ಮತ್ತು ರಾಗ ಸಂಯೋ ಜನೆ ಮಾಡಿದ್ದು ದಿ| ಜಿ. ದೇವರಾಜನ್. ಹಿಂದೊಮ್ಮೆ ಯೇಸು ದಾಸ್ ಅವರೇ ಸಾಹಿತ್ಯದಲ್ಲಿ ಬದಲಾ ಗಬೇಕು ಎಂದು ಸಲಹೆ ನೀಡಿದ್ದರು. ಜತೆಗೆ “ಅರಿವಿಮ ರ್ದನಂ’ ಎಂಬ ಪದವನ್ನು ಹಾಡುವ ವೇಳೆ ಪ್ರತ್ಯೇಕವಾಗಿ ಉಚ್ಚರಿ ಸಬೇಕು ಎಂದು ಹೇಳಿ ದ್ದರು. ಜನಪ್ರಿಯ ಗಾಯಕ 1975ರಲ್ಲಿ ತೆರೆ ಕಂಡಿದ್ದ “ಸ್ವಾಮಿ ಅಯ್ಯಪ್ಪನ್’ ಸಿನಿಮಾದಲ್ಲಿ ಈ ಹಾಡನ್ನು ಹಾಡಿದ್ದರು. ಸದ್ಯ ಯೇಸುದಾಸ್ ಅಮೆ ರಿಕ ಪ್ರವಾಸದಲ್ಲಿದ್ದಾರೆ. ಮಾಸಾಂತ್ಯಕ್ಕೆ ಕೇರ ಳಕ್ಕೆ ಬರಲಿದ್ದು, ಆಗ ಹಾಡನ್ನು ಮತ್ತೂಮ್ಮೆ ರೆಕಾರ್ಡ್ ಮಾಡುವ ಬಗ್ಗೆ ಅವರ ಜತೆ ಚರ್ಚಿಸಬಹುದು ಎಂದು ಟಿಡಿಬಿಯ ಹೊಸ ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದ್ದಾರೆ.
1920ರಲ್ಲಿಯೇ ಹಾಲಿ ಇರುವ ಹಾಡು ರಚನೆಯಾಗಿತ್ತು ಎಂದು ನಂಬಲಾಗಿದೆ. ಸಂಗೀತಕ್ಕೆ ಅಳವಡಿಸುವ ವೇಳೆ ಕೆಲ ಅಂಶಗಳನ್ನು ಕೈಬಿಟ್ಟಿರಬಹುದು. ಕೊನ್ನಾ ಕತ್ತು ಜಾನಕಿ ಅಮ್ಮ ಎಂಬುವರು ಈ ಹಾಡು ರಚಿಸಿದ್ದಾರೆ ಎಂದು ಹೇಳಲಾ ಗುತ್ತಿದೆ. ಇದುವರೆಗಿನ ದಾಖಲೆ ಪ್ರಕಾರ ಕಂಬ ಕುಡಿ ಕುಲತ್ತೂರ್ ಶ್ರೀನಿವಾಸ ಅಯ್ಯರ್ “ಹರಿವರಾಸನಂ’ ಹಾಡು ಬರೆದ ಬಗ್ಗೆ ಲಿಖೀತ ದಾಖಲೆಗಳೇ ಇವೆ.
ಅಯ್ಯಪ್ಪನ ಸ್ಟಾಂಪ್‌ಮೇಲೆ ಫೋಟೋ
ಅಂಚೆ ಇಲಾಖೆಯ ಐದು ರೂ.ಗಳ ಸ್ಟಾಂಪ್‌ನಲ್ಲಿ ಫೋಟೋ ಬರಬೇಕೆ? ಹಾಗಿದ್ದರೆ ನೀವು ಶಬರಿಮಲೆ ದೇಗುಲದ ಅಂಚೆ ಕಚೇರಿಗೆ ಬರಬೇಕು. ಹಾಲಿ ಸಾಲಿನಲ್ಲಿ ದೇಗುಲ ತೆರೆಯುತ್ತಿದ್ದಂತೆ ಅಂದರೆ ನ.16ರಿಂದಲೇ ಈ ವ್ಯವಸ್ಥೆ ಆರಂಭಿಸಲಾಗಿದೆ.
ಒಂದು ಸೆಟ್ ಅಂದರೆ 12 ಫೋಟೋಗಳು ಬರುತ್ತವೆ. ಸ್ಟಾಂಪ್‌ಗೆ 5 ರೂ. ಆದರೂ, ಫೋಟೋ ತೆಗೆ ಯು ವುದು, ಪ್ರಿಂಟಿಂಗ್ ಸೇರಿ ಒಟ್ಟು ವೆಚ್ಚ 300 ರೂ. ಆಗುತ್ತದೆ ಎಂದು ಅಂಚೆ ಕಚೇರಿಯ ಅಧಿಕಾರಿ ಅನಿಲ್‌ಕುಮಾರ್ ತಿಳಿಸಿದ್ದಾರೆ. ಅವರ ಪ್ರಕಾರ ಹೆಚ್ಚಿನವರಿಗೆ ಈ ವ್ಯವಸ್ಥೆ ಬಗ್ಗೆ ಮಾಹಿತಿ ಇಲ್ಲ. ಸದ್ಯ ದಿನಕ್ಕೆ 50 ಮಂದಿ ಭೇಟಿ ನೀಡುತ್ತಿದ್ದಾರೆ. ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿಕೊ ಡಬೇಕು. ಈ ಪ್ರಕ್ರಿಯೆ ಮುಕ್ತಾಯಕ್ಕೆ 10 ನಿಮಿಷ ಬೇಕು ಎಂದವರು ಹೇಳಿದ್ದಾರೆ. ಈ ಅಂಚೇ ಕಚೇರಿ ದೇಗುಲ ತೆರೆದ ಸಂದ ರ್ಭಗಳಲ್ಲಿ ಮಾತ್ರ ಕೆಲಸ ನಿರ್ವಹಿಸುತ್ತದೆ.