ಮುಂಬಯಿ: ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ಹರೀಶ್ ಜಿ. ಅಮೀನ್ ಅವರು ಆಯ್ಕೆಯಾಗಿದ್ದಾರೆ. ಅಸೋಸಿ ಯೇಶನ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸು ತ್ತಿದ್ದ ಇವರು ಜ. 24ರಂದು ಜರಗಿದ ಕಾರ್ಯ ಕಾರಿ ಸಮಿತಿ ಸಭೆಯ ಶಿಫಾರಸಿನ ಮೇರೆಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಹರೀಶ್ ಜಿ. ಅಮೀನ್ ಕೊಡುಗೈ ದಾನಿಯಾಗಿದ್ದು, ಬಿಲ್ಲವ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುತ್ತಾ ಬಂದವರು. ಬಿಲ್ಲವರ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ, ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ನ ಮಾಜಿ ಕಾರ್ಯಾಧ್ಯಕ್ಷ ದಿ| ಜಯ ಸಿ. ಸುವರ್ಣ ಅವರ ನಿಕಟವರ್ತಿಯಾಗಿದ್ದು, ಎಲ್ಲ ಬಿಲ್ಲವರನ್ನು ಒಂದೇ ವೇದಿಕೆ ಅಡಿಯಲ್ಲಿ ತರುವಂತೆ ಪ್ರಯತ್ನಿಸಿ ಯಶಸ್ವಿಯಾದವರಲ್ಲಿ ಇವರೂ ಒಬ್ಬರು.
ಇವರು ಮೂಲತಃ ಸುರತ್ಕಲ್‌ನ ಮುಕ್ಕಭಂಡಾರ ಮನೆಯವರಾಗಿದ್ದಾರೆ. ಇವರು ಬಿ.ಕಾಂ. ಪದವೀಧರ ರಾಗಿದ್ದು, ಎಲೆಕ್ಟ್ರಿಕಲ್ ಎಂಜಿನಿ ಯರಿಂಗ್ ಹಾಗೂ ಹೊಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೋಮಾ ಮಾಡಿದ್ದಾರೆ. ಶ್ರೀ ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮಾ ಸಮಿತಿಯಲ್ಲಿ ಕಳೆದ 15 ವರ್ಷಗಳಿಂದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಬಿಲ್ಲವ ಚೇಂಬರ್ ಆಫ್ ಕಾಮರ್ಸ್‌ನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ಭಗವನಾಮ ಸಂಕೀರ್ತನೆಯಿಂದ ಮಾನಸಿಕ ನೆಮ್ಮದಿ
ಹರೀಶ್ ಜಿ. ಅಮೀನ್ ಅವರು ಕೀಸ್ ನೆಸ್ಟರ್ ಹೊಟೇಲ್ಸ್ ಪ್ರೈ. ಲಿ. ಅಂಧೇರಿ, ಬಿಜೀಸ್ ಹೊಟೇಲ್ಸ್ ಪ್ರೈ. ಲಿ. ಲೋನವಾಲ, ಗಾರ್ನಿಸ್ ಪೆನಿನ್ಸುಲಾ ರೆಸ್ಟೋರೆಂಟ್ ಅಂಧೇ ರಿ, ಕುಮಾರ್ ಆ್ಯಂಡ್ ಈಎಂಎಸ್ ಎಲೆಕ್ಟಿಕಲ್ಸ್ ಮತ್ತು ಎಂಜಿನಿ ಯರಿಂಗ್ ಪ್ರೈ. ಲಿ. ಮೊದಲಾದ ಸಂಸ್ಥೆಗಳಲ್ಲಿ ಮಾಲಕರಾಗಿ, ನಿರ್ದೇ ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಯೆಟ್ನಾಂನ ಐಕ್ಯಾನಿಕ್ ಅಚೀವರ್ ಕೌನ್ಸಿಲ್ ಇವರಿಗೆ ಅಂತಾರಾಷ್ಟ್ರೀಯ ಅಪ್ರತಿಮ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ ಕೌಲಾಲಂಪುರದ ಮರಿಯಮ್ಮನ್ ಟ್ರಸ್ಟಿ ವತಿಯಿಂದ “ಇಂಟರ್‌ನ್ಯಾಶನಲ್ ಮ್ಯಾನ್ ಆಫ್ ದ ಇಯರ್’ ಪುರಸ್ಕಾರ ದೊರಕಿದೆ.