“ಈಗಷ್ಟೇ ಶೂಟಿಂಗ್ ಮಾಡೋದಕ್ಕೆ ಪರ್ಮಿಷನ್ ಸಿಕ್ಕಿದೆ. ಶೂಟಿಂಗ್ ಮತ್ತೆ ಶುರುವಾಗಿರೋದಕ್ಕೆ ಖುಷಿಯಾಗ್ತಿದೆ. ಆದ್ರೆ ನನಗೆ ಶೂಟಿಂಗ್‌ಗೆ ಹೋಗಬೇಕಾದ್ರೆ, ಇನ್ನು ಒಂದು ವಾರವಾದ್ರೂ ಟೈಮ್ ಬೇಕಾಗುತ್ತದೆ. ನಾನು ಮಾಡುತ್ತಿರುವ ಎಲ್ಲ ಸಿನಿಮಾಗಳುಕೂಡ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಶುರು ಮಾಡುತ್ತಿರುವುದರಿಂದ, ನಾನು ಕೂಡ ಶೆಡ್ನೂಲ್ ಪ್ಲಾನ್ ಮಾಡಿಕೊಳ್ಳಬೇಕು. ನನಗೂ ಪ್ರಿಪರೇಷನ್‌ಗೆ ಸ್ವಲ್ಪ ಟೈಮ್ ಬೇಕಾಗುತ್ತದೆ’ ಇದು ನಟಿ ಹರಿಪ್ರಿಯಾ ಮಾತು.
ಹೌದು, ಇದೇ ಸೋಮವಾರದಿಂದ ಸಿನಿಮಾಗಳ ಶೂಟಿಂಗ್‌ಗೆ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ, ಒಂದಷ್ಟು ಸಿನಿಮಾಗಳು ಶೂಟಿಂಗ್ ಶುರು ಮಾಡಿದರೆ, ಇನ್ನುಕೆಲವು ಚಿತ್ರತಂಡಗಳು ಮುಂದಿನ ವಾರದಿಂದ ಶೂಟಿಂಗ್‌ಗೆ ಹೊರಡುವ ಯೋಚನೆಯಲ್ಲಿವೆ. ಚಿತ್ರದ ಕಲಾವಿದರು, ತಂತ್ರಜ್ಞರುಕೂಡ ಹಿಂದಿನಂತೆ ಮತ್ತೆ ಶೂಟಿಂಗ್ ಮೂಡ್‌ಗೆ ಜಾರುತ್ತಿದ್ದಾರೆ. ಅದರಂತೆ ನಟಿ ಹರಿಪ್ರಿಯಾ ಕೂಡ ತಮ್ಮ ಸಿನಿಮಾಗಳ ಶೂಟಿಂಗ್‌ಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಕೋವಿಡ್ ಫಸ್ಟ್ ಡೋಸ್ ವ್ಯಾಕ್ಸಿನೇಶನ್ ತೆಗೆದುಕೊಂಡಿರುವ ಹರಿಪ್ರಿಯಾ, ಮುಂದಿನ ವಾರದಿಂದ ಶೂಟಿಂಗ್‌ಗೆ ಹೊರಡುವ ಯೋಚನೆಯಲ್ಲಿದ್ದಾರೆ. ಈ ಬಗ್ಗೆ ಮಾತನಾಡುವ ಹರಿಪ್ರಿಯಾ, “ನಾನು ಪ್ರತಿ ಸಿನಿಮಾಕ್ಕೂ ಒಂದಷ್ಟು ಹೋಮ್ ವರ್ಕ್, ಪ್ರಿಪರೇಷನ್ ಮಾಡಿಕೊಳ್ಳುತ್ತೇನೆ. ಅದು ಮಧ್ಯದಲ್ಲಿ ಬ್ರೇಕ್ ಆದಾಗ ನನ್ನ ಡೇಟ್ಸ್, ಶೆಡ್ನೂಲಿಂಗ್ ಎಲ್ಲವೂ ವ್ಯತ್ಯಾಸವಾಗುತ್ತದೆ. ಈ ಬಾರಿಯೂ ಹಾಗೇ ಆಯ್ತು. ಇದ್ದಕ್ಕಿದ್ದಂತೆ ಲಾಕ್‌ಡೌನ್ ಅನೌನ್ಸ್ ಆಗಿದ್ದರಿಂದ, ನಾನು ಮಾಡಬೇಕಾಗಿದ್ದ ಸಿನಿಮಾಗಳ ಶೂಟಿಂಗ್ಸ್ ಮುಂದಕ್ಕೆ ಹೋಯ್ತು. ಈಗ ಮತ್ತೆ ಶೂಟಿಂಗ್ ಶುರುವಾಗಿದ್ದರಿಂದ, ಮತ್ತೆ ನನ್ನ ಡೇಟ್ಸ್, ಶೆಡ್ನೂಲಿಂಗ್ ಎಲ್ಲವನ್ನೂ ಪ್ಲಾನ್ ಮಾಡಿಕೊಳ್ಳಬೇಕು. ಸದ್ಯ ಈ ಕೆಲಸ ಮಾಡುತ್ತಿದ್ದು, ಮುಂದಿನ ವಾರದಿಂದ ಶೂಟಿಂಗ್ ಗೆ ಹೋಗುವ ಯೋಚನೆ ಇದೆ’ ಎನ್ನುತ್ತಾರೆ.
ಸದ್ಯ ಹರಿಪ್ರಿಯಾ ರಿಷಭ್ ಶೆಟ್ಟಿ ಅಭಿನಯದ “ಬೆಲ್‌ಬಾಟಂ-2′, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ “ಲಗಾಮ್’ ಸೇರಿದಂತೆ ಮೂರ್‍ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
ಜಿ. ಎಸ್. ಕಾರ್ತಿಕ ಸುಧನ್