Advertisement

ಉಪ್ಪಳ ಅಯ್ಯಪ್ಪ  ಮಂದಿರದಲ್ಲಿ  ಹರಿಕಥಾ ಸತ್ಸಂಗ

05:15 AM Jul 29, 2017 | Harsha Rao |

ಉಪ್ಪಳ: ಕರ್ಕಾಟಕ ಸಂಕ್ರಮಣದಿಂದ ಸಿಂಹ ಸಂಕ್ರಮಣದ ವರೆಗೆ 32 ದಿನಗಳ ಕಾಲ 32 ಶ್ರದ್ಧಾಕೇಂದ್ರಗಳಲ್ಲಿ ನಡೆಯಲಿರುವ ರಾಮಾಯಣ ಮಾಸಾಚರಣೆ ಹರಿಕಥಾ ಸತ್ಸಂಗದ 11ನೇ ದಿನ ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ ಯೋಗಾಚಾರ್ಯ ಹರಿದಾಸ ಪುಂಡರೀಕಾಕ್ಷ  ಬೆಳ್ಳೂರು ಅವರಿಂದ ರಾಮಾಯಣದ ಕಥೆಯ ಮುಂದುವರಿದ ಭಾಗ “ಶಬರಿ ಆತಿಥ್ಯ’ ಕಥಾಭಾಗ ನಡೆಯಿತು.

Advertisement

ಹಿಮ್ಮೇಳದಲ್ಲಿ  ಜಗದೀಶ್‌ ಮಂಗಲ್ಪಾಡಿ, ಪ್ರಕಾಶ್‌ ಆಚಾರ್ಯ ಕುಂಟಾರು ಸಹಕರಿಸಿದರು. ಪತ್ರಕರ್ತ ಜಗದೀಶ್‌ ಪ್ರತಾಪನಗರ ಸ್ವಾಗತಿಸಿದರು. ಶ್ರೀ ಅಯ್ಯಪ್ಪ  ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಶಿವಾನಂದ ವಂದಿಸಿದರು. ಕಾರ್ಯಕ್ರಮದಲ್ಲಿ  ರಾಮಾಯಣ ಮಾಸಾಚರಣೆ ಸಮಿತಿಯ ಪದಾಧಿಕಾರಿಗಳಾದ ಅಶೋಕ್‌ ಬಂದ್ಯೋಡು, ಸದಾಶಿವ ಕಡಂಬಾರು, ಪದ್ಮನಾಭ ಮಯ್ನಾಳ, ಯತಿರಾಜ್‌ ಕೆದುಂಬಾಡಿ ಮತ್ತು  ಭಜನಾ ಮಂದಿರದ ಪ್ರಮುಖರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next