Advertisement

ಸಂಘಟನಾ ಸರದಾರ ಐಕಳ ಹರೀಶ್‌ ಶೆಟ್ಟಿ ರಾಜಕಿಯಕ್ಕೆ ?

05:23 PM Mar 03, 2017 | |

ಮುಂಬಯಿ: ನಗರದ ಸಮಾಜ ಸೇವಕ, 2011ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸಮರ್ಥ ಸಂಘಟಕ, ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರಿಗೆ ಕರ್ನಾಟಕ ರಾಜ್ಯದ ಮುಂಬರುವ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ವಿವಿಧ ಪಕ್ಷಗಳಿಂದ ಬುಲಾವ್‌ ಬಂದಿರುವುದಾಗಿ ಮೂಲಗಳು ತಿಳಿಸಿವೆ.

Advertisement

2018ರ ಮಧ್ಯಾಂತರದಲ್ಲಿ ಕರ್ನಾಟಕ ರಾಜ್ಯ ಸರಕಾರಕ್ಕಾಗಿನ ಚುನಾವಣೆಯನ್ನು ಎದುರಿಸಲು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಮುಖಂಡರು ಇದೀಗಲೇ ಸಜ್ಜಾಗಿದ್ದು, ವಿವಿಧ ಪಕ್ಷಗಳ ನಾಯಕರ‌‌ು ಪ್ರಭಾವಿ ಜನ ಪ್ರತಿನಿಧಿಗಳನ್ನು ತಮ್ಮ ತಮ್ಮ ಪಕ್ಷಗಳತ್ತ ಸೆಳೆಯಲು ಕಸರತ್ತು ನಡೆಸುತ್ತಿವೆ.

ಅದರಂತೆಯೇ ಮುಂಬಯಿಯಲ್ಲಿನ ಯುವ ಸಂಘಟಕ, ಪ್ರಭಾವಿ ನೇತಾರ ಐಕಳ ಹರೀಶ್‌ ಶೆಟ್ಟಿ ಅವರನ್ನು ತವರೂರ‌ ಮೂಲ್ಕಿ-ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಮುಖಂಡರು ಸಂಪರ್ಕಿಸಿರುವುದಾಗಿ ತಿಳಿದು ಬಂದಿದೆ.

ಮುಂದಿನ ಸರಕಾರವನ್ನು ನಾವೇ ರಚಿಸುವುದಾಗಿ ಭರವಸೆಯಲ್ಲಿರುವ ಭಾರತೀಯ ಜನತಾ ಪಕ್ಷ 1962 ರಲ್ಲಿ ಸ್ಥಾಪಿತ ಮೂಡಬಿದ್ರೆ ಕ್ಷೇತ್ರ ಸದ್ಯ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ 1994 ರಿಂದ ಸತತ ಐದು ಬಾರಿಯೂ ಕಾಂಗ್ರೆಸ್‌ (ಐ) ಪಕ್ಷವು ಅಧಿಕಾರವನ್ನು ಧಕ್ಕಿಸಿ ಕೊಂಡಿರುವುದನ್ನು ಸೂಕ್ಷ¾ವಾಗಿ ಪರಿಗಣಿಸಿದ್ದು,  2013 ರ ಚುನಾವಣೆಯಲ್ಲಿ ಬಿಜೆಪಿ 4,550 ಮತಗಳಿಂದ ಪರಾಭವಗೊಂಡಿದ್ದನ್ನು ಗಮನಿಸಿ ಈ ಬಾರಿ ಈ ಕ್ಷೇತ್ರವನ್ನು ಗೆದ್ದೆ ಸಿದ್ಧ ಎನ್ನುವಂತೆ ಸ್ಥಾನೀಯ ಪ್ರಭಾವೀ ನಾಯಕರ ಹುಡುಕಾಟದಲ್ಲಿದೆ ಎನ್ನಲಾಗಿದ್ದು, ಬಲ್ಲ ಮೂಲಗಳ ಪ್ರಕಾರ ಐಕಳ ಹರೀಶ್‌ ಅವರನ್ನು ಬಿಜೆಪಿ ಪಕ್ಷದ ಮುಖಂಡರು ಆಹ್ವಾನಿಸಿದ್ದು ಈ ಬಗ್ಗೆ ನಗರದಾದ್ಯಂತ ಕುತೂಹಲ ಮೂಡಿದೆ ಎನ್ನಲಾಗಿದೆ.

ಬಂಟ ಸಮಾಜದ ಧೀಮಂತ ಸಂಘಟಕರಾಗಿರುವ ಐಕಳ ಹರೀಶ್‌ ಶೆಟ್ಟಿ ಅವರು ಎಲ್ಲಾ ಸಮಾಜ  ಬಾಂಧವರು, ಜನಸಾಮಾನ್ಯರೊಂದಿಗೆ  ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಎಲ್ಲಾ ಸಮಾಜಗಳ ಹಿತಕ್ಕಾಗಿ ಶ್ರಮಿಸಿ ಪ್ರಸಿದ್ಧರಾಗಿದ್ದಾರೆ. ಅಪಾರ ಹಿತೈಷಿಗಳು, ಅಭಿಮಾನಿ ಬಳಗದಿಂದ ಗೌರವಕ್ಕೆ ಪಾತ್ರರಾಗಿರುವ ಅವರ ಸಾಧನಶೀಲ ಗುಣ ಯುವಕರಿಗೆ ಪ್ರೇರಣೆಯಾಗಿದ್ದು, ಸಮಾಜ ಸೇವೆಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡ ಅವರ ಸಿದ್ಧಿ-ಸಾಧನೆಗಳಿಗೆ ದೇಶ-ವಿದೇಶಗಳ ಪುರಸ್ಕಾರವೂ ಲಭಿಸಿದೆ. ಹೊರನಾಡ ಕರ್ಮಭೂಮಿ ಬೃಹನ್ಮುಂಬಯಿಯಲ್ಲಿ ಶ್ರೇಷ್ಠ ಸಮಾಜ ಸೇವಕರಾಗಿದ್ದು, ಸಾಮಾಜಿಕ ಕ್ಷೇತ್ರಕ್ಕೆ ಜೀವನವನ್ನೇ ಮುಡುಪಾಗಿರಿಸಿ ಪ್ರಸ್ತುತ ಶಾಸಕ ಅಭ್ಯರ್ಥಿ ಸ್ಥಾನಮಾನ ಅಲಂಕರಿಸಲು ಯೋಗ್ಯವ್ಯಕ್ತಿಯಾಗಿದ್ದಾರೆ. ಮುಂಬಯಿಯಲ್ಲಿನ ಸಮಾಜ ಸೇವಕ, ಉದ್ಯಮಿ ಡಾ| ನಾರಾಯಣ ಆರ್‌. ಗೌಡ ಅವರು ಕೆ. ಆರ್‌. ಪೇಟೆ ಶಾಸಕರಾಗಿದ್ದು ಇದೀಗ ಐಕಳ ಅವರು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಜಯಗಳಿಸುವುದು ಖಚಿತ. ಐಕಳ ಹರೀಶ್‌ ಶೆಟ್ಟಿ ಅವರ ಶಾಸಕತ್ವದ ಸ್ಪರ್ಧೆ ನಮಗೆಲ್ಲರಿಗೂ ಅಭಿಮಾನ ತಂದಿದೆ ಎಂದು ಅವರ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next